ಬೆಂಗಳೂರು 30-July-2015:
ಹೊಸನಗರ ಶ್ರೀರಾಮಚಂದ್ರಾಪುರ ಮಠದ ನಿತ್ಯ ಕಾರ್ಯಕ್ರಮದ ವರದಿಗಳನ್ನು ನಿಯತವಾಗಿ ಶಿಷ್ಯವೃಂದಕ್ಕೆ ತಲುಪಿಸುವ ಹರೇರಾಮ “HareRaama” ಆಂಡ್ರಾಯ್ಡ್ ಆಪನ್ನು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಗುರುವಾರ ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಈ ಆಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ(http://goo.gl/IBrhmT) ಉಚಿತವಾಗಿ ಲಭ್ಯವಿದೆ.
2.9MB ಗಾತ್ರದ ಆಪ್‌ನಲ್ಲಿ ಶ್ರೀಮಠದ ಕಾರ್ಯಕ್ರಮಗಳ ವರದಿ, ಫೋಟೋ, ವಿಡಿಯೋಗಳ ಸಂಗ್ರಹವಿದೆ. ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಬಳಕೆದಾರರು ಅಪ್ಲೋಡ್ ಮಾಡಬಹುದಾಗಿದೆ. ಇದಲ್ಲದೇ, ಶ್ರೀಗಳ ಭೇಟಿಗೆ ಸಮಯ ಕೋರಲು ಅವಕಾಶವೂ ಇದೆ.

ಈ ಸಂದರ್ಭದಲ್ಲಿ ಆಪನ್ನು ಅಭಿವೃದ್ಧಿಗೊಳಿಸಿದ ತಂಡದ ಪ್ರಮುಖರಾದ ಮಹೇಶ್ ಎಳ್ಯಡ್ಕ, ಶ್ರೀಹರ್ಷ ಪೆರ್ಲ, ಜಗದೀಶ ಚಂಪಕಾಪುರ, ಅಶ್ವಿನಿ ಉಡುಚೆ, ವಿದ್ವಾನ್ ಜಗದೀಶ ಶರ್ಮಾ, ಕೃಷ್ಣ ಪ್ರಸಾದ್ ಎಡಪ್ಪಾಡಿ, ಡಾ.ಯು.ಬಿ.ಪವನಜ ಮತ್ತಿತರರು ಹಾಜರಿದ್ದರು.

ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಗುರುವಾರ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಹರೇರಾಮ ಆಪನ್ನು ಲೋಕಾರ್ಪಣೆಗೊಳಿಸಿದರು.

English Summary:
Sri Sri Raghaveshwara Bharati Maha swamiji released HareRaama android app today at Girinagar Sri Ramashrama, Bangalore.
App is available at Google playstore in the following link: http://goo.gl/IBrhmT

Facebook Comments Box