ಶ್ರೀ ರಾಮಾಶ್ರಮ, ಬೆಂಗಳೂರು 30/08/2 015

ಬೆಳಗ್ಗೆ:
~
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ  ಕುಮಾರ್ ಅಜೇಯ

~
ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗರುಡ’ ಪುಸ್ತಕ

~
ಸರ್ವಸೇವೆ :  ಬೆಂಗಳೂರು ಮಂಡಲಾಂತರ್ಗತ ರಾಜಮಲ್ಲೇಶ್ವರ, ಯಲಹಂಕ ವಲಯದವರಿಂದ ಸರ್ವಸೇವೆ ನಡೆಯಿತು.

ಧರ್ಮಸಭೆ
ಒಬ್ಬ ಗುರುವಿಗೆ ಪಂಚಭೂತಗಳ ಗುಣ ಇರಬೇಕಾಗುತ್ತದೆ. ಭೂಮಿಯಂತೆ ಎಲ್ಲವನ್ನೂ ತಾಳಿಕೊಳ್ಳುವ ಸಹನೆ, ಜೀರ್ಣಿಸಿಕೊಳ್ಳುವ ಸಾಮರ್ಥ್ಯ, ಜಲದಂತೆ ಸ್ವಯಂ ಶುದ್ಧತೆ ಹಾಗೂ ಇತರರನ್ನು ಶುದ್ಧಗೊಳಿಸುವ ಬಲ, ಅಗ್ನಿಯಂತೆ ತಾನು ಉರಿದು, ಸಮಾಜಕ್ಕೆ ಬೆಳಕನ್ನೀಯುವ ಗುಣ, ವಾಯುವಿನಂತೆ ಸಮಾಜ ಕಾರ್ಯಕ್ಕಾಗಿ ಕ್ರಿಯಾಶೀಲತೆ ಹಾಗೂ ಆಕಾಶದಂತೆ ತನ್ನಲ್ಲಿಯೇ ಎಲ್ಲವೂ ಇದ್ದರೂ, ನಿರ್ಲಿಪ್ತತೆ ಗುರುವಿಗೆ ಅತಿ ಮುಖ್ಯ
ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಶ್ರೀ ಆಶೀರ್ವಚನ ನೀಡಿದರು.
ಭಾನುವಾರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಭಾರತೀ ಪ್ರಕಾಶನದಿಂದ ಪ್ರಕಟವಾದ ‘ಗರುಡ’ ಪುಸ್ತಕ ಲೋಕಾರ್ಪಣ ಸಮಾರಂಭದಲ್ಲಿ ಮಾತನಾಡಿದರು.
ಆಕಾಶದಲ್ಲಿ ಮಳೆ ಬಂದರೂ ಆಕಾಶ ಒದ್ದೆಯಾಗುವುದಿಲ್ಲ, ಬಿಸಿಲಿಗೆ ಆಕಾಶ ಬಾಡುವುದಿಲ್ಲ,ಸಿಡಿಲು-ಗುಡುಗುಗಳಿಗೆ ಉರಿದು ಹೋಗುವಿದಿಲ್ಲ. ಹಾಗೆಯೇ ಆಕಾಶಕ್ಕೆ ಉಗಿದರೆ, ಆಕಾಶಕ್ಕೇನೂ ಆಗುವುದಿಲ್ಲ ಆದರೆ ಉಗಿದವನ ಮುಖವೇ ಮಲಿನವಾಗುತ್ತದೆ ಎಂದರು.
ಮರಕ್ಕೂ ಮಠಕ್ಕೂ ಒಂದು ಬಿಂದುವಿನಷ್ಟೇ ವ್ಯತ್ಯಾಸ. ಮರ ಬಿಸಿಲಲ್ಲಿಯೇ ಇರುತ್ತದೆ. ಅದಕ್ಕೆ ಕಲ್ಲಿನಲ್ಲಿ ಹೊಡೆಯಲಾಗುತ್ತದೆ. ಗೊಬ್ಬರ ಹಾಕಲಾಗುತ್ತದೆ. ಆದರೆ ಅದು ಕೊಡುವುದು ಫಲವನ್ನು ಮಾತ್ರ. ಹಾಗೆಯೇ ಮಠ ಕೂಡ ಕಷ್ಟಗಳನ್ನು ಸಹಿಸಿಕೊಂಡು, ಒಳಿತನ್ನೇ ಸಮಾಜಕ್ಕೆ ನೀಡುತ್ತದೆ ಎಂದ ಅವರು, ಯಾಕೆ ಮರಕ್ಕೆ ಜನರು ಕಲ್ಲು ಹೊಡೆಯುತ್ತಾರೆಂದರೆ, ಅವರಲ್ಲಿರುವುದು ಕಲ್ಲು. ಮರ ಯಾಕೆ ಫಲ ಕೊಡುತ್ತದೆ ಎಂದರೆ, ಅದರಲ್ಲಿರುವುದು ಫಲ ಮಾತ್ರ ಎಂದು ನುಡಿದರು.
ಎರಡು ಸುಳ್ಳು ಸೇರಿದರೆ ಎಂದೂ ಸತ್ಯವಾಗುವುದಿಲ್ಲ. ಇಲ್ಲದ ಸುಳ್ಳಿಗೇಕೆ ಭಯ? ಸುಳ್ಳು ಎಂದರೆ ಇಲ್ಲದ್ದು ಎಂದೇ ಅರ್ಥ. ಅದೇ ಇಲ್ಲ… ಎಂದೂ ಇಲ್ಲದ ಅದು ಎಂದೂ ಇರುವುದನ್ನು ಏನೂ ಮಾಡಲಾಗದು. ಸುಳ್ಳು ಎಷ್ಟೇ ಆದರೂ ಅದು ಸೊನ್ನೆಯೇ. ಅದಕ್ಕೆ ಉಪೇಕ್ಷೆಯಂತಹ ಪ್ರತಿಕ್ರಿಯೆ ಯಾವುದೂ ಇಲ್ಲ ಎಂದ ಅವರು, ಪರೀಕ್ಷೆ ಬರುವುದು ಮೇಲಿನ ತರಗತಿಗೆ ಉತ್ತೀರ್ಣಗೊಳಿಸಲು. ನಮಗೆ ಮೇಲಿನ ತರಗತಿಗೆ ಹೋಗಬೇಕು ಎಂದರೆ ಪರೀಕ್ಷೆ ಎದುರಿಸುವುದು ಅನಿವಾರ್ಯ. ಎಲ್ಲರೂ ಸೇರಿ ಪರೀಕ್ಷೆ ಎದುರಿಸೋಣ ಎಂದು ಕರೆ ನೀಡಿದರು.
ಬೆಂಗಳೂರು ಮಂಡಲದ ರಾಜಮಲ್ಲೇಶ್ವರ, ಯಲಹಂಕ ವಲಯಗಳಿಂದ ಸರ್ವಸೇವೆ ನಡೆಯಿತು. ಮಾಜಿ ಶಾಸಕ ಆರ್ ಎಸ್ ಭಾಗವತ್, ಜೆಡಿಎಸ್ ಮುಖಂಡ ರಮಾನಾಥ ಹೆಗಡೆ, ಐಸಿಐಸಿಐ ಬ್ಯಾಂಕ್ ಹಿರಿಯ ಅಧಿಕಾರಿ ಎಸ್.ಎಸ್ ಹೆಗಡೆ, ಹಲವಾರು ಕಲಾವಿದರು, ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು. ದೇಶದ ಮೂಲೇ ಮೂಲೆಯಿಂದ ಆಗಮಿಸಿದ್ದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.

SRI_1056

Chatru Puraskara

SRI_1036

Chatru Puraskara

Audio:

Download: Link

Video:

Facebook Comments