ಇಂದ,
ಸಿದ್ದರಾಮೇಶ್ವರ ಎಚ್ ಎನ್
ಪ್ರಾಧ್ಯಾಪಕರು, ವಿದ್ಯುತ ವಿಭಾಗ
ಬಿ ವಿ ಬಿ ತಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ

ಸಿದ್ದರಾಮೇಶ್ವರ ಎಚ್ ಎನ್ | ಪ್ರಾಧ್ಯಾಪಕರು, ಹುಬ್ಬಳ್ಳಿ

ಸಿದ್ದರಾಮೇಶ್ವರ ಎಚ್ ಎನ್ | ಪ್ರಾಧ್ಯಾಪಕರು, ಹುಬ್ಬಳ್ಳಿ

ನಾನು ಮೂಲತ್ಃ ಇಂಜಿನೀಯರ್ ಆಗಿದ್ದು ಜೀವನದ ಪ್ರತಿ ಹೆಜ್ಜೆಯನ್ನು ವ್ಯೆಜ್ನಾನಿಕ ನೆಲೆಗಟ್ಟಿನಿಂದ ಪರೀಕ್ಶಿಸುವ ನಾನು ಎರಡು ವರ್ಷಗಳ ಹಿಂದೆ ಸುವರ್ಣ ಟಿವಿ ಯಲ್ಲಿ ಬರುತ್ತಿದ್ದ ಶ್ರೀಗಳ ಮಾತು ಮುತ್ತುಕಾರ್ಯಕ್ರಮ ದಿಂದ ಪ್ರಭಾವಿತಳಾದ ನನ್ನ ಶ್ರೀಮತಿ ಯವರು ಗುರುಗಳ ಬಗ್ಗೆ ತುಂಬಾ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ನಮ್ಮ ಪುಣ್ಯಕ್ಕೆ ಶ್ರೀ ಗಳ ರಾಮ ಕಥೆ ಹುಬ್ಬಳ್ಳಿಗೆ ಬಂದಿತು.
ಶ್ರೀ ಗಳ ರಾಮ ಕಥೆಯ ಆ ಐದು ದಿನಗಳು ನಮ್ಮ ಜೀವನದಲ್ಲಿ ಹೊಸ ಚೈತನ್ಯತುಂಬಿತು. ಗುರುಗಳಲ್ಲಿ ಅದೇನು ಶಕ್ತಿ ಇದೆಯೋ ಆ ರಾಮನೇ ಬಲ್ಲ ಆ ದಿನದಿಂದ ನಮ್ಮ ಜೀವನದಲ್ಲಿ ರಾಮನೇ ಎಲ್ಲಾ. ಏಕಲವ್ಯನ ಭಕ್ತಿಯಂತೆ ನಮ್ಮ ಮನೆಯಲ್ಲಿ ಗುರುಗಳ ರಾಮಕಥೆಯ ಲಹರಿ ಹರಿದೇ ಇರುತ್ತದೆ. ಪ್ರತಿ ದಿನ ರಾತ್ರಿ ರಾಮಕಥೆ ಕೇಳದೆ ವಿಶ್ರಾಮವೇ ಇಲ್ಲ. ರಾಮಕಥೆ ಅಬ್ಬಾ ಅದೆಂಥ ಶಕ್ತಿ, ಗುರುಗಳ ಬಾಯಲ್ಲಿ ಕೇಳುವ ರಾಮಕಥೆ ಎಸ್ಟು ನೈಜ, ಕಣ್ಣಿಗೆ ಕಟ್ಟಿದಂಥೆ ನಮ್ಮನ್ನು ಆ ಯುಗಕ್ಕೇ ಕರೆದೋಯ್ದು ಬಿಡುತ್ತದೆ, ಅವರು ಗಳಿಸಿರಿವ ಜ್ನಾನ, ಆಳ, ವಿಡಂಬನೆ ಅವರ್ಣನೀಯ ಅದೊಂದು ಕಲಿಯುಗದ ವಿಸ್ಮಯ. ರಾಮಕಥೆ ಕೇಳುತ್ತಾ ಇದ್ದರೆ ಎಲ್ಲ ಸಮಸ್ಯೆಗಳು ಮಾಯ. ನಾನು ನನ್ನೆಲ್ಲ ಸಂಬಂದಿಗಳಿಗೆ, ಸ್ನೆಹಿತರಿಗೆ ರಾಮಕಥೆಯ ಸಿ.ಡಿ ಗಳನ್ನು ಮಾಡಿ ಕೊಟ್ಟಿರುತ್ತೆನೆ ಅವರ ಎಲ್ಲಾ ಸಮಸ್ಯೆಗಳು ನಿವಾರಣೆ ಯಾಗಿರುವದನ್ನ ನನ್ನ ಕಣ್ಣಾರೆ ಕಂಡಿದ್ದೆನೆ.

ನನ್ನ ಜೀವನದಲ್ಲಿ ಗುರುವಿನ ಮಹತ್ವವನ್ನು ಅರಿತದ್ದೆ ಶ್ರೀ ರಾಘವೇಶ್ವರರ ದರ್ಶನದಿಂದ, ಅದೊಂದು ಭಗವಂತ ನಮಗೆ ನೀಡಿರುವ ದಿವ್ಯಶಕ್ತಿ ಅದರ ಸದ್ವಿನಿಯೋಗ ಪಡೆಯುವದರ ಬದಲಾಗಿ ಇಂಥ ತುಚ್ಛ ಅಪವಾದ ಮಾಡಿದರೆ ಅದರ ಶಾಪ ಇಡೀ ಮಾನವ ಜನಾಂಗಕ್ಕೆ ಸಲ್ಲುತ್ತದೆ. ಇದನ್ನ ನಮ್ಮ ಶಕ್ತಿಮೀರಿ ಮೆಟ್ಟಿನಿಲ್ಲಬೇಕು ಮತ್ತು ಇಂಥ ದುಶ್ಟಶಕ್ತಿಗಳಿಂದ ನಮ್ಮ ಸಮಾಜವನ್ನು ಕಾಪಡುವದು ನಮ್ಮೆಲ್ಲರ ಕರ್ತ್ಯವ್ಯ. ಇಲ್ಲದೆ ಹೋದರೆ ನಾಳೆ ನಮ್ಮ ಮುಂದಿನಿ ಜನಾಂಗಕ್ಕೆ ನಮ್ಮ ಕೊಡುಗೆ ಏನು?

Create awareness among people: Please stop this nonsense! Join hands to protect our heritage our Matha our beloved Guruji, It is our duty..

Hare Raama..

Facebook Comments