ಶ್ರೀ ರಾಮಾಶ್ರಮ, ಬೆಂಗಳೂರು 18-08-2015, ಮಂಗಳವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಮಂಗಳೂರು ಮಂಡಲದ ವಿಟ್ಲ, ಕೇಪು, ಕಲ್ಲಡ್ಕ, ಕುಂದಾಪುರ ವಲಯಗಳು
~
ಯಾಗಶಾಲೆ:
ಮೇಧಾ ದಕ್ಷಿಣಾ ಮೂರ್ತಿ ಹವನ
ಸ್ವರ್ಣಾಕರ್ಷಣ ಭೈರವ ಹವನ
ಸ್ವಯಂವರ ಪಾರ್ವತಿ ಪೂಜೆ
ತಿರಸ್ಕರಣೆ ಹೋಮ

~
ಧರ್ಮಸಭೆ:

ಆಶೀರ್ವಚನ ” ನಾನೇಕೆ ಹೀಗೆ?”

ಜಗತ್ತಿನಲ್ಲಿ ಹೋಲಿಕೆಯಿಲ್ಲದ ರಾಮನ ಚರಣಕ್ಕೆ ನಮನ.

ಜಗತ್ತಿನ ಎಲ್ಲ ಜೀವಿಗಳೂ, ವಸ್ತುಗಳೂ ಪರಮಾತ್ಮನಿಂದ ಬಂದಿವೆ

ಆದರೆ, ಒಂದರಂತೆ ಇನ್ನೊಂದಿಲ್ಲ

ಇಂದ್ರಿಯಗಳು ಒಮ್ಮೆಲೇ ಬೇರೆ ಬೇರೆ ಕೆಲಸಗಳನ್ನು ಮಾಡುವುದಿಲ್ಲ

ಸೃಷ್ಟಿಯಾಗುವ ಕಾಲ-ದೇಶಗಳ ವ್ಯತ್ಯಾಸದಿಂದ ಒಂದರಂತೆ ಒಂದಿಲ್ಲ

ಕೆಲವು ಸಾಮಾನ್ಯ ಹೋಲಿಕೆ ಇರುತ್ತದೆ

ಹೋಲಿಕೆಯೆಂದರೆ- ಬೇರೆಯಾಗಿದ್ದೂ ಒಂದಿಷ್ಟು ಒಂದೇ ರೀತಿ ಇರಬೇಕು

ತದ್ಭಿನ್ನತ್ವೇ ಸತಿ, ತದ್ಗತ ಭೂಯೋ ಧರ್ಮವತ್ವಮ್

ನಾವು ಒಂದೆಯೂ ಹೌದು, ಬೇರೆಯೂ ಹೌದು

ಮರವೆಲ್ಲ ಒಂದೇ,
ಮಾವಿನ ಜಾತಿ ಬೇರೆ
ಅದರ ಒಳ ಜಾತಿ ಬೇರೆ,
ಅದರಲ್ಲೂ ಪ್ರಾದೇಶಿಕ ಭಿನ್ನತೆ ಇದೆ,

ಇಂದಿನ ವಿಷಯವಾದ ಹೋಲಿಕೆ ಸುಖಕ್ಕೆ ಕಾರಣವಾಗಬೇಕಿತ್ತು…

(ಹಾಗಿಲ್ಲ… ಹಾಗಾಗಿ ನಾನೇಕೆ ಹೀಗೆ?)

ಹೋಲಿಕೆ ಏಕೆ ವೈಷಮ್ಯಕ್ಕೆ ಕಾರಣವಾಯಿತು?
ಹೋಲಿಕೆ ಮತ್ಸರಕ್ಕೆ ಕಾರಣವಾಗಿದೆ.

ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ?
ಕರುಬಿದನ ಹರಿ ಪೊರೆಯೆ
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ

ಎಷ್ಟೋ ಬಾರಿ ನಮ್ಮ ನೋವಿಗೆ ಕಾರಣ ನಮ್ಮಲ್ಲಿ ಇರುವುದೇ ಇಲ್ಲ .

ಮತ್ಸರ ಹೋಯಿತೆಂದರೆ ಇದ್ದಕ್ಕಿದ್ದಂತೆ ನೆಮ್ಮದಿ ಬರುತ್ತದೆ …

ಅಪೇಕ್ಷೆ ಕಡಿಮೆ ಆದರೆ ಬಡತನವೇ ಇಲ್ಲ

ಹೋಲಿಸಿ ಕಷ್ಟ ಪಡುತ್ತೇವೆ

ನಮ್ಮನ್ನೇ ನಮಗೆ ಹೋಲಿಸಿಕೊಂಡೂ ಸಂಕಷ್ಟ ಪಡುತ್ತೇವೆ

ನಷ್ಟ ಜೀವನದಾಸೆ

ಕಳೆದ ಜೀವನವನ್ನು ಹೋಲಿಸಿ ದುಃಖ ಪಡುತ್ತೇವೆ

ರೌರವಿಗೆ ಹಿತ, ಮಹಾರೌರವಿಯ ಗೋಳುದನಿ

ನಮ್ಮನ್ನೇ ನಾವು ನೋಡಿ ಸಮಾಧಾನ ಪಡಬೇಕು

ಆ ಸಹಜ ಸಮಾಧಾನವೇ ನಿಜವಾದ ಸಮಾಧಾನ

ಹೋಲಿಕೆಯಲ್ಲಿ ಅನುಕೂಲತೆಗಿಂತ ಅಪಾಯವೇ ಹೆಚ್ಚು

ಭಗವಂತ ನಮಗೆ ಏನೇ ಕೊಟ್ಟರೂ, ಏನೇ ಕೊಡದಿದ್ದರೂ ಅದು ಒಳ್ಳೆಯದಕ್ಕೆಯೇ

ಆತ್ಮಾವಲೋಕನ ನೆಮ್ಮದಿಯ ದಾರಿ

ತನ್ನನ್ನು ತಾನು ಪರಿಚಯಿಸಿಕೊಳ್ಳಬೇಕು

ಆ ಪರಿಚಯವನ್ನು ಮಾಡಿಕೊಡುವವ ಗುರು

ದೇವರು ನಮಗೆ, ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ಕೊಟ್ಟಿದ್ದಾನೆ …
ಅದನ್ನು ಸಮಾಜಕ್ಕೆ ನೀಡಿ

ಕೃಪೆ: ವಿದ್ವಾನ್ ಜಗದೀಶಣ್ಣ

Audio:

Download: Link

video:

Photos:

Facebook Comments