ಶ್ರೀ ರಾಮಾಶ್ರಮ, ಬೆಂಗಳೂರು 20-08-2015, ಗುರುವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:

ಉಬರು ಶಿರಂಕಲ್ಲು ಸುಬ್ರಾಯ ಭಟ್

ಧರ್ಮಸಭೆ:

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೊಂದನೇ ದಿನವಾದ ಗುರುವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ನ.ಕೃಷ್ಣಪ್ಪ ಮುಂತಾದ ಲೇಖಕರ ಲೇಖನಗಳನ್ನೊಳಗೊಂಡ ‘ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು?’ ಪುಸ್ತಕ ಲೋಕಾರ್ಪಣೆಗೊಂಡಿತು.
ಈ ವೇಳೆ ಶ್ರೀಗಳು ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ದೇಶ ಸೇವೆ ಸಲ್ಲಿಸಿದ ನ.ಕೃಷ್ಣಪ್ಪನವರಿಗೆ ಶಿಕ್ಷಣಕ್ಷೇತ್ರದಲ್ಲಿ ಆಸಕ್ತಿ, ಪರಿಣತಿ ಮತ್ತು ವಿಶಿಷ್ಟ ಪರಿಕಲ್ಪನೆ ಇತ್ತು. ಅವರ ಚಿಂತನಾ ಲಹರಿಯನ್ನು ಎಲ್ಲ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು. ಇಂದು ಕೃಷ್ಣಪ್ಪ ಅವರು ಭಗವತ್ಪಾದವನ್ನು ಸೇರಿ ಹನ್ನೊಂದನೇ ದಿನದ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಈ ಪುಸ್ತPದÀ ಲೋಕಾರ್ಪಣ ಅವರಿಗೆ ಸಮರ್ಪಿಸುವ ಶ್ರದ್ಧಾಂಜಲಿ ಎಂದು ನುಡಿದರು.
ಯು.ಎಸ್ ಸುಬ್ರಾಯ ಭಟ್ ಹಾಗೂ ಕುಟುಂಬದವರು ಸರ್ವಸೇವೆ ಸಮರ್ಪಿಸಿದರು. ಯೋಗದಲ್ಲಿ ಸಾಧನೆ ಮಾಡಿದ ಪೂಜಾ ಭಟ್ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ಡಾ.ಗಜಾನನ ಶರ್ಮಾ ರಚಿಸಿದ ಶ್ರೀಮಠದ ಗೀತೆ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಗೀತೆಯನ್ನು ಶೋಭಾ ಅವರು ಕೊಡವ ಭಾಷೆಗೆ ತರ್ಜುಮೆಗೊಳಿಸಿ, ಹಾಡಿದರು. ಮಹಾಮಂಡಲ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಜಿ.ಪಂ ಸದಸ್ಯ ಪ್ರದೀಪ ನಾಯಕ್ ದೇವರಭಾವಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಮತ್ತಿತರರಿದ್ದರು. ಅರ್ಪಿತಾ ಹೆದ್ಲಿ ನಿರೂಪಿಸಿದರು.SRI_0810 SRI_0816 SRI_0819 SRI_0821

Facebook Comments