• ಗೋಗ್ರಾಸ ರವಾನಿಸಿದ ಶ್ರೀರಾಮಚಂದ್ರಾಪುರಮಠ
  • ಉಚಿತ ಟ್ರಕ್‌ಸೇವೆ ಒದಗಿಸಿದ ವಿಆರ್‌ಎಲ್ ಲಾಜಿಸ್ಟಿಕ್ಸ್

ಬೆಂಗಳೂರು: ಭೀಕರ ಪ್ರವಾಹದಿಂದಾಗಿ ಹಾನಿಗೀಡಾದ ಪಥಮೇಡ ಗೋಪಾಲ ಗೋವರ್ಧನ ಗೋಶಾಲೆಯ ಗೋವುಗಳ ಸಂರಕ್ಷಣೆಗೆ ಶ್ರೀರಾಮಚಂದ್ರಾಪುರಮಠ ತನ್ನ ಕಾಮದುಘಾ ಯೋಜನೆ ಮೂಲಕ ನೆರವಿನಹಸ್ತ ಚಾಚಿದೆ.

Pathmed-Flood-Help-1

ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಮಾರ್ಗದರ್ಶನಾನುಸಾರ ಕಾಮದುಘಾ ಯೋಜನೆ ಅಡಿ ಈಗಾಗಲೇ 10 ಟನ್ ಪಶುಆಹಾರ ಹಾಗೂ 10 ಟನ್ ಬೆಲ್ಲವನ್ನು ಸಂಗ್ರಹಿಸಿ ಆ.23ರಂದು ರವಾನಿಸಲಾಗಿದೆ. ವಿಆರ್‌ಎಲ್ ಲಾಜಿಸ್ಟಿಕ್ಸ್ ಸಮೂಹಸಂಸ್ಥೆ ಮಾಲೀಕರಾದ ವಿಜಯಸಂಕೇಶ್ವರ ಅವರು ಈ ಪಶುಆಹಾರ, ಬೆಲ್ಲವನ್ನು ಪಥಮೇಡ ಗೋಶಾಲೆಗೆ ತಲುಪಿಸುವುದಕ್ಕೆ ಉಚಿತ ಟ್ರಕ್ ಸೇವೆಯನ್ನು ಒದಗಿಸಿದ್ದಾರೆ.

Pathmed-Flood-Help-2

ಪಥಮೇಡದಲ್ಲಿ ಏನಾಗಿದೆ?

ಇತ್ತೀಚೆಗೆ ನಿರಂತರ ಸುರಿದ ಮಳೆಯಿಂದಾಗಿ ಪಥಮೇಡ ಸುತ್ತಮುತ್ತಲಿನ ಪ್ರದೇಶ ನೆರೆಪೀಡಿತವಾಗಿದ್ದು, ಮುಳುಗಡೆಗೊಳಗಾಗಿವೆ. ನೂರಾರು ಎಕರೆ ಪ್ರದೇಶದಲ್ಲಿದ್ದ ಗೋಪಾಲ ಗೋವರ್ಧನ ಗೋಶಾಲೆ ಕೂಡ ನೆರೆಪೀಡಿತವಾಗಿದ್ದು, ಅನೇಕ ಗೋವುಗಳು ಸಾವನ್ನಪ್ಪಿವೆ. ಇನ್ನೂ ಅನೇಕ ಗೋವುಗಳು ಅನಾರೋಗ್ಯಪೀಡಿತವಾಗಿವೆ.

 “ಈ ಗೋವುಗಳ ಸಂರಕ್ಷಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಶ್ರೀರಾಮಚಂದ್ರಾಪುರ ಮಠವೂ ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಮೊದಲ ಹಂತದಲ್ಲಿ ಗೋವುಗಳಿಗೆ ಆಹಾರ ತಲುಪಿಸುವ ಕೆಲಸ ಮಾಡಿದೆ” ಎಂದು ಕಾಮದುಘಾ ಯೋಜನೆಯ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ ತಿಳಿಸಿದ್ದಾರೆ.

ಪೋಟೋಗಳು:

Facebook Comments