ಗೋಶಾಲೆ ಮಾಡಬೇಕೆಂದು ಹಂಬಲಿಸುವವರು ಬಹಳ ಮಂದಿ. ಆದರೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ. ಹಲವು ಪ್ರಶ್ನೆ ಸಂದೇಹಗಳು ಕಾಡುತ್ತಿರುತ್ತವೆ. ಯಾರನ್ನು ಕೇಳುವುದು? ಎಂದು ಚಿಂತಿಸಬೇಡಿ. ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಂತಹ ಪ್ರಶ್ನೆ, ಸಂದೇಹಗಳನ್ನು ಇಲ್ಲಿ ಪರಿಹರಿಸಿದ್ದಾರೆ.

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

ಆದರ್ಶ ಗೋಶಾಲೆ

1.ನಿಮ್ಮ ಕಲ್ಪನೆಯಲ್ಲಿ ಆದರ್ಶ ಗೋಶಾಲೆ ಅಂದರೆ ಹೇಗಿರಬೇಕು ?

ಗೋಶಾಲೆಯಲ್ಲಿ ಗೋವುಗಳು ಸ್ವಸ್ಥವಾಗಿ ಸಂತೋಷವಾಗಿ ಇರಬೇಕು. ದಿಕ್ಕಿಲ್ಲದಗೋವುಗಳಿಗೆ ಆಶ್ರಯ ಬೇಕು. ಗೋವುಗಳಿಂದ ಸಮಾಜಕ್ಕೆ ತುಂಬ ಪ್ರಯೋಜನ ಆಗುವಂತೆ ಮನುಕುಲದ ಕಡೆಗೆ ಗೋಕುಲದಿಂದ ಪ್ರಯೋಜನದ ಪ್ರವಾಹವೇ ಹರಿದು ಬರುವ ಹಾಗೆ ಸಂವಿಧಾನ ವ್ಯವಸ್ಥೆ ಇರಬೇಕು ಗೋಶಾಲೆಯಲ್ಲಿ. ರೈತರು, ಸಾಮಾನ್ಯ ಮನುಷ್ಯರು ಅಲ್ಲಿಗೆ ಬಂದು ಕಲಿಯುವ ಹಾಗಿರಬೇಕು. ಅಲ್ಲಿನ ಬೇರೆ ಬೇರೆ ಸಂಗತಿಗಳು, ಅಧ್ಯಯನ ಯೋಗ್ಯವಾಗಿ ಹಾಗೂ ಗೋವು ಆರ್ಥಿಕವಾಗಿ ಲಾಭಕಾರಿ ಎಂಬುದನ್ನು ಪ್ರಚುರಪಡಿಸುವಂತಿರಬೇಕು. ಗೋವು ಲಾಭಕಾರಿ, ಗೋವನ್ನು ನಾವು ಸಾಕುವುದಿಲ್ಲ, ಗೋವೇ ನಮ್ಮನ್ನು ಸಾಕುತ್ತದೆ. ಗೋವಿನಿಂದಾಗುವ ಪ್ರಯೋಜನಗಳು, ಇವುಗಳ ಬಗ್ಗೆ ಸಾಮಾನ್ಯ ಮನುಷ್ಯ ಅಲ್ಲಿ ಬಂದು ತಿಳಿದುಕೊಳ್ಳುವ ಹಾಗೆ ಇರಬೇಕು. ತಳಿ ಸಂವರ್ಧನೆ ಆಗಬೇಕು ಅಲ್ಲಿ, ಯಾವುದಾದರೂ ತಳಿಗಳನ್ನು ಆರಿಸಿಕೊಂಡು ಆ ತಳಿಗಳನ್ನು ಉಳಿಸುವ ಬೆಳೆಸುವ ಕಾರ್ಯ ಮಾಡಬೇಕು. ಇವೆಲ್ಲವೂ ಇದ್ದಾಗ ಗೋಶಾಲೆಗೊಂದು ಅರ್ಥ.

2. ಆಧುನಿಕ ಜಗತ್ತಿಗೆ ಗೋಶಾಲೆಗಳ ಉಪಯೋಗವೇನು? ಗೋಶಾಲೆಗಳನ್ನು ಹೇಗೆ ಬಳಸಿಕೊಳ್ಳಬಹುದು?
ಗೋವುಗಳನ್ನು ಉಳಿಸುವುದೇ ಮಹೋಪಯೋಗ. ಈ ಜಗತ್ತಿಗೆ ಅತ್ಯಂತ ಅವಶ್ಯಕವಾಗಿರುವಂತದ್ದು ಗೋವುಗಳ ಉಳಿಕೆ. ಅದನ್ನು ಗೋಶಾಲೆಗಳು ಒಂದು ಮಠದಲ್ಲಿ ಮಾಡ್ತವೆ. ಒಂದುಕಾಲದಲ್ಲಿ ಮನೆಮನೆಗಳಲ್ಲಿ ಗೋವುಗಳ ರಕ್ಷಣೆ ಆಗ್ತಾ ಇತ್ತು. ಆದರೆ ಈಗ ವಾತಾವರಣ ತುಂಬ ವ್ಯತ್ಯಾಸವಾಗಿರುವುದರಿಂದ ಒಂದು ಎಮರ್ಜೆನ್ಸಿ ವ್ಯವಸ್ಥೆಯಾಗಿ ಗೋಶಾಲೆ ಬೇಕಾಗ್ತದೆ. ಹಾಗೆ ಆ ಕಾರ್ಯವನ್ನ ಗೋಶಾಲೆಗಳು ಮಾಡ್ತಾ ಇದ್ದಾವೆ. ಅದೇ ತುಂಬ ಉಪಯೋಗ.

3. ಅನೇಕ ಉತ್ಸಾಹಿ ಯುವಕರು, ನಗರ ಜೀವನದಿಂದ ಬೇಸತ್ತವರು ಗೋಶಾಲೆಗಳನ್ನು ಮಾಡುವತ್ತ ಮುಖಮಾಡುತ್ತಿದ್ದಾರೆ. ಅಂಥವರು ಶ್ರೀಮಠದಿಂದ ಯಾವ ರೀತಿಯ ಸಲಹೆ – ಸಹಕಾರಗಳನ್ನು ನಿರೀಕ್ಷಿಸಬಹುದು?
ಇದು ನಮಿಗೆ ತುಂಬ ಸಂತೋಷದ ಸಂಗತಿ. ಯುವಕರು ಹಳ್ಳಿಗೆ ಮರಳಬೇಕು, ಗೋವುಗಳ ಜತೆಗೆ, ಭೂಮಿ ತಾಯಿಯ ಜತೆಗೆ ಬದುಕಬೇಕು. ಅದು ನಮ್ಮಕನಸು. ಯಾವುದಾದರೂ ಯುವಕ ಅಂತಹ ಮನಸ್ಸು ಮಾಡಿದ್ದೇ ಆದರೆ ಅವನಿಕೆ ಎಲ್ಲಾ ಬಗೆಯ ಬೆಂಬಲವನ್ನು ಮಠ ಕೊಡುತ್ತದೆ. ಅವನಿಗೆ ಸಲಹೆ, ಮಾರ್ಗದರ್ಶನ, ಸಹಾಯ, ರಕ್ಷಣೆ ಎಲ್ಲವನ್ನೂ ಕೊಡ್ಲಿಕೆ ಮಠ ಸಿದ್ದವಿದೆ. ಮಾತ್ರವಲ್ಲ ಹಾಗೆ ಪ್ರೇರಣೆ ಕೊಡ್ಲಿಕೂ ಮಠ ಸಿದ್ದವಿದೆ. ನಮ್ಮ ಬಳಿ ಬಂದ ಅನೇಕ ವಿದ್ಯಾವಂತ ಯುವಕರಿಗೆ, ಕೆಲವು ಪತ್ರಕರ್ತರು, ಕೆಲವರು ಒಳ್ಳೊಳ್ಳೇ ಉದ್ಯೋಗದಲ್ಲಿರುವಂತಹವರು, ಅಂತಹವರು ಬಿಟ್ಟು ಗೋಶಾಲೆ ಮಾಡುತ್ತೇವೆ ಅಂಥ ಹೇಳಿದಾಗ ಸಂತೋಷವಾಗಿ ಮಾಡಿ ನೀವು ಅಂತಹೇಳಿ ಅನುಮೋದನೆಯನ್ನು ಪೆÇ್ರೀತ್ಸಾಹವನ್ನು ಕೊಟ್ಟಿದ್ದಿದೆ ನಾವು. ಅದೇ ಕಾರ್ಯವನ್ನು ಮುಂದೆಯೂ ಮಾಡುತ್ತೇವೆ.

4. ಅಕ್ರಮ ಗೋಸಾಗಾಟದ ಗೋವುಗಳನ್ನು ಸಂಘಟನೆಗಳು ಪತ್ತೆಹಚ್ಚಿ ಪೆÇಲೀಸರಿಗೊಪ್ಪಿಸಿದ ಬಳಿಕ ಪೆÇಲೀಸರು ಅವುಗಳನ್ನು ಗೋಶಾಲೆಗಳಿಗೆ ನೀಡಲು ಮುಂದಾಗುತ್ತಾರೆ. ಆಗ ಸಣ್ಣ ಪುಟ್ಟ ಗೋಶಾಲೆಗಳು ಸಾಕಣಿಕೆಗೆ ಕಷ್ಟ ಅಂತ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅದಕ್ಕೆ ಏನು ಪರಿಹಾರ ?
ಗೋವು ಭಾರ ಅಲ್ಲ. ಗೋವನ್ನು ನಾವು ಸಾಕುವುದಲ್ಲ. ಗೋವೇ ನಮ್ಮನ್ನು ಸಾಕತ್ತೆ. ಇದನ್ನ ಪಾಠಹೇಳುವಂತೆ ಗೋಶಾಲೆಗಳು ಇರಬೇಕು. ಅದಿಲ್ಲದೇ ಇರುವುದು ಈ ಸಮಸ್ಯೆಗಳಿಗೆ ಕಾರಣ. ಗೋಶಾಲೆಗಳು ಸ್ವಾವಲಂಬಿ ಆತ್ಮನಿರ್ಭರ ಆಗ್ಬೇಕು. ಗೋವುಗಳು ಕೊಡತಕ್ಕಂತಹ ಗೋಮೂತ್ರ ಗೋಮಯದಿಂದಲೇ ಗೋಶಾಲೆಗಳು ಲಾಭದಲ್ಲಿ ನಡೆಯುವಹಾಗೆ ಆಗಬೇಕು. ಅದಕ್ಕೆ ಬೇಕಾದ ಉಪಕ್ರಮಗಳನ್ನು ಗೋಶಾಲೆಗಳು ತೆಗೆದುಕೊಳ್ಳಬೇಕಾಗಿದೆ. ಮತ್ತು ಸಮಾಜವು ಕೂಡ ಸ್ಪಂದಿಸಬೇಕು. ಮತ್ತು ಸಮಾಜಕ್ಕೆ ಹೋಗಬೇಕು. ಸಮಾಜದ ಸ್ಪಂದನ ಖಂಡಿತ ಇದೆ. ಈ ಗೋಶಾಲೆಗಳನ್ನು ನಡೆಸುವಂತವ ಕೂಡ ಸಮಾಜದ ಒಳಗೆ ಇಳಿಯಬೇಕು. ಜನಸಾಮಾನ್ಯರನ್ನು ತಲುಪಬೇಕು. ಹಾಗೆ ತಲುಪಿದಾಗ ಅಲ್ಲಿಂದಲೂ ಸ್ಪಂದನ ಸಿಗುತ್ತದೆ ಮತ್ತು ಗೋವುಗಳಿಂದಲೇ ಸಾಕು. ಅದು ಏನು ಕೊಡುತ್ತದೋ ಅದೇ ಬೇಕಾದಷ್ಟಯಿತು.

5.ಗೋಶಾಲೆಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಲ್ಲಿ ಸಮಾಜದ ಪಾತ್ರವೇನು? ಸರ್ಕಾರದ ಕರ್ತವ್ಯವೇನು?
ಮನೆಗೊಂದು ಹಟ್ಟಿ ಇದ್ದಗ ಹಾಗೆ ಸಮಾಜಕ್ಕೆ ಗೋಶಾಲೆ. ಹಾಗಾಗಿ ಒಂದು ಮನೆಯವರಿಗೆ ಅವರ ಮನೆಯ ಹಟ್ಟಿಯಲ್ಲಿರುವ ಹಸುಗಳ ಬಗ್ಗೆ ಏನು ಕರ್ತವ್ಯ ಇದೆಯೋ, ಅದೇ ಕರ್ತವ್ಯ ಸಮಾಜಕ್ಕೆ ಗೋಶಾಲೆಗಳ ಕುರಿತು ಇದೆ. ನಮ್ಮ ದೃಷ್ಠಿಯಿಂದ ಯಾವ ಗೋವಾದರೂ ನಾವದಿಕೆ ಸೇವೆ ಮಾಡಬೇಕು. ಪಕ್ಕದ ಮನೆ ಗೋವಾದರೂ, ಯಾವ ಗೋವಾದರೂ ಕೂಡಾ ಗೋವು ಗೋವೇ. ಸೂರ್ಯ ನಮ್ಮ ಸೂರ್ಯ ನಿಮ್ಮ ಸೂರ್ಯ ಅಂತ ಬೇಧ ಇರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಗೋವು ಅಂತ ಆದರೆ ಸಾಕು ಮಾಡಬೇಕು. ಹಾಗಿರುವಾಗ ಇಡೀ ಸಮಾಜಕ್ಕೆ ಸಂಬಂಧ ಪಟ್ಟಹಾಗೆ ಗೋಶಾಲೆ ಇರುವುದರಿಂದ ಅದಕ್ಕೆ ಸಹಾಯವನ್ನು ಸೇವೆಯನ್ನು ಸಮಾಜ ಮಾಡದಿರುವುದು ಹೇಗೆ. ಮಾಡಬೇಕು ಸಮಾಜ. ಮತ್ತೆ ಸರ್ಕಾರದ ಪಾತ್ರ, ನಿಜವಾಗಿ ಸರ್ಕಾರದ ಪಾತ್ರವನ್ನು ಗೋಶಾಲೆಗಳೇ ಮಾಡುತ್ತಿದ್ದಾವೆ. ಸರ್ಕಾರದ ಕರ್ತವ್ಯ ಇತ್ತು. ರಾಜನನಾದವನಿಗೆ ಮನುಷ್ಯರು ಮಾತ್ರವಲ್ಲ ಎಲ್ಲ ಪ್ರಾಣಿ ಪಕ್ಷಿಗಳು ಮತ್ತು ಪ್ರಕೃತಿಯನ್ನು ರಕ್ಷಣೆ ಮಾಡತಕ್ಕಂತಹ ಹೊಣೆಗಾರಿಕೆ ಇದೆ. ಅದರಲ್ಲಿಯೂ ಗೋರಕ್ಷಣೆಯ ಹೊಣೆಗಾರಿ ತುಂಬ ವಿಶೇಷವಾಗಿದೆ. ಹೀಗಿರಬೇಕಾದರೆ ಪ್ರಚಾರದ ದೃಷ್ಠಿ, ನವೀನ ದೃಷ್ಠಿಯನ್ನೇ ತಗೊಳ್ಳಿ, ತಗೊಂಡ್ರೆ ಈಗ ಗೋವುಗಳ ಮೇಲೆ ಸಮಾಜ ಪೂರ್ತಿ ಅವಲಂಬಿತ ಆಗಿರುವುದರಿಂದ ಮತ್ತು ರೈತನೂ ಪೂರ್ತಿ ಅವಲಂಬಿತನಾಗಿರುವುದರಿಂದ ಗೋವುಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿತ್ತು. ಅದನ್ನೇ ಸರ್ಕಾರ ಪಾತ್ರವನ್ನೇ ಗೋಶಾಲೆ ಮಾಡುತ್ತಿದೆ. ಇನ್ನು ಸರ್ಕಾರದ ಪಾತ್ರ ಅಂತ ಏನನ್ನಬೇಕು. ಅವರು ಎಲ್ಲಾ ಮಾಡಿದರೂ ಕಮ್ಮಿನೇ

 

Read Gouvaani E-Magazine: www.gouvaani.in 

www.gouvaani.in

Facebook Comments Box