ಶ್ರೀ ರಾಮಾಶ್ರಮ, ಬೆಂಗಳೂರು 29/08/2 015

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಚೆಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಮುಂಬಯಿಯ ಅವತಂಶು ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.

~

ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗಜೇಂದ್ರಮೋಕ್ಷ’ ಪುಸ್ತಕದ ಲೋಕಾರ್ಪಣೆ

~
ಸರ್ವಸೇವೆ :  ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲ್, ಕುಂಬಳೆ, ಗುಂಪೆ, ಕಾಸರಗೋಡು ವಲಯದವರಿಂದ ಸರ್ವಸೇವೆ ನಡೆಯಿತು.

 

~

ಧರ್ಮಸಭೆ:

ಈ ಜಗತ್ತು ಈಶ್ವರನ ರೂಪ. ಹಾಗಾಗಿ ಈ ಜಗತ್ತಿಗೆ ಏನು ಕೊಡುತ್ತೀರೋ ಅದೇ ಪ್ರಸಾದ ರೂಪವಾಗಿ ಸಿಗುತ್ತದೆ. ನಾನೇಕೆ ಹೀಗೆ? ನನಗೇಕೆ ಈ ಕಷ್ಟ ? ಎಂದು ಪ್ರಶ್ನಿಸಿದರೆ, ನೀವು ಮಾಡಿದ್ದೇ ವಾಪಾಸ್ ಬಂದಿದೆ. ಹಾಗಾಗಿ ನೀವು ಹಾಗೆ ಎಂದು ಹೇಳಬೇಕಾಗುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಶ್ರೀಗಳು ಹೇಳಿದರು.
ಗುರುವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಇಪ್ಪತ್ತೊಂಬತ್ತನೇ ದಿನದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ಗಜೇಂದ್ರಮೋಕ್ಷ’ ಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ನೀ ಎಷ್ಟು ಕೊಟ್ಟೆಯೋ ಅಷ್ಟು ನಿನಗೆ, ನೀ ಏನು ಕೊಟ್ಟೆಯೋ ಅದು ನಿನಗೆ ಎನ್ನುವುದು ವಿಧಿಯ ನಿಯಮ. ಹಾಗಾಗಿ ನಿಮಗೆ ಒಳಿತು ಬೇಕೆಂದರೆ ಸಮಾಜಕ್ಕೆ ಒಳಿತು ಕೊಡುವುದು ಅನಿವಾರ್ಯ. ಬದುಕಿನಲ್ಲಿ ಬರುವ ಪ್ರತಿ ವ್ಯಕ್ತಿಗಳಿಗೆ ಒಳಿತನ್ನೆ ಮಾಡಿ. ಆಗ ನಿಮ್ಮ ಬದುಕಿನಲ್ಲಿ ಒಳಿತಾಗುತ್ತದೆ ಎಂದು ನುಡಿದರು.
ಜೀವನಕ್ಕೊಂದು ಸೂತ್ರ ಮುಖ್ಯ. ಧರ್ಮ, ಆಚಾರ, ಗುರು, ಸಮಾಜ ಮುಂತಾದ ಸೂತ್ರಗಳೊಂದಿಗೆ ಜೀವಿಸಿದೆ ಚೆನ್ನ. ಹಾಗೆಯೇ ಅದು ಬದುಕಿಗೊಂದು ಧೈರ್ಯ ಕೊಡುತ್ತದೆ. ಇಂತಹ ಸೂತ್ರಗಳನ್ನು ಧಿಕ್ಕರಿಸಿ ಜೀವಿಸುವುದು ಹೆಮ್ಮೆಯಲ್ಲ. ಸಂತೆಯಲ್ಲಿ ತಾಯಿಯಿಂದ ತಪ್ಪಿಸಿಕೊಂಡು ಬಂದು ನಾನು ಸ್ವತಂತ್ರ ಎಂದರೆ ಅದು ಹೆಗ್ಗಳಿಕೆಯಲ್ಲ. ಆ ಕ್ಷಣದಿಂದ ಆ ಮಗುವಿಗೆ ವಿವಿಧ ಭಯಗಳು ಆರಂಭವಾಯಿತು ಎಂದೇ ಅರ್ಥ. ಸೂತ್ರವಿಲ್ಲದ ಜೀವನವೂ ಅಂತೆಯೇ ಎಂದು ಅಭಿಪ್ರಾಯಪಟ್ಟರು.

ಕೆನರಾ ಬ್ಯಾಂಕ್ ನ ಮಾಜಿ ಚೇರ್‍ಮನ್ ಆರ್.ವಿ ಶಾಸ್ತ್ರೀ, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಮೋದ ಪಂಡಿತ್, ಪರಂಪರಾ ಕಾರ್ಯದರ್ಶಿ ವಿದ್ವಾನ್ ಸತ್ಯನಾರಾಯಣ ಶರ್ಮಾ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿಯ ಅಧ್ಯಕ್ಷ ಯು.ಎಸ್.ಜಿ ಭಟ್, ಮತ್ತಿತರರು ಉಪಸ್ಥಿತರಿದ್ದರು. ವಿನುತಾ, ಪ್ರಿಯಾಂಕಾ ಕೊರಿಕ್ಕಾರ್ ನಿರೂಪಿಸಿದರು.

IMG-20150830-WA0004 IMG-20150830-WA0006

 
Audio:

Download: Link

Video:

ಆಗಸ್ಟ್ 30 ರ ಕಾರ್ಯಕ್ರಮಗಳು:

ಛಾತ್ರಪುರಸ್ಕಾರ ಅಜೇಯ ಇವರಿಗೆ
ಶ್ರೀಭಾರತೀಪ್ರಕಾಶನದಿಂದ ಪ್ರಕಟಗೊಂಡ ‘ಗರುಡ’ ಪುಸ್ತಕ ಬಿಡುಗಡೆ
ಬೆಂಗಳೂರು ಮಂಡಲಾಂತರ್ಗತ ರಾಜಮಲ್ಲೇಶ್ವರ, ಯಲಹಂಕ ವಲಯದವರಿಂದ ಸರ್ವಸೇವೆ

Facebook Comments