ಶ್ರೀ ರಾಮಾಶ್ರಮ, ಬೆಂಗಳೂರು 16-08-2015, ಭಾನುವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಮಂಗಳೂರು ಉತ್ತರ, ಮಂಗಳೂರು ಮಧ್ಯ, ಮಂಗಳೂರು ದಕ್ಷಿಣ ಹಾಗೂ ಉಡುಪಿ ವಲಯಗಳು
ಯಾಗಶಾಲೆ:

ಮೇಧಾ ದಕ್ಷಿಣಾ ಮೂರ್ತಿ ಹವನ

ಕಲಾಮುಕುಲ:

ಸಂಗೀತ ಕಾರ್ಯಕ್ರಮ-ಶ್ರುತಿ ಗೋಡೆ, ಯಲ್ಲಾಪುರ, ತಬಲಾ-ವಿಜೇತಾ ಹೆಗಡೆ, ಕೆರೆಮನೆ.

ವ್ಯಕ್ತಿ ಹಾಳಾಗಲು ಸಹವಾಸ ಕಾರಣವಲ್ಲ. ಹಾಗೆ ವಾತಾವರಣವೇ ಕಾರಣವಾಗಿದ್ದರೆ ಲಂಕೆಯಲ್ಲಿ ರಾಕ್ಷಸರ ನಡುವೆ ವಿಭೀಷಣ ಧರ್ಮಾತ್ಮನಾಗಿ ಉಳಿಯುತ್ತಿರಲಿಲ್ಲ. ಹಾಗೆಯೇ ಅಯೋಧ್ಯೆಯಂತಹ ಸಾತ್ವಿಕ ವಾತಾವರಣದಲ್ಲಿ ಮಂಥರೆ, ಕೈಕೇಯಿಯರೂ ಇರುತ್ತಿರಲಿಲ್ಲ. ನಮ್ಮ ಮನೆ, ಶಾಲೆಗಳಲ್ಲಿ ಎಂತಹ ವಾತಾವರಣವೂ ಇರಬುದು. ಆದರೆ ನಮಗೇನು ಬೇಕು ಎನ್ನುವ ಅರಿವು ನಮಗೆ ಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಭಾನುವಾರ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಸುಗ್ರೀವ’ ಪುಸ್ತಕ ಲೋಕಾರ್ಪಣಗೊಳಿಸಿ ಅವರು ಆಶೀರ್ವಚನ ನೀಡಿದರು.

ನಮ್ಮೊಳಗೆ ಒಳ್ಳೆಯದನ್ನು ಸ್ವೀಕರಿಸುವ ರಿಸೀವರ್ ಬೇಕು. ಆಗ ಎಂತಹ ವಾತಾವರಣವಿದ್ದರೂ ಅಲ್ಲಿರುವ ಸಕಾರಾತ್ಮಕ ಅಂಶವನ್ನು ಮಾತ್ರ ಮನಸ್ಸು ಸ್ವೀಕರಿಸುತ್ತದೆ. ಕೆಟ್ಟದನ್ನು ಸ್ವೀಕರಿಸುವ ರಿಸೀವರ್ ಇದ್ದರೆ, ದೇವರ ಮೇಲಿದ್ದರೂ, ಅಲ್ಲಿಯ ಕೊಳಕನ್ನು ತಿನ್ನುವ ಜಿರಳೆಯಂತೆ ನಾವು ಎಂತಹ ಒಳ್ಳೆಯ ವಾತಾವರಣವಿದ್ದರೂ ಕೆಟ್ಟದ್ದನ್ನೇ ಸ್ವೀಕರಿಸುತ್ತೇವೆ ಎಂದು ನುಡಿದರು.

ದೇವರ ಹಾಗೂ ಗುರುವಿನ ಹತ್ತಿರ ಇರುವುದು ದೊಡ್ಡತನವಲ್ಲ. ಅಲ್ಲಿದ್ದು ಏನನ್ನು ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ ಎಂದ ಅವರು, ತಂದೆ – ತಾಯಿಯರು ಏನು ಹೇಳುತ್ತಾರೋ, ಅದನ್ನು ಮಕ್ಕಳು ಮಾಡುವುದಿಲ್ಲ. ಅವರು ಏನು ಮಾಡುತ್ತಾರೋ ಅದನ್ನೇ ಮಕ್ಕಳು ಮಾಡುತ್ತಾರೆ. ಹಾಗಾಗಿ ಪೋಷಕರು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರಮಟ್ಟದ ಚಿತ್ರಕಲೆ, ಸಂಗೀತ, ಭರತನಾಟ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ಶ್ರೀರಕ್ಷಾ ಕೆ. ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ಮಂಗಳೂರು ಮಂಡಲದ ಉತ್ತರ, ಮಧ್ಯ, ದಕ್ಷಿಣ ಹಾಗೂ ಉಡುಪಿ ವಲಯಗಳಿಂದ ಸರ್ವಸೇವೆ ನಡೆಯಿತು. ಎಂ.ಆರ್ ಭಟ್ಟರಿಗೆ ಸನ್ಮಾನ ಮಾಡಲಾಯಿತು. ಶ್ರೀ ಮಠದ ಶ್ರೀಭಾರತೀ ಸಮೂಹಸಂಸ್ಥೆಯ ಸೇವಾ ಸಮಿತಿ ಪದಾಧಿಕಾರಿಗಳ ಉದ್ಘೋಷ ನಡೆಯಿತು.

ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿಯ ಅಧ್ಯಕ್ಷರಾದ ದಿವಾನ ಕೇಶವ ಕುಮಾರ, ಯು.ಎಸ್.ಜಿ ಭಟ್, ಆದಿತ್ಯ ಭಟ್ ಕೆಕ್ಕಾರು, ಲೇಖಕಿ ಅಖಿಲಾ ಹೆಗಡೆ, ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಖಜೆ, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಮೋದ ಪಂಡಿತ, ಖ್ಯಾತ ವಕೀಲ ಶಂಭುಶರ್ಮಾ ಉಪಸ್ಥಿತರಿದ್ದರು. ಸಾವಿರಾರು ಜನರು ಸೇರಿದ್ದರು. ಸಂಜೆ ಸಹಸ್ರಾರು ಮಕ್ಕಳೊಂದಿಗೆ ಶ್ರೀಗಳು ಸಂವಾದ ನಡೆಸಿದರು.

ಛಾತ್ರಚಾತುರ್ಮಾಸ್ಯದ ಹದಿನಾರನೇ ದಿನವಾದ ಶನಿವಾರ ರಾತ್ರಿ ಶ್ರೀರಾಘವೇಶ್ವರಭಾರತೀಶ್ರೀಗಳಿಂದ ಭಾವ ಪೂಜೆ ನೆರವೇರಿತು.

ಜಾಗಟೆ, ಗಂಟೆ, ಅರಿಶಿನ, ಕುಂಕುಮ ಮುಂತಾದ ಯಾವುದೇ ಸಲಕರಣೆಗಳಿಲ್ಲದೇ ಕೇವಲ ಭಾವದಿಂದಲೇ ಮಾಡುವ ಈ ಭಾÀಪೂಜೆಯಲ್ಲಿ ಶ್ರೀಗಳು ರಾಮಶಿಶುವಾಗಿದ್ದಾಗಿನ ಸಂದರ್ಭಗಳನ್ನು ಮನಮುಟ್ಟುವಂತೆ ವರ್ಣಿಸಿದರು. ಈ ಕಾರ್ಯಕ್ರಮ ನಡುವೆ ಹಾಡಿದ ಗೀತೆಗಳು ಮನಮೋಹಕವಾಗಿ ಮೂಡಿಬಂದವು. ಈ ಕಾರ್ಯಕ್ರಮದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ರಾಮ ಭಾವದಲ್ಲಿ ತಲ್ಲೀನರಾದರು

English Summary:

Environment or the surrounding does not make anyone bad, if that was the case Vibheeshana would not be good amidst of all the demons in Lanka and there wont be any Manthare/Kaikeyi in the land of Good Ayodhya. There might be different atmosphere in our schools or Home, but we should be sensible enough to grasp only what is good. We should become the receiver to accept the Good. Then in any kind of situation, we will be able to grasp only positives.

It is not a great deal being near to GOD or GURU but what we take from them is what matters. Children won’t do as parents say but they do as parents DO. So parents have to be very sensible

~His holiness excerpts.

Audio:

Download: Link

Video:

Photos:

Facebook Comments