ಶ್ರೀ ರಾಮಾಶ್ರಮ, ಬೆಂಗಳೂರು 28/08/2 015

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭೂಮಿಕಾ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.

~

ಲೋಕಾರ್ಪಣೆ: ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಗೋಕಥೆ-2’ ಪುಸ್ತಕದ ಲೋಕಾರ್ಪಣೆ

~
ಸರ್ವಸೇವೆ : ಮುಳ್ಳೇರಿಯಾ ಮಂಡಲಾಂತರ್ಗತ ಪೆರ್ಡಾಲ, ಎಣ್ಮಕಜೆ, ಪಳ್ಳತ್ತಡ್ಕ, ಚಂದ್ರಗಿರಿ ವಲಯದವರಿಂದ ಸರ್ವಸೇವೆ ನಡೆಯಿತು.

~

ಧರ್ಮಸಭೆ:

‘ನಿಮ್ಮದು ಕನಿಷ್ಠ, ನಮ್ಮದು ಶ್ರೇಷ್ಠ’ ಎನ್ನುವುದು ಪರಕೀಯರು ಬಿತ್ತಿದ ಸಿದ್ಧಾಂತ. ಹಾಗಾಗಿ ಭಾರತೀಯರಿಗೆ ಬೇರೆಯವರ ವಸ್ತು, ಬೇರೆಯವರ ಮತ- ಧರ್ಮಗಳು ಇಷ್ಟವಾಗುತ್ತವೆ. ಹಾಗಾಗಿ ಮತಾಂತರಗಳು ಇಂದು ನಡೆಯುತ್ತಿವೆ. ಪಕ್ಕದ ಮನೆ ಎಷ್ಟೇ ಸುಂದರವಾದರೂ ನಾವು ನಮ್ಮ ಮನೆಯಲ್ಲೆಯೇ ಉಳಿಯಬೇಕು. ಹಾಗೆಯೇ ಸೋಲಾಗಲಿ – ಸಾವಾಗಲಿ ಎಲ್ಲರೂ ತಮ್ಮ ತಮ್ಮ ಧರ್ಮದಲ್ಲಿಯೇ ಇರಬೇಕು ಎಂದು ಶ್ರೀರಾಮಚಾಮದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

ನಮ್ಮ ಇಂದ್ರಿಯಗಳು ಹೊರಮುಖವಾಗಿವೆ. ಹಾಗಾಗಿ ಅವು ಇನ್ನೊಂದರೆಡೆ ಆಕರ್ಷಿತವಾಗುವಂತೆ ಮಾಡುತ್ತವೆ. ನಮ್ಮನ್ನು ಯಾವತ್ತೂ ನೋಡಿಕೊಳ್ಳುವುದೇ ಇಲ್ಲ. ನಮಗೆ ಇನ್ನೊಂದು ಮತದ ಹೊಳಪು ಕಾಣುತ್ತದೆ, ಕೊಳಕು ಕಾಣುವುದಿಲ್ಲ. ಹಾಗೆಯೇ ನಮ್ಮ ಮತದ ಕೊಳಕು ಕಾಣುತ್ತದೆ, ಹೊಳಪು ಕಾಣುವುದಿಲ್ಲ ಎಂದ ಅವರು, ಇನ್ನೊಂದು ಮತವನ್ನು ಗೌರವಿಸೋಣ. ಆದರೆ ನಮ್ಮ ಧರ್ಮದಲ್ಲಿಯೇ ಇರೋಣ ಎಂದು ನುಡಿದರು.

 

ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭೂಮಿಕಾ ಭಟ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಮುಳ್ಳೇರಿಯಾ ಮಂಡಲಾಂತರ್ಗತ ಪೆರ್ಡಾಲ, ಎಣ್ಮಕಜೆ, ಪಳ್ಳತ್ತಡ್ಕ, ಚಂದ್ರಗಿರಿ ವಲಯದವರಿಂದ ಸರ್ವಸೇವೆ ನಡೆಯಿತು.

ಕೇರಳದ ಪ್ರಸಿದ್ಧ ತಂತ್ರಿಗಳಾದ ರವೀಶ ತಂತ್ರಿ, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿಯ ಅಧ್ಯಕ್ಷ ಯು.ಎಸ್.ಜಿ ಭಟ್, ಗಮಕಿ ತೆಕ್ಕಕೆರೆ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು. ರಮ್ಯಾ ಭಟ್, ಪೃಥ್ವೀ ನಿರೂಪಿಸಿದರು.

SRI_0987 SRI_0952

~
ಆಗಸ್ಟ್ 29 ರ ಕಾರ್ಯಕ್ರಮಗಳು:
– ಛಾತ್ರಪುರಸ್ಕಾರ ಅವತಂಶು ಭಟ್ ಇವರಿಗೆ
– ಶ್ರೀಭಾರತೀಪ್ರಕಾಶನದಿಂದ ಪ್ರಕಟಗೊಂಡ ‘ಗಜೇಂದ್ರ ಮೋಕ್ಷ’ ಆಂಗ್ಲ ಆವೃತ್ತಿ ಬಿಡುಗಡೆ
– ಮುಳ್ಳೇರಿಯಾ ಮಂಡಲಾಂತರ್ಗತ ಕಾಸರಗೋಡು, ನೀರ್ಚಾಲು, ಗುಂಪೆ, ಕುಂಬಳೆ ವಲಯದವರಿಂದ ಸರ್ವಸೇವೆ

Audio:

Download: Link

video :

Facebook Comments