ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದಲ್ಲಿ ಶನಿವಾರ ಬೆಂಗಳೂರು ಮಂಡಲಾಂತರ್ಗತ ಗಿರಿನಗರ ಹಾಗೂ ವರ್ತೂರು ವಲಯದವರಿಂದ ಸರ್ವಸೇವೆ ನಡೆಯಿತು.
ನಂತರ ನಡೆದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಕೊರ್ಗಿ ಶಣ್ಕರನಾರಾಯಣ ಉಪಾಧ್ಯಾಯ ಬರೆದ ಜಾಂಬವಂತ ಪುಸ್ತಕ ಲೋಕಾರ್ಪಣೆಗೊಂಡಿತು. ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ಸಹನಾ ಹೆಗಡೆ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಅಂತಾರಾ‍ಷ್ಟ್ರೀಯ ಸಾಧನೆ ಮಾಡಿದ ಅಶ್ವಿನೀ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.
ಛಾತ್ರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಪ್ರಧಾನ ಕಾರ್ಯದರ್ಶಿ ಎಸ್.ಎನ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಪೂರ್ಣತ್ರಯೀ ರಾವ್ ಹಾಗೂ ಅರ್ಪಿತಾ ಹೆದ್ಲಿ ನಿರೂಪಿಸಿದರು

SRI_1417

SRI_1421

SRI_1424

SRI_1436

SRI_1451

SRI_1461

SRI_1467

SRI_1474

SRI_1497

Audio:

Download: Link

Video:

Facebook Comments