ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಭಾನ್ಕುಳಿ, ಇಟಗಿ, ತಾಳಗುಪ್ಪ ವಲಯಗಳು
~

ಧರ್ಮಸಭೆ:
ಸಂಸಾರಿಗಳು ಸಣ್ಣ ಸಂಸಾರಕ್ಕಾಗಿ ದೊಡ್ಡದಾದ ಭಗವಂತನನ್ನು ಬಿಡುತ್ತಾರೆ. ಸಂನ್ಯಾಸಿಗಳು ದೊಡ್ಡ ಭಗವಂತನಿಗಾಗಿ ಸಣ್ಣ ಸಂಸಾರವನ್ನು ಬಿಡುತ್ತಾರೆ. ಹಾಗೆಯೇ ಸಂಸಾರಿಗಳು ಸುಖದ ಬಿಂದುವನ್ನು ಬಯಸುತ್ತಾರೆ. ಆದರೆ ಸಂನ್ಯಾಸಿಗಳು ಸುಖದ ಸಿಂಧುವನ್ನು ಬಯಸುತ್ತಾರೆ. ಈ ಸುಖದ ಸಿಂಧುವಿಗೆ ಭಗವಂತನೆಂದು ಹೆಸರು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.
ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಶುಕ್ರವಾರದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಮಹಾಭಾರತ ಉಪಕಥೆಗಳು’ ಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಸಮಸ್ಯೆಗಳು ಪರೀಕ್ಷೆಗಳಿದ್ದಂತೆ. ಅವು ನಮ್ಮನ್ನು ಮುಂದಿನ ತರಗತಿಗೆ ತೇರ್ಗಡೆ ಹೊಂದುವಂತೆ ಮಾಡುತ್ತದೆ. ಪರೀಕ್ಷೆ ಇರುತ್ತದೆ ಎಂದು ಯಾರೂ ಶಾಲೆಗೆ ಹೊಗದೇ ಇರುವುದಿಲ್ಲ ಎಂದ ಅವರು, ಮಹಾತ್ಮರ ಜೀವನದಲ್ಲಿ ಕಷ್ಟಗಳು ಸಾಮಾನ್ಯ ಕಷ್ಟಗಳೇ ಮನುಷ್ಯರನ್ನು ಮಹಾತ್ಮರನ್ನಾಗಿಸುತ್ತವೆ. ಶಿಲೆ ದೇವರ ವಿಗ್ರಹವಾಗಬೇಕಾದರೆ ಚಾಣದ ಏಟು ಬೀಳಲೇ ಬೇಕು ಎಂದು ನುಡಿದರು.
ದುಃಖ ಬಂದಾಗ ಬೇಸರಿಸಬಾರದು. ಅದೂ ಕೂಡ ಒಳ್ಳೆಯದಕ್ಕೆ ಬರುತ್ತದೆ. ಆದರೆ ಅದು ಬಂದಾಗ ನಾವು ಗಟ್ಟಿಯಾಗಿರಬೇಕು. ನಗುನಗುತ್ತಾ ಅದನ್ನು ಸ್ವೀಕರಿಸಬೇಕು. ಸುಖ ಬಂದಾಗ ಪುಣ್ಯ ಕ್ಷಯಿಸುತ್ತದೆ. ದುಃಖ ಬರುವುದು ಪಾಪ ತೊಳೆಯಲು. ಹಾಗಾಗಿ ದುಃಖ ಬಂದಾಗ ಬೇಸರಿಸದಿರಿ ಎಂದರು.

~
English Summary:
Paramapoojya swamiji explaining about “Why I am like this?”

“Why I am like this?” This question applies to one and all. We should ask this question in a positive way. The reason behind the several problems in life is to make you eligible for taking next step. It is like students taking exam, it will help us get promoted to next grade.. Difficulties are common in the lives of great souls. That is what makes people as great souls. A stone,to get formed as sculpture, it should face(experience) brunt/strokes.
We should not feel sad to face difficulties in life. We should firmly face it with smiles. It is for our goodness itself.

Audio:

Download: Link

Ashirvachana Video:
 

Facebook Comments