(ವರದಿ: ಶಂಕರನಾರಾಯಣ ಭಟ್, ಅಡ್ಕತ್ತಿಮಾರು)

ಮೀಯಪದವು (ಕಾಸರಗೋಡು), 29-ಅಗೋಸ್ತು-2014,

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ತೇಜೋವಧೆ ವಿರುದ್ಧವಾಗಿ ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಪ್ರತಿಭಟನಾ ಸಭೆಯನ್ನು ಕೋಳ್ಯೂರು ಹವ್ಯಕ ವಲಯ ಮತ್ತು ಗುರುಭಕ್ತ ಸಮಾಜ ಬಾಂಧವರ ಸಹಯೋಗದಿಂದ ನಡೆಸಲಾಯಿತು.
ಶ್ರೀ ಚಕ್ರಕೋಡಿ ಈಶ್ವರ ಶಾಸ್ತ್ರಿಗಳು ಸ್ವಾಗತಿಸಿದರು.
ಜ್ಯೋತಿಷಿ ಕೇಶವ ಭಟ್ ಅಮ್ಮನಡ್ಕ ಗುರುಪರಂಪರೆಯ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.
ಶ್ರೀ ಸತೀಶ ಅಡಪ ಸಂಕಬೈಲು ಮಾತನಾಡುತ್ತಾ ಗುರುಶಾಪಕ್ಕೆ ಒಳಗಾದವರು ಯಾವ ಜನ್ಮಕ್ಕೂ ಮುಕ್ತಿಯನ್ನು ಹೊಂದಲಾರರು ಎಂದು ತೀವ್ರವಾಗಿ ಖಂಡಿಸಿದರು. ಶ್ರೀಮಾನ್ ವಸಂತಭಟ್ ಧನ್ಯವಾದವಿತ್ತರು.

 

Facebook Comments