ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದಲ್ಲಿ ಶುಕ್ರವಾರ ಚಕ್ರಕೋಡಿ ಕುಟುಂಬದಿಂದ ಸರ್ವಸೇವೆ ನಡೆಯಿತು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಡಾ.ಸುವರ್ಣಿನೀ ರಾವ್ ಕನ್ನಡದಲ್ಲಿ ಬರೆದ, ಆಂಗ್ಲಕ್ಕೆ ತರ್ಜುಮೆಗೊಂಡ ಜಟಾಯು-ಸಂಪಾತಿ ಪುಸ್ತಕ ಲೋಕಾರ್ಪಣೆಗೊಂಡಿತು. ವೇದದಲ್ಲಿ ವಿಶೇಷ ಸಾಧನೆ ಮಾಡಿದ ಗಣೇಶ್ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.
ಮಹಾಮಂಡಲದ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಪ್ರಧಾನ ಕಾರ್ಯದರ್ಶಿ ಎಸ್.ಎನ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ದೀಕ್ಷಾ ನಿರೂಪಿಸಿದರು.

Audio:

Download: Link

Facebook Comments