ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ  “ವಲಯೋತ್ಸವ”

ಸಂಜಯನಗರ: 21.12.2014

ದಿನಾಂಕ 21.12.2014 ನೇ ಭಾನುವಾರ ಸಂಜಯನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್  ನಲ್ಲಿ ಸಂಜಯ ವಲಯ – ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ  “ವಲಯೋತ್ಸವ” ವೈಭವಯುತವಾಗಿ ನಡೆಯಿತು. ಮಧ್ಯಾ:ನ್ನ  1:00 ಘಂಟೆಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಶ್ರೀ ಗಳು ಆಶೀರ್ವಚನದಲ್ಲಿ ಮಾತನಾಡಿ, “ಹಿಂದೆಯೂ ನಾವು ಇಲ್ಲಿ ಬಂದಿದ್ದೇವೆ. ಇಂದಿನ ಈ  ಸನ್ನಿವೇಶದಲ್ಲಿ ನಿಮ್ಮ ಯಾರ ಮುಖದಲ್ಲಿಯೂ ಕಾರ್ಮೋಡದ ಛಾಯೆ ಇಲ್ಲ. ಕಾರ್ಮೋಡ ಸೂರ್ಯನನ್ನು ಏನೂ ಮಾಡುವುದಿಲ್ಲ. ಆಗಸದಲ್ಲಿ ಬೆಳ್ಳಿ ಮೋಡವೂ ಇರುತ್ತದೆ ಕಾರ್ಮೋಡವೂ ಇದೆ. ಬೆಳ್ಳಿ ಮೋಡ ಅಲಂಕಾರಕ್ಕೆ ಮಾತ್ರ. ಕಾರ್ಮೋಡ ಕವಿದರೆ ಅದು ಕರಗಲೇ ಬೇಕು. ಅದು ಕರಗಿ ಮಳೆಯಾಗಿ ಭೂಮಿಗೆ  ಬರಲೇ ಬೇಕು. ಕಾರ್ಮೋಡ ಸೂರ್ಯನನ್ನು ಎನೂ ಭಾಧಿಸಲಾರದು. ಅದು ಸ್ವಲ್ಪ ಹೊತ್ತು ಜನರಿಗೆ ಸೂರ್ಯನನ್ನು ಮರೆಮಾಡಿದಂತೆ ಕಾಣುತ್ತದೆ. ಧೀರ ಅಂದರೆ ಯಾರು? ಕಾಳಿದಾಸ ಕೊಡುವ ವ್ಯಾಖ್ಯಾನ, ಧೀರ ಅಂದರೆ ಮಧ್ಯರಾತ್ರಿಯಲ್ಲಿ ಸ್ಮಶಾನಕ್ಕೆ ಹೋಗುವವನು ಅಲ್ಲ, ಧೈರ್ಯ ವಿಕಾರಕ್ಕೆ ಕಾರಣವಾಗುವ ಸಂಗತಿ ಎದುರಿಗಿದ್ದರೂ ಯಾರ ಮನಸ್ಸು ವಿಕಾರವಾಗುವುದುಲ್ಲವೋ ಅವನು ಧೀರ. ಈ ಸಮಾಜ ಮತ್ತು ಮಠ ಹೇಗೆ ಅಂದರೆ, ಎಂಥಾ ಚಂಡಮಾರುತ ಬೀಸಲಿ, ಭೂಮಿಯೇ ಕ೦ಪಿಸಲಿ ನಾವು ಕಂಪಿಸುವುದಿಲ್ಲ. ನಮಗೆ ನಮ್ಮ ಬಗ್ಗೆ ಪೂರ್ಣ ವಿಶ್ವಾಸವಿದೆ. ಅದಕ್ಕಿಂತಲೂ ಹೆಚ್ಚು ನಮಗೆ ಕಾಣಿಸುತ್ತಿರುವುದು ನಿಮಗೆ ನಮ್ಮಲ್ಲಿರುವು ಈ ವಿಶ್ವಾಸ. ಇಂತಹ ಸಂದರ್ಭದಲ್ಲಿಯೂ ನಮ್ಮ ಶಿಷ್ಯರು ಹಿಂದಿಗಿಂತಲೂ ಹೆಚ್ಚು ನಿಷ್ಠೆಯಲ್ಲಿ ಇದ್ದೀರಿ. ನಮಗೆ ಮೊದಲೂ ಯಾರ ಬಗ್ಗೆ ಪೂರ್ಣ ವಿಶ್ವಾಸವಿರಲಿಲ್ಲವೋ ಅವರೇ ಇಂದು ವಿರುದ್ದವಾಗಿರುವವರು. ಯಾರ ಬಗ್ಗೆ ನಮಗೆ ನೂರಕ್ಕೆ ನೂರಕ್ಕೆ ಭರವಸೆ ಇತ್ತೋ ಅವರು ಇಂದೂ ಅದೇ ವಿಶ್ವಾಸದಲ್ಲಿ ನಮ್ಮ ಜೊತೆ ಇದ್ದಾರೆ.” ಎಂದು ಇಂದಿನ ಸನ್ನಿವೇಶದ ಬಗ್ಗೆ ವಿಶ್ಲೇಷಿಸಿದರು. 

ಬೆಳಗ್ಗೆ 7.00 ಘಂಟೆಗೆ ರುದ್ರಾಭಿಷೇಕದೊಂದಿಗೆ  ಕಾರ್ಯಕ್ರಮ ಪ್ರಾರಂಭವಾಯಿತು. 10.00 ರಿಂದ 11.00 ಘಂಟೆಯ ವರೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಠದ ಕಾರ್ಯದರ್ಶಿ ಶ್ರೀ ಮೋಹನ ಭಾಸ್ಕರ ಹೆಗಡೆ ಮಾತನಾಡಿ ಮಠದ ವಿರುದ್ದ ನಡೆದ ಷಡ್ಯಂತ್ರ ಗಳ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರು ಮಹಾಮಂಡಲದ ಅಧ್ಯಕ್ಷ ಕೇಶವಕುಮಾರ್ ಪ್ರಾಸ್ತಾವನೆ ಮಾಡಿದರು. ಮಹಾಮಂಡಲದ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ, ಉಪಾದ್ಯಕ್ಷರಾದ ಡಾ|| ಸೀತಾರಾಮ ಪ್ರಸಾದ , ಬೆಂಗಳೂರು ಮಂಡಲದ ಕಾರ್ಯದರ್ಶಿ  ಜಿ . ಜಿ. ಹೆಗಡೆ ತಲೆಕೇರಿ  ವಲಯ ಅಧ್ಯಕ್ಷ ಕುಕ್ಕಜೆ ರಾಮಕೃಷ್ಣ ಭಟ್,  ವಲಯ  ಕಾರ್ಯದರ್ಶಿ ಗಣಪತಿ ಹೆಗಡೆ ತಲೆಕೇರಿ,  ಬೆಂಗಳೂರು ಮಂಡಲದ ಮಾತೃ ವಿಭಾಗದ ಅದ್ಯಕ್ಷೆ ಶ್ರೀಮತಿ ವೀಣಾ ಗೋಪಾಲಕೃಷ್ಣ ಉಪಸ್ಥಿತರಿದ್ದರು. 

~*~

ಸಂಜಯನಗರ ವಲಯೋತ್ಸವ -ಶ್ರೀಶ್ರೀ

ಸಂಜಯನಗರ ವಲಯೋತ್ಸವ -ಶ್ರೀಶ್ರೀ

ಸಂಜಯನಗರ ವಲಯೋತ್ಸವ -ಶ್ರೀಶ್ರೀ ಆಶೀರ್ವಚನ

ಸಂಜಯನಗರ ವಲಯೋತ್ಸವ -ಶ್ರೀಶ್ರೀ ಆಶೀರ್ವಚನ

Facebook Comments