ಶ್ರೀ ರಾಮಾಶ್ರಮ, ಬೆಂಗಳೂರು 21-08-2015, ಶುಕ್ರವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:

ಇಡಗುಂಜಿಯಾ ಧರಮದರ್ಷಿಗಳು  ಡಾ|| ಜಿ. ಜಿ. ಸಭಾಹಿತರು

~

ಧರ್ಮಸಭೆ:

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೊಂದನೇ ದಿನವಾದ ಗುರುವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ‘ಪಂಚತಂತ್ರ’ ಆಂಗ್ಲ ಪುಸ್ತಕ ಲೋಕಾರ್ಪಣೆಗೊಂಡಿತು.
ಇಡಗುಂಜಿ ದೇವಾಲಯದ ಧರ್ಮದರ್ಶಿಗಳಾದ ಜಿ.ಜಿ ಸಭಾಹಿತ್ ಕುಟುಂಬದವರು ಸರ್ವಸೇವೆ ಸಮರ್ಪಿಸಿದರು. ಸಂಗೀತದಲ್ಲಿ ಸಾಧನೆ ಮಾಡಿದ ದೀಪ್ತಿ ರಾಮಕೃಷ್ಣ ಭಟ್ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ವಿಜಯರಂಗ ಸಂಗೀತ ಶಾಲೆಯವರಿಂದ ಸೌಂದರ್ಯಲಹರಿ ಪಾರಾಯಣ ನೆರವೇರಿತು. ಕೋಲ್ಕತ್ತಾದ ಸತ್ಯಜಿತ್ ಅವರಿಂದ ರಾಮಧುನ್ ನಡೆಯಿತು. ಖ್ಯಾತ ಉದ್ಯಮಿ ಪ್ರಕಾಶ ಭಟ್, ಛಾತ್ರಚಾತುರ್ಮಾಸ್ಯ ಸಮಿತಿ ಉಪಾಧ್ಯಕ್ಷ ಡಾ.ಗೋಪಿನಾಥ, ಎಸ್.ಜಿ ಭಟ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಖ್ಯಾತ ಪ್ರಕೃತಿ ಚಿಕಿತ್ಸಾ ತಜ್ಞೆ ಡಾ.ಸುವರ್ಣಿನೀ ರಾವ್ ಕೊಣಲೆ, ಮಹತಿ ಪ್ಯಾಕ್ವೆಲ್ ನ ಎಮ್.ಡಿ ಶಮನ್ ಗಣಪತಿ ಉಪಸ್ಥಿತರಿದ್ದರು. ಚಿನ್ಮಯೀ ನಿರೂಪಿಸಿದರು.

SRI_0835

 

SRI_0829

SRI_0827

SRI_0825

Facebook Comments