ಶ್ರೀ ರಾಮಾಶ್ರಮ, ಬೆಂಗಳೂರು 17-08-2015, ಸೋಮವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಮಂಗಳೂರು ಮಂಡಲದ ಬಾಯಾರು, ಮುಡಿಪು, ಕೋಳ್ಯೂರು, ಕನ್ಯಾನ ವಲಯಗಳು
~
ಯಾಗಶಾಲೆ:
ಮೇಧಾ ದಕ್ಷಿಣಾ ಮೂರ್ತಿ ಹವನ
~
ಧರ್ಮಸಭೆ

ಮನುಷ್ಯ ಜನ್ಮ ಉತ್ಕಷ್ಟವಾದುದು. ಇರುವ ಅದೆಷ್ಟೋ ಜೀವಗಳಿಗೆ ಹುಟ್ಟುವ ಅವಕಾಶವೇ ಇಲ್ಲ. ಹುಟ್ಟಿದರೂ ಮನುಷ್ಯನಾಗಿ ಹುಟ್ಟದೆ, ಪ್ರಾಣಿ-ಪಕ್ಷಿಗಳಾಗಿ ಹುಟ್ಟುತ್ತವೆ, ಒಂದೊಮ್ಮೆ ಮನುಷ್ಯನಾಗಿ ಹುಟ್ಟಿದರೂ ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟುತ್ತದೆ. ಮನುಷ್ಯರಾಗಿ ಹುಟ್ಟುವ ಅದೆಷ್ಟೋ ಜನರಲ್ಲಿ ಕೆಲವು ಅಂಶಗಳಷ್ಟು ಮಂದಿಗೆ ಮಾತ್ರ ಭಾರತದಲ್ಲಿ ಹುಟ್ಟುವ ಸೌಭಾಗ್ಯ ದೊರೆಯುತ್ತದೆ. ಆ ಭಾಗ್ಯ ಪಡೆದ ಭಾಗ್ಯವಂತರು ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.
ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಸೋಮವಾರ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ಡಾ.ಸುವಣಿನೀ ರಾವ್ ಕೊಣಲೆ ‘ಜಟಾಯು – ಸಂಪಾತಿ’ ಪುಸ್ತಕ ಲೋಕಾರ್ಪಣಗೊಳಿಸಿ ಅವರು ಆಶೀರ್ವಚನ ನೀಡಿದರು.
ಈ ಜನ್ಮ ಮೋಕ್ಷ ಪಡೆಯಲಿಕ್ಕಾಗಿ ದೇವರು ಕೊಟ್ಟ ಅವಕಾಶ. ಅದಕ್ಕಾಗಿಯೇ ಇರುವ ಜನ್ಮವನ್ನು ಮೋಕ್ಷ ಪಡೆಯುವುದನ್ನು ಬಿಟ್ಟು, ಉಳಿದೆಲ್ಲದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಳ್ಲದಿದ್ದರೆ, ದೇವರು ಇನ್ನೆಂದೂ ಈ ಅವಕಾಶ ಕೊಡುವುದಿಲ್ಲ ಎಂದು ನುಡಿದರು.
ಸಂಗೀತ ವಿಭಾಗದಲ್ಲಿ ರಾಷ್ಟ್ರಮಟ್ಟದ ಸಾದನೆ ಮಾಡಿದ ರಮ್ಯಾ ಭಟ್ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ಮಂಗಳೂರು ಮಂಡಲದ ಬಾಯಾರು, ಮುಡಿಪು, ಕೋಳ್ಯೂರು, ಕನ್ಯಾನ ವಲಯದವರು ಸರ್ವಸೇವೆ ಮಾಡಿದರು.
ರಾಜಕೀಯ ನೇತಾರ ಶಶಿಭೂಷಣ ಹೆಗಡೆ, ಮಹಾಮಂಡಲದ ಸೇವಾಪ್ರಧಾನ ಹೇರಂಭ ಶಾಸ್ತ್ರಿ, ಮಹಾಮಂಡಲದ ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಮಾತೃಪ್ರಧಾನೆ ಈಶ್ವರೀ ಬೇರ್ಕಡವು ಮತ್ತಿತರು ಉಪಸ್ಥಿತರಿದ್ದರು.

English Summary:
Human birth is the best of its kind. Many species will not get chance to get birth, even if they get, it will be other than human birth. Even in Humans only few lucky people get the chance to take birth in INDIA. Since we have got the golden opportunity by getting birth in INIDA, we should make it worth.

If the opportunity given is not utilized properly, almighty may not give us another opportunity. Life is a mixture of Happiness and Sadness which comes one after the other.

Our life depends on how we perceive it. By changing the way of looking at the life, we can change ourselves.

 

Audio:

Download: Link

Video:

Photos:

Facebook Comments