ಶ್ರೀ ರಾಮಾಶ್ರಮ, ಬೆಂಗಳೂರು 25/08/2015, ಮಂಗಳವಾರ

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.

~
ಸರ್ವಸೇವೆ:
ಕುಮಟಾ ಮಂಡಲದ ಧಾರೇಶ್ವರ, ಗುಡೆಅಂಗಡಿ, ಹೆಗಡೆ, ಮಿರ್ಜಾನ್ ವಲಯಗಳು

ಲೋಕಾರ್ಪಣೆ: ವಾನರ ರಾಜ ಸುಗ್ರೀವ ಆಂಗ್ಲ ಕೃತಿ

ಪುರಸ್ಕಾರ: ಕುಮಾರ್ ಮೈತ್ರೇಯ ಹೆಗಡೆ

ಇಂದಿನ ಆಶೀರ್ವಚನ…

ವಸ್ತು: ನಾನೇಕೆ ಹೀಗೆ?…
ಪ್ರವಚನದೊಂದಿಗೆ ಗಾಯನ: ಶ್ರೀಮತಿ ವಸುಧಾ ಶರ್ಮಾ…
ಆಧಾರಭೂಮಿ: ಶ್ರೀಶಂಕರರ ರಚನೆಯಾದ- ನಮಶ್ಶಿವಾಭ್ಯಾಮ್.

ನಮಶ್ಶಿವಾಭ್ಯಾಂ ನವಯೌವನಾಭ್ಯಾಂ ಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್/ ನಗೇಂದ್ರಕನ್ಯಾವೃಷಕೇತನಾಭ್ಯಾಂ ನಮೋ ನಮಶ್ಶಕ್ಞರಪಾರ್ವತೀಭ್ಯಾಮ್//
ರಾಗ: ದಾನಿ

ಜಗದ ಜಂಜಡಗಳಿಗೆ ಉತ್ತರನಾದ ಪ್ರಭುರಾಮನ ಚರಣಕ್ಕೆ ನಮನ

ನಾನೇಕೆ ಹೀಗೆ? ನಾನೇಕೆ ಹೀಗೇ ಇರುವುದಿಲ್ಲ ದ್ವಂದ್ವದ ಪ್ರಶ್ನೆ ದುಃಖ ಸುಖಗಳಲ್ಲಿ

ಯೌವನ ಹೀಗೇ ಇರಬಾರದೇ? ಪ್ರಶ್ನೆ

ಮುಪ್ಪು ಬಂದೇ ಬರುತ್ತದೆ… ಯೌವನ ಸತ್ಯವಾದರೆ, ಮುಪ್ಪೂ ಸತ್ಯವೇ

ನಿದ್ದೆಯೇ ಇದ್ದಿದ್ದರೆ? ನಿದ್ದೆಯೇ ಇಲ್ಲದಿದ್ದರೆ? ದ್ವಂದ್ವದ ಪ್ರಶ್ನೆ
ನಿದ್ದೆ ಮತ್ತು ಎಚ್ಚರ ಎರಡೂ ಇದೆ ಬದುಕಿನಲ್ಲಿ

ಹಗಲೂ ಇದೆ, ರಾತ್ರಿಯೂ ಇದೆ
ಕಣ್ಣೂ ಇದೆ, ಮುಚ್ಚಲು ರೆಪ್ಪೆಯೂ ಇದೆ…

ಉತ್ಸಾಹವಿದೆ, ಯಾರೋ ಏನೋ ಎಂದರು… ನಿರುತ್ಸಾಹ ಮೂಡಿತು

ಕೆಲವೊಮ್ಮೆ ನಾವು ಕೋಮಲ, ಕೆಲವೊಮ್ಮೆ ನಿಷ್ಠುರ

ಕೆಲವೊಮ್ಮೆ ಒಳ್ಳೆಯವ, ಕೆಲವೊಮ್ಮೆ ಕೆಟ್ಟವ…
ಕೆಲವರಿಗೆ ಒಳ್ಳೆಯವ, ಕೆಲವರಿಗೆ ಕೆಟ್ಟವ

ಕೆಲವು ಬಣ್ಣ ಇಷ್ಟ, ಕೆಲವಲ್ಲ ಇಷ್ಟ… ಯಾಕೆ ಹೀಗೆ?

ಅಕಂಪನ ನುಡಿದಾಗ, ಮಾರೀಚ ನುಡಿದಾಗ ಸೀತಾಪಹಾರ ಬೇಡವೆಂದುಕೊಂಡ ರಾವಣ, ಶೂರ್ಪಣಖಿ ನುಡಿದಾಗ ಮುಂದುವರಿದ … ಎರಡು ರಾವಣ ಏಕೆ?

ಸೃಷ್ಟಿ ಎರಡಾಯಿತು, ಪ್ರಕೃತಿ-ಪುರುಷ ಎಂದು

ಪ್ರಕೃತಿ ಎರಡಾಯಿತು, ಚರ-ಅಚರ ಎಂದು

ಚರದಲ್ಲಿ ಎರಡಾಯಿತು ಪ್ರಾಣಿ-ನರ ಎಂದು

ಮನುಷ್ಯರಲ್ಲಿ ಮತ್ತೆ ಎರಡು ಗಂಡು-ಹೆಣ್ಣು ಎಂದು

ಮತ್ತೆ ನನ್ನವರು-ಪರಕೀಯರು ಎಂದು ಎರಡು

ಮತ್ತೆ ನನ್ನ ಸಂಸಾರ, ಬೇರೆ ಸಂಸಾರ ಎಂದು ಎರಡು

ಮತ್ತೆ ನಾನೊಬ್ಬನೇ ಒಂದು

ನನ್ನೊಳಗೂ ಮತ್ತೆ ಎರಡು
ನಿನ್ನೆಯ ನಾನು ಇಂದಿನ ನಾನಲ್ಲ
ದ್ವಂದ್ವ

ಇದಕ್ಕೆ ಉತ್ತರ ಶಂಕರರ ಈ ಕೃತಿಯಲ್ಲಿದೆ

ನಾವೇಕೆ ಹೀಗೆ ಎಂದರೆ ನಮ್ಮನ್ನು ಹುಟ್ಟಿಸಿದವರೇ ಹೀಗೆ

ದ್ವಂದ್ವ ಒಂದಾಗಿದ್ದು ಜಗತ್ತಿನ ತಾಯಿತಂದೆ

ಎರಡು ಒಂದಾಗಿದ್ದು ಅದ್ವೈತ

ಶಿವ ಅರ್ಧ ಹೆಣ್ಣು, ಅರ್ಧ ಗಂಡು
ಅರ್ಧ ಸಂಪಿಗೆಯ ಬಿಳಿ, ಇನ್ನರ್ಧ ಕರ್ಪೂರದ ಬಿಳಿ

ಒಂದೆಡೆ ಜಟೆ, ಒಂದೆಡೆ ಜಡೆ

ಒಂದೆಡೆ ಕಸ್ತೂರಿ ಕುಂಕುಮ, ಇನ್ನೊಂದೆಡೆ ಶವ ಬೂದಿ

ಒಂದು ಕಾಮಸಂಹಾರಿ, ಇನ್ನೊಂದು ಕಾಮಜನನಕಾರಿ

ಒಂದೆಡೆ ಆಭರಣ, ಇನ್ನೊಂದೆಡೆ ಸರ್ಪವೇ ಭರಣ

ಒಂದೆಡೆ ಮಂದಾರಮಾಲೆ, ಇನ್ನೊಂದೆಡೆ ಕಪಾಲಮಾಲೆ

ಒಂದೆಡೆ ದಿವ್ಯಾಂಬರ, ಒಂದೆಡೆ ದಿಗಂಬರ

ಕಪ್ಪುಕೂದಲೊಂದೆಡೆ, ಕೆಂಜೆಡೆ ಇನ್ನೊಂದೆಡೆ

ಒಂದು ಹೆಜ್ಜೆ ಲಾಸ್ಯ- ಅದರಿಂದ ಸೃಷ್ಟಿ, ಇನ್ನೊಂದು ತಾಂಡವ – ಅದರಿಂದ ಸಂಹಾರ

ಇಂತಹ ದ್ವಂದ್ವ
ಇದು ನಮ್ಮಲ್ಲೂ ಇದೆ ..
ಎಡಭಾಗ ಹೆಣ್ಣು, ಬಲಭಾಗ ಗಂಡು
ಗಂಡು-ಹೆಣ್ಣೆರಡರಲ್ಲೂ ಹೀಗೆಯೇ
ಅಪ್ಪ ಅಮ್ಮ ಎರಡೂ ನಮ್ಮಲ್ಲಿ

ಒಮ್ಮೆ ನಾವು ಶಿವನಂತೆ, ಇನ್ನೊಮ್ಮೆ ಶಿವೆಯಂತೆ

ಎರಡನ್ನೂ ಬಿಡಲಾರೆವು… ಎರಡನ್ನೂ ಬದುಕಿನಲ್ಲಿ ಕೂಡಿಸಿಕೊಳ್ಳಬೇಕು

ಧ್ಯಾನವೆಂದರೆ ನಮ್ಮೊಳಗಿನ ಎರಡನ್ನು ಒಂದುಗೂಡಿಸುವುದು

ಧರ್ಮವೆಂದರೆ ಒಂದುಗೂಡಿಸುವುದು

ಗಂಡ ಹೆಂಡತಿಯರ ನಡುವೆ ಈ ದ್ವಂದ್ವ

ನಾವೆಲ್ಲ ಪ್ರಕೃತಿ
ಶಿವೆಯ ಅಂಶ

ಮೀರಾ ನುಡಿದಳು- ಜಗತ್ತಿನಲ್ಲಿ ಪುರುಷನೊಬ್ಬನೇ … ಅದು ಭಗವಂತ

ಜೀವ ದೇವನೊಂದಿಗವೆ ಒಂದಾದಲ್ಲಿ ಸುಖ

ಎಲ್ಲ ಅಂಶಗಳಲ್ಲೂ ದೂರವಾದಾಗ ದುಃಖ, ಒಂದಾದಾಗ ಸುಖ

ಒಡೆದಲ್ಲೆಲ್ಲ ನೋವು

ಇದನ್ನು ಶಿವ ತೋರಿಸುತ್ತಾನೆ

ಅರ್ಧ ಶರೀರವನ್ನೇ ಪತ್ನಿಗಿತ್ತ ಶಿವನದು ಆದರ್ಶ ದಾಂಪತ್ಯ

ಎರಡು ಕಣ್ಣು ಸೇರಿ ಒಂದೇ ದೃಶ್ಯವನ್ನು ಕಾಣುತ್ತದೆ …

ಕಣ್ಣೆರಡಾದರೂ ದೃಶ್ಯದಲ್ಲಿ ಅದ್ವೈತ …

ಝಣತ್ಕಣತ್ ಕಂಕಣನೂಪುರಾಯೈ
ಹೇಮಾಂಗದಾಯೈ ಭುಜಗಾಂಗದಾಯ

ಎರಡು ಎಂದ ಮಾತ್ರಕ್ಕೆ ಪರಸ್ಪರ ವಿರುದ್ಧವಲ್ಲ

ಅವು ಒಂದಾಗಿ ಇರಬಹುದು

ಶಿವ ಸಂಸಾರದಲ್ಲಿ ವಿರುದ್ಧವೆಲ್ಲವೂ ಒಟ್ಟಿಗಿವೆ

ಹಾವು ಇಲಿ

ಸಿಂಹ ವೃಷಭ

ನವಿಲು ಹಾವು

ಚಂದ್ರ ಬೆಂಕಿ

ಅರ್ಥವಾಗದಿದ್ದಾಗ ಕ್ಲ್ಯಾಷ್, ಅದರಿಂದ ಕ್ಲೇಷ …

ಬದುಕಿನಲ್ಲಿ ದ್ವಂದ್ವ ಇದ್ದೇ ಇದೆ … ಅದು ಕೂಡುವಲ್ಲಿ ಕೂಡಿಸಬೇಕು

ದ್ವಂದ್ವವನ್ನು ಕೂಡುವಲ್ಲಿ ಕೂಡಿಸಿಕೊಂಡು ಸಾರ್ಥಕ ಬದುಕು ಬಾಳೋಣ …

ನಿಮ್ಮ ಜೀವನದಲ್ಲಿ ಎಲ್ಲೇ ಎರಡು ಕಾಣಲಿ, ಕಣ್ದೆರೆದು ನೋಡಿ, ಅಲ್ಲಿ ಕೂಡುವಿಕೆ ಇದೆ … ಅದ್ವೈತವಿದೆ …

Photos:
SRI_0922

SRI_0930

SRI_0933

SRI_0937

SRI_0940

Audio:

Download: Link

Video:

Facebook Comments