ಶ್ರೀ ರಾಮಾಶ್ರಮ, ಬೆಂಗಳೂರು 15-08-2015, ಶನಿವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಬೆಂಗಳೂರು ಮಂಡಲ (ಬನಶಂಕರಿ, ರಾಜರಾಜೇಶ್ವರೀ ವಲಯ)
ಒಪ್ಪಣ್ಣ ಬಳಗದವರಿಂದ ಶ್ರೀಪಾದುಕಾಪೂಜೆ
~
ಧರ್ಮಸಭೆ:

ನಮ್ಮ ನಿಜವಾದ ತನ ನಮ್ಮನ್ನಾಳಿದರೆ ಅದಕ್ಕೆ ಸ್ವಾತಂತ್ರ್ಯವೆಂದು. ಇಂದು ಹಾಗಾಗುತ್ತಿಲ್ಲ ಎನ್ನುವುದು ವಿಪರ್ಯಾಸ. ಯಾವ ದಿನವನ್ನು ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ದಿನವೆಂದು ಆಚರಿಸುತ್ತೇವೋ, ಆ ದಿನಾಂಕ ಕೂಡ ಬ್ರಿಟೀಷರದ್ದೇ ಆಗಿದೆ. ಇದು ಒಂದು ವಿಪರ್ಯಾಸ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.
ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಭಕ್ತ ಪ್ರಹ್ಲಾದ’ ಪುಸ್ತಕದ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ದೇವ – ಜೀವ – ದೇಹ – ದೇಶ – ರಾಷ್ಟ್ರ ಒಂದೇ ರೇಖೆಯಲ್ಲಿರಬೇಕು. ಅಂದರೆ, ದೇವ – ಜೀವ ಸಮಾನ ರೇಖೆಯಲ್ಲಿರಬೇಕು. ಜೀವ ಹೇಳಿದಂತೆ ದೇಹ ಕೇಳಬೇಕು. ಅದಕ್ಕೆ ಸರಿಯಾಗಿ ವಾತಾವರಣ ಇರಬೇಕು. ಆಡಳಿತ ಯಂತ್ರಕ್ಕೆ ಅಧ್ಯಾತ್ಮವೇ ಆಧಾರವಾಗಿರಬೇಕು. ಹಾಗಿದ್ದಾಗ ರಾಜ್ಯ ರಾಮರಾಜ್ಯವಾಗುತ್ತದೆ ಎಂದು ನುಡಿದರು.
ಈ ದೇಹ ಎನ್ನುವುದು ಬಾಡಿಗೆ ಮನೆ ಇದ್ದಂತೆ. ಎಂದಾದರೂ ಬಿಟ್ಟು ಹೋಗಲೇ ಬೇಕು. ಆದರೆ ಈ ದೇಹವೇ ನಾನು ಎಂದು ಭಾವಿಸಿ, ಇದಕ್ಕೆ ಉಪಚಾರ ಮಾಡುತ್ತಿದ್ದೇವೆ. ಒಂದು ದಿನ ಈ ದೇಹವೆಂಬ ಮನೆಯ ಯಜಮಾನ ಬಂದು ಹೊರಡಲು ಹೇಳುತ್ತಾನೆ. ಅಂದುಇಷ್ಟು ದಿನ ಮಾಡಿದ್ದಷ್ಟು ನಿಜವಾದ ನನಗಲ್ಲ ಎಂದು ಅರ್ಥವಾಗುತ್ತದೆ ಎಂದರು.
ಬೆಂಗಳೂರು ಮಂಡಲದ ಬನಶಂಕರಿ, ರಾಜರಾಜೇಶ್ವರೀ ವಲಯದವರಿಂದ ಸರ್ವಸೇವೆ ನಡೆಯಿತು. ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಶೈಲೇಶ ಬಿ.ಆರ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಶ್ರೀಕಾರ್ಯದರ್ಶಿ ಮೋಹನ ಹೆಗಡೆ, ಹೆರವಟ್ಟಾ, ಖ್ಯಾತ ಚಿತ್ರನಟ ವಿಜಯಕಾಶಿ, ಛಾತ್ರಚಾತುರ್ಮಾಸ್ಯ ಸಮಿತಿಯ ಯು.ಎಸ್.ಜಿ ಭಟ್, ಸಾಹಿತಿ ಗಜಾನನ ಶರ್ಮಾ, ಶಿಷ್ಯಭಾವ ಕಾರ್ಯದರ್ಶಿ ಆರ್.ಎಸ್ ಹೆಗಡೆ, ಹರಗಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ವೇಣುವಿಘ್ನೇಶ ಉಪಸ್ಥಿತರಿದ್ದರು. ಕುಮಾರಿ ವಿನುತಾ ಭಟ್ ನಿರೂಪಿಸಿದರು.

ಸಂಜೆ 7ಗಂಟೆಗೆ ಸರಿಯಾಗಿ ಭಾವಪೂಜೆ ಕಾರ್ಯಕ್ರಮ ನಡೆಯಿತು.

Audio:

Download: Link

Video:

Photos:

Facebook Comments