ಗೋವಿನ ಹೃದಯಾಕ್ರಂದನವನ್ನು ಅರ್ಥಮಾಡಿಕೊಳ್ಳದಿದ್ದರೆ ಸರ್ವನಾಶ ನಿಶ್ಚಿತ
ಗೋಚಾತುರ್ಮಾಸ್ಯದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಗೋಸಂದೇಶ

ಬೆಂಗಳೂರು : ಗೋವು ಕೇಳಿದ್ದನ್ನೆಲ್ಲಾ ಕೊಡುತ್ತದೆ. ಪುರಾಣದಲ್ಲಿ ಹೇಳಲಾದ ಕಾಮಧೇನು ಹೇಗೆ ಬೇಡಿದ್ದನ್ನೆಲ್ಲಾ ನೀಡುತ್ತದೆಯೋ, ಹಾಗೆಯೇ ದೇಶೀಯ ಗೋವುಗಳು ಕೂಡ ಎಲ್ಲವನ್ನು ನೀಡುತ್ತದೆ. ಆರೋಗ್ಯಕ್ಕೆ, ಸಂಪತ್ತಿಗೆ, ಪುಣ್ಯ ಸಂಪಾಧನೆಗೆ ಗೋವು ಮೂಲವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಅಂದು ಸುರಭಿ ಧೇನುವು ತನ್ನ ಮಕ್ಕಳಿಗೆ ಹೆಚ್ಚಿನ ಶ್ರಮ ನೀಡಿದ್ದಕ್ಕಾಗಿಯೇ ರೋಧಿಸಿತಂತೆ, ಇಂದು ಗರ್ಭದಲ್ಲಿ ಇರುವಾಗಲೇ ಗೋವನ್ನು ಹತ್ಯೆಮಾಡಲಾಗುತ್ತಿದ್ದೆ, ಇಂತಹ ಹೀನ ಕೃತ್ಯದಿಂದ ಆ ಸುರಭಿ ಮಾತೆಗೆ ಅದೆಷ್ಟು ನೋವಾಗಿರಬಹುದು ಎಂದು ಖೇದ ವ್ಯಕ್ತಪಡಿಸಿದ ಶ್ರೀಗಳು, ಗೋವಿನ ಹೃದಯಾಕ್ರಂದನವನ್ನು ಅರ್ಥಮಾಡಿಕೊಳ್ಳದಿದ್ದರೆ ಸರ್ವನಾಶ ನಿಶ್ಚಿತ ಎಂದು ಹೇಳಿದರು.
ಸರ್ಪಭೂಷಣ ಮಠದ ಶ್ರೀ ಮ| ನಿ| ಪ್ರ| ಮಲ್ಲಿಕಾರ್ಜುನ ಮಹಾಸ್ವಾಮಿಗಳವರು ಸಂತಸಂದೇಶ ನೀಡಿ, ಗೋವಿನೊಂದಿಗಿನ ಒಡನಾಟದಿಂದ ಬುದ್ಧಿ ಚುರುಕಾಗುತ್ತದೆ, ದಾರಿದ್ರ್ಯ ನಿವಾರಣೆ ಆಗುತ್ತದೆ. ಗೋವಿನ ತ್ಯಾಜವೂ ಕೂಡ ಅಮೂಲ್ಯವಾಗಿದ್ದು, ಗೋಹತ್ಯೆ ಅನ್ನುವುದು ಪಾಪಗಳ ಆಗರವಾಗಿದೆ. ಗೋರಕ್ಷಣೆಯಿಂದ ಒಳಿತಾಗುತ್ತದೆ ಎನ್ನುವುದಕ್ಕೆ ರಾಘವೇಶ್ವರ ಶ್ರೀಗಳೇ ಪ್ರತ್ಯಕ್ಷ ಉದಾಹರಣೆ, ಅವರ ಮೇಲೆ ಎಷ್ಟೆಲ್ಲಾ ಆಕ್ರಮಣಗಳಾದರೂ ಗೋಸೇವೆಯ ಪುಣ್ಯದಿಂದಾಗಿ ಅವರಿಗೆ ಏನು ಆಗಲಿಲ್ಲ ಎಂದರು.

ಕೃಷಿತಜ್ಞ ರಮೇಶ್ರಾಜು ಮಂಡ್ಯ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾಪುರಸ್ಕಾರವನ್ನು ಸ್ವೀಕರಿಸಿ ಗೋ ಆಧಾರಿತ ಕೃಷಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೀಣ್ಯ ಭಾಗದ ಹಲವು ಉದ್ಯಮಿಗಳು ಶ್ರೀಗಳಿಗೆ ಫಲ ಸಮರ್ಪಿಸಿ, ಆಶೀರ್ವಾದವನ್ನು ಪಡೆದರು. ಶ್ರೀಭಾರತೀಪ್ರಕಾಶನವು ಹೊರತಂದ ‘ವಿಚಾರ ವಿಹಾರ ಭಾಗ 2’ ಪುಸ್ತಕವನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಶ್ರೀಮಲ್ಲಿಕಾರ್ಜುನ ಸ್ವಾಮಿಗಳವರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಕ್ಷಮಾ ಕಿರಣ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪೋಳ್ಯಮಠ ರಾಮಚಂದ್ರ ಭಟ್ ಕುಟುಂಬದವರಿಂದ ಸರ್ವಸೇವೆ ನೆರವೆರಿತು. ಮಹಾವಿಷ್ಣು ಸಹಸ್ರನಾಮ ಭಜನಾ ಮಂಡಳಿ,ಯಲಹಂಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು, ಯಜುರುಪಾಕರ್ಮ ಕಾರ್ಯಕ್ರಮ, ಪುರುಷಸೂಕ್ಥ ಹವನ ಸಂಪನ್ನವಾಯಿತು. ಶ್ರೀಮಠದ ಪದಾಧಿಕಾರಿಗಳು, ಭಜನಾಮಂಡಳಿ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಸತ್ಯನಾರಾಯಣ ಭಟ್ ಹಾಗೂ ರಾಘವೇಂದ್ರ ಕಡ್ನಮನೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಕೋಟ್ಸ್

ಗೋವು ಕೇಳಿದ್ದನ್ನೆಲ್ಲಾ ಕೊಡುತ್ತದೆ. ಪುರಾಣದಲ್ಲಿ ಹೇಳಲಾದ ಕಾಮಧೇನು ಹೇಗೆ ಬೇಡಿದ್ದನ್ನೆಲ್ಲಾ ನೀಡುತ್ತದೆಯೋ, ಹಾಗೆಯೇ ದೇಶೀಯ ಗೋವುಗಳು ಕೂಡ ಎಲ್ಲವನ್ನು ನೀಡುತ್ತದೆ. ಆರೋಗ್ಯಕ್ಕೆ, ಸಂಪತ್ತಿಗೆ, ಪುಣ್ಯ ಸಂಪಾಧನೆಗೆ ಗೋವು ಮೂಲ
– ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ

ಗೋರಕ್ಷಣೆಯಿಂದ ಒಳಿತಾಗುತ್ತದೆ ಎನ್ನುವುದಕ್ಕೆ ರಾಘವೇಶ್ವರ ಶ್ರೀಗಳೇ ಪ್ರತ್ಯಕ್ಷ ಉದಾಹರಣೆ, ಅವರ ಮೇಲೆ ಎಷ್ಟೆಲ್ಲಾ ಆಕ್ರಮಣಗಳಾದರೂ ಗೋಸೇವೆಯ ಪುಣ್ಯದಿಂದಾಗಿ ಅವರಿಗೆ ಏನು ಆಗಲಿಲ್ಲ
– ಸರ್ಪಭೂಷಣ ಮಠದ ಶ್ರೀ ಮ| ನಿ| ಪ್ರ| ಮಲ್ಲಿಕಾರ್ಜುನ ಮಹಾಸ್ವಾಮಿಗಳವರು

• ಕೃಷಿ ತಜ್ಞ ರಮೇಶ್ರಾಜು ಮಂಡ್ಯ ಇವರಿಗೆ ಗೋ ಸೇವಾ ಪುರಸ್ಕಾರ ಪ್ರದಾನ
• ಶ್ರೀಭಾರತೀಪ್ರಕಾಶನದ ‘ವಿಚಾರ ವಿಹಾರ ಭಾಗ 2’ ಪುಸ್ತಕ ಲೋಕಾರ್ಪಣೆ
ಪೀಣ್ಯ ಭಾಗದ ಉದ್ಯಮಿಗಳು ಶ್ರೀಗಳಿಗೆ ಫಲ ಸಮರ್ಪಿಸಿ, ಆಶೀರ್ವಾದವನ್ನು ಪಡೆದರು
ಕಲಾರಾಮ – ಹಿಂದೂಸ್ಥಾನಿ ಸಂಗೀತ
ಖ್ಯಾತ ಹಿಂದೂಸ್ಥಾನಿ ಗಾಯಕರಾದ ಅಶೋಕ ಹುಗ್ಗಣ್ಣನವರ್ ಹಾಗೂ ಸಂಗಡಿಗರಿಂದ ದಿನಾಂಕ 19.08.2016 ರಂದು ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಶೋಕ ಹುಗ್ಗಣ್ಣನವರ್ ಅವರು ಹೊನ್ನಾವರದ ಎಸ್ ಡಿ ಎಂ ವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದಾರೆ. ಗಂಗೂಬಾಯಿ ಹಾನಗಲ್ ಅವರ ಕುರಿತಾಗಿ ಸಂಶೋಧನೆಯನ್ನು ಮಾಡಿ ಡಾಕ್ಟರೇಟ್ ಪಡೆದಿರುವ ಇವರು, ಲಿಂಗರಾಜ್ ಬುವಾ ಹಾಗೂ ಕಿರಾಣಾ ಘರಾನ ಅವರ ಶಿಷ್ಯರಾಗಿದ್ದಾರೆ. ಕಲಾರಾಮದ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರವಣ ಪೋತದಾರ್ ಹಾರ್ಮೋನಿಯಂನಲ್ಲಿ ಹಾಗೂ ಜಗದೀಶ ಕುರ್ತುಕೋಟಿ ತಬಲಾದಲ್ಲಿ ಸಾಥ್ ನೀಡಲಿದ್ದಾರೆ.

ಇಂದಿನ ಕಾರ್ಯಕ್ರಮ (19-08-2016):
ಬೆಳಗ್ಗೆ 7.00 : ಕಾಮಧೇನು ಹವನ, ಗಾಯತ್ರೀ ಜಪ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.30:
ಗೋಸಂದೇಶ : ತುರುಗೋಳ್ – ಡಾ. ಪರಮಶಿವಮೂರ್ತಿ ತುಮಕೂರು
ಸಂರಕ್ಷಣೆ – ಬೈರೂಲಾಲ್ ಜೈನ್
ಲೋಕಾರ್ಪಣೆ : ಸಾಮ ಕಲ್ಪ ಧೃಮ – ಸಂಗ್ರಹ ವೇ.ಮೂ. ಸುಬ್ರಾಯ ಭಟ್ ಆರೋಳ್ಳಿ : ಪುಸ್ತಕ
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ :
ಭಾಜನರು – ಡಾ. ಪರಮಶಿವಮೂರ್ತಿ ತುಮಕೂರು ಹಾಗೂ ಬೈರೂಲಾಲ್ ಜೈನ್
ಸಂತ ಸಂದೇಶ : ಪರಮಪೂಜ್ಯ ಅಭಿನವ ಶ್ರೀ ಹಾಲವೀರಪ್ಪಜ್ಜ ಹಾಲಸ್ವಾಮಿಗಳು,
ಶ್ರೀ ಹಾಲೇಶ್ವರ ಮಠ, ಹಿರೇಹಡಗಲಿ, ಬಳ್ಳಾರಿ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00: ಕಲಾರಾಮ : ಹಿಂದೂಸ್ಥಾನಿ ಗಾಯನ – ಡಾ. ಅಶೋಕ್ ಹುಗ್ಗಣ್ಣನವರ್
ಹಾರ್ಮೋನಿಯಂ : ಶ್ರವಣ್ ಪೋತದಾರ್
ತಬಲಾ : ಜಗದೀಶ ಕುರ್ತುಕೋಟಿ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments