ಶ್ರೀ ರಾಮಾಶ್ರಮ, ಬೆಂಗಳೂರು 23/08/2015, ಭಾನುವಾರ

~
ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ: ಕುಮಟಾ ಮಂಡಲ

ಬೋವಿ ಸಮಾಜದವರಿಂದ ಪಾದುಕಾಪೂಜೆ
~
ಧರ್ಮಸಭೆ:
ಎಲ್ಲರೂ ಜಗತ್ತನ್ನೇ ಸರಿಪಡಿಸುತ್ತೇನೆ ಎಂದು ಮುನ್ನುಗ್ಗುತ್ತಾರೆ. ಅವರಿಗೆ ಜಗತ್ತನ್ನು ಸರಿಪಡಿಸಲು ಆಗುವುದಿಲ್ಲ. ಏಕೆಂದರೆ ಮೊದಲು ತಾವು ತಮ್ಮನ್ನು ಸರಿಪಡಿಸಿಕೊಂಡಿರುವುದಿಲ್ಲ. ಈ ನಿಜ ತಿಳಿಯುವಾಗ ಅವರ ಅಂತಿಮ ಕ್ಷಣ ಬಂದಿರುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಭಾನುವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಇಪ್ಪತ್ತನಾಲ್ಕನೇ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಶ್ರೀಶಂಕರಾಚಾರ್ಯಚರಿತೆ’ ಪುಸ್ತಕದ ಲೋಕಾರ್ಪಣ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಜಗತ್ತೇಕೆ ಹೀಗೆ ಎಂದು ಕೇಳುವ ಮೊದಲು ನಾನೇಕೆ ಹೀಗೆ ಎಂದು ಕೇಳಿಕೊಳ್ಳಬೇಕು. ಜಗತ್ತನ್ನು ಸರಿ ಮಾಡುವ ಮೊದಲು ನಾವು ಸರಿಯಾಗಬೇಕು. ಒಮ್ಮೆ ನಾವು ಸರಿಯಾದರೆ, ನಮ್ಮ ಮನಸ್ಸು ಶುದ್ಧವಾದರೆ ಜಗತ್ತನ್ನು ಸರಿಪಡಿಸುವ ಅರ್ಹತೆ ಬರುತ್ತದೆ ಅಥವಾ ಜಗತ್ತೆಲ್ಲ ಶುದ್ಧವಾಗಿಯೇ ಕಾಣುತ್ತದೆ. ನಮ್ಮ ದೃಷ್ಟಿಯಂತೆ ಸೃಷ್ಟಿ ಇರುತ್ತದೆ ಎಂದು ನುಡಿದರು.
ಹಿಂದಿ ಜೀ ಟಿವಿಯ ಸರಿಗಮಪ ಸಿಂಗಿಂಗ್ ಕಾಂಪಿಟೇಷನ್ ನಲ್ಲಿ ವಿಜೇತರಾದ 3ಜಿ ಖ್ಯಾತಿಯ, ಯಲ್ಲಾಪುರ ಮೂಲದ ಉಡುಪಿಯ ಗಗನ್ ಗೋಪಾಲಕೃಷ್ಣ ಗಾಂವ್ಕರ್ ಇವರಿಗೆ ಹಾಗೂ ಸಂಗೀತದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಮಣಿಪಾಲಿನ ವಿದುಷಿ ಉಷಾ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಕುಮಟಾ ಮಂಡಲಾಂತರ್ಗತ ಕುಮಟಾ, ಗೋವಾ, ಕೆಕ್ಕಾರು, ಅಂಕೋಲ-ಕಾರವಾರ ವಲಯದವರಿಂದ ಸರ್ವಸೇವೆ ನಡೆಯಿತು.
ಬೋವಿ ಸಮಾಜದವರಿಂದ ಪಾದುಕಾಪೂಜೆ ನಡೆಯಿತು. ಕೋಲ್ಕತ್ತಾದ ಸತ್ಯಜಿತ್ ಅವರಿಂದ ರಾಮಧುನ್ ನಡೆಯಿತು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಲ್, ಶ್ರೀಕಾರ್ಯದರ್ಶಿ ಮೋಹನ ಹೆಗಡೆ, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಮೋದ ಪಂಡಿತ್, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿ ಅಧ್ಯಕ್ಷರಾದ ಯು.ಎಸ್.ಜಿ ಭಟ್, ದಿವಾನ ಕೇಶವ ಕುಮಾರ್, ಆದಿತ್ಯ ಭಟ್, ಗ್ರಾಮರಾಜ್ಯ ಕಾರ್ಯದರ್ಶಿ ಆರ್.ಎಸ್ ಹೆಗಡೆ, ಆರ್.ಡಿ ಶಾಸ್ತ್ರಿ, ಡಾ.ಗಿರಿಧರ ಖಜೆ, ಶಂಕರನಾರಾಯಣ ಉಪಾಧ್ಯಾಯ, ಡಾ.ಗಣಪತಿ ಜೋಯ್ಸ್ ಉಪಸ್ಥಿತರಿದ್ದರು. ಪ್ರಮೋದ ಹೆಗಡೆ ನಿರೂಪಿಸಿದರು.

Chaturmasya Sandesha: Sri Samsthanam

Chaturmasya Sandesha: Sri Samsthanam

Sabha

Sabha

 Book release : Sri Shankaracharya Charite

Book release : Sri Shankaracharya Charite

Chatrapuraskara to Gaghan Gaonkar

Chatrapuraskara to Gaghan Gaonkar

Chatrapuraskara to      Ku. Usha

Chatrapuraskara to Ku. Usha

Chatra samvada

Chatra samvada

Chatra samvada

Chatra samvada

Audio:

Video:

ಸಂವಾದ:

Download : Link

Video:

Facebook Comments