ಕುಂಬಳೆ:
“ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು” ಎಂದು ನಿವೃತ್ತ ಉದ್ಯಮಿ ಶಂಕರನಾರಾಯಣ ಭಟ್ ಕೋಡಿಮೂಲೆ ಅಭಿಪ್ರಾಯಪಟ್ಟರು. ಅವರು 15.08.2015 ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ರಾಮಾಯಣ ಮಾಸಾಚರಣೆಯ ಸಮಾರೋಪ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕ್ಷೀರೋತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರನಾರಾಯಣ ರಾವ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ ಸ್ವಾಗತಿಸಿ ಸೃಷ್ಟಿಕ್ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

~
Report: Govinda Ballamoole

Photos: Mujungavu : Ramayana Masa – Celebration at Vidyapeetha

Facebook Comments