ಶ್ರೀ ರಾಮಾಶ್ರಮ, ಬೆಂಗಳೂರು 22-08-2015, ಶನಿವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:

ಬೆಂಗಳೂರು ಮಂಡಲಾಂತರ್ಗತ ಕೋರಮಂಗಲ , ವಿಜಯನಗರ ವಲಯಗಳು

ಧರಮಸಭೆ:

ಬೆಂಗಳೂರು: ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ರಾಘವೇಶ್ವರಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತಮೂರನೇ ದಿನವಾದ ಶನಿವಾರ ಶ್ರೀಭಾರತೀಪ್ರಕಾಶನ ಪ್ರಕಟಪಡಿಸಿದ ‘ರಾಮಯಣ ಕಥಾಪತ್ರ’ ಆಟಿಕೆÀ ಲೋಕಾರ್ಪಣೆಗೊಂಡಿತು.
ಬೆಂಗಳೂರು ಮಂಡಲಾಂತರ್ಗತ ಕೋರಮಂಗಲ ಹಾಗೂ ವಿಜಯನಗರ ವಲಯಗಳಿಂದ ಸರ್ವಸೇವೆ ನಡೆಯಿತು. ಸಂಸ್ಕøತ ಭಾಷಣದಲ್ಲಿ ಚಿನ್ನದ ಪದಕ ಪಡೆದ ಸಿರಸಿಯ ಬಾಲಚಂದ್ರ ಭಟ್ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ರ್ಯಾಂಕ್ ಪಡೆದ ಅಕ್ಷತಾ ಮದ್ಗುಣಿ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು. ಸುಶ್ರಾವ್ಯ ಹಾಗೂ ಸುಧನ್ವ ದಾಸರಪದಗಳನ್ನು ಹಾಡಿದರು. ಕೋಲ್ಕತ್ತಾದ ಸತ್ಯಜಿತ್ ಅವರಿಂದ ರಾಮಧುನ್ ನಡೆಯಿತು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಲ್, ಶ್ರೀಕಾರ್ಯದರ್ಶಿ ಮೋಹನ ಹೆಗಡೆ, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿ ಅಧ್ಯಕ್ಷರಾದ ಯು.ಎಸ್.ಜಿ ಭಟ್, ಆದಿತ್ಯ ಭಟ್, ಗ್ರಾಮರಾಜ್ಯ ಕಾರ್ಯದರ್ಶಿ ಆರ್.ಎಸ್ ಹೆಗಡೆ, ಉಪಸ್ಥಿತರಿದ್ದರು. ಚಿನ್ಮಯೀ ನಿರೂಪಿಸಿದರು.

ಆಶೀರ್ವಾಣಿಗಳು:

ಸೃಷ್ಟಿಯನ್ನು ಬದಲಾಯಿಸಲಾಗದು; ದೃಷ್ಟಿ ಬದಲಾಯಿಸಿಕೊಳ್ಳಬಹುದು

ತಿದ್ದಿಕೊಳೊ ನಿನ್ನ ನೀ  ಜಗವ ತಿದ್ದುವುದಿರಲಿ

ಎಲ್ಲರೂ ನನ್ನ ಮೂಗಿನ ನೇರಕ್ಕೆ ಇರಬೇಕೆನ್ನುವುದು ಅಶಾಂತಿಗೆ ಕಾರಣ …

ನಿನ್ನ ಹೆಜ್ಜೆ ನೀ ನೋಡಿಕೋ

ದೃಷ್ಡಿಪೂತಂ ನ್ಯಸೇತ್ ಪಾದಮ್

ದೃಷ್ಟಿ ತುಂಬಾ ಮುಖ್ಯ..

ನೋಟ ಸರಿಯಾದರೆ ಜಗತ್ತು ಸರಿ

ನೆಮ್ಮದಿ ಬೇಕಾದರೆ ನಮ್ಮನ್ನು ನಾವು ನೋಡಿಕೊಳ್ಳಬೇಕು

ಚಿಣ್ಣರೆಲ್ಲ ಚಿನ್ನವಾಗಬೇಕು …

ಜೀವನ ಹುಡುಗಾಟವಾದರೆ, ಅದು ಕಾಟ… ಜೀವನ ಹುಡುಕಾಟವಾದರೆ ಅದು ರಾಮನೊಂದಿಗಿನ ಕೂಟ …
ಎಲ್ಲರಿಗೂ ಒಳಿತಾಗಲಿ ..

Audio:

Download: Link

Video:

Photos:

Facebook Comments