ಶ್ರೀ ರಾಮಾಶ್ರಮ, ಬೆಂಗಳೂರು 21/09/2015
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಧೀರಜ್ ಏನ್ ಭಟ್ ಹಾಗೂ ಅನಘ ಭಟ್ ಇವರಿಗೆ
~
ಲೋಕಾರ್ಪಣೆ: : ಭ್ರಹ್ಮಲಿಖಿತ ಪುಸ್ತಕ
~
ಸರ್ವಸೇವೆ : ಉಪ್ಪಿನಂಗಡಿ, ಉಜಿರೆ, ಉರುವಾಲು, ವೇಣೂರು ವಲಯಗಳು
~
ನಿರೂಪಣೆ : ಕಾರ್ತಿಕ್ ಭಟ್
ಇಂದಿನ ಆಶೀರ್ವಚನ
~
ಮತ್ತದೇ ಪ್ರಶ್ನೆ : ನಾನೇಕೆ ಹೀಗೆ??
ನೀನು ಹೆದರಿದರೆ ಸಮಾಜ ನಿನ್ನನ್ನು ಅಟ್ಟಿಸಿಕೊಂಡು ಬರುತ್ತದೆ. ನೀನು ಧೈರ್ಯದಿಂದ ಮುಖ ಆಕಡೆ ಮಾಡಿ ನಿಂತರೆ ಸಮಾಜ ನಮ್ಮ ಹಿಂದೆ ಇರುತ್ತದೆ.
ಸೋಲಿಗೆ ಬಲ ಕಡಿಮೆ ಕಾರಣ ಅಲ್ಲ, ಬದಲಿಗೆ ಧೈರ್ಯ ಕಡಿಮೆ ಕಾರಣ..
ಜೀವನವನ್ನು ರೂಪಿಸಿಕೊಳ್ಳಲು ಮುಖ್ಯವಾಗಿ ಬೇಕಾದುದು ಧೈರ್ಯ.
ಭಯದಿಂದ ನಾವು ಎಲ್ಲ ಕಳೆದುಕೊಂಡು ಬಿಡುತ್ತೇವೆ.
ಧೈರ್ಯ ಕಳೆದುಕೊಂಡರೆ ಬುದ್ಧಿ ಕೆಲಸ ಮಾಡುವುದಿಲ್ಲ..
ಭಯಪಡುವುದಾದರೆ ಪಾಪ ಮಾಡುವುದಕ್ಕೆ ಭಯಪಡಬೇಕೆ ಹೊರತು ಬೇರೆ ಯಾವುದಕ್ಕೂ ಅಲ್ಲ., ತಪ್ಪಿಗೆ ಭಯಪಡಬೇಕು.
ತಪ್ಪು ಮಾಡದಿದ್ದರೆ ದೇವರ ಮೇಲೆ ಪ್ರೀತಿ
ತಪ್ಪು ಮಾಡಿದರೆ ದೇವರ ಮೇಲೆ ಭೀತಿ
ಧೈರ್ಯ ತುಂಬ ದೊಡ್ಡ ಬಲ,
ಯಾವತ್ತಿಗೂ ನಾವು ದೀನವನ್ನು ತಾಳಬಾರದು, ಧೈರ್ಯವನ್ನು ತಾಳಬೇಕು.
ಇಂದು ನಾನೇಕೆ ಹೀಗೆ ಅಂದರೆ ಹಿಂದೆ ಯಾವುದೋ ಸಂದರ್ಭದಲ್ಲಿ
ನಾವು ಧೈರ್ಯವನ್ನು ಕಳೆದುಕೊಂಡಿದ್ದೆವು.
ಗುರು ಏನನ್ನು ಕೊಡಲಾಗದಿದ್ದರೂ ಧೈರ್ಯವನ್ನು ಕೊಡುತ್ತಾನೆ, ಜೀವನಕ್ಕೆ ಅಭಯ ಕೊಡುವವನು ಗುರು.
ಆಪತ್ತು ಬಂದಾಗ ತಯಾರಿ ಮಾಡಿಕೊಳ್ಳಲು ಭಗವಂತ ಭಯವನ್ನು ಇಟ್ಟಿದ್ದಾನೆಯೇ ಹೊರತು ಎಲ್ಲ ಕಳೆದುಕೊಳ್ಳಲು ಅಲ್ಲ..
ಮನಸ್ಸಿಗೆ ಧೈರ್ಯ ಬೇಕು.. ಹೇಡಿಗಳಾಗಿ ಬದುಕಬೇಡಿ, ಧೀರನಾಗಿ ಬದುಕನ್ನು ಎದುರಿಸಿ.
Audio:
Download: Link
Video:
Leave a Reply