ತಲಕಾಲಕೊಪ್ಪ: 03-02-2015 ಸೊರಬದ “ಭಗವತ್ಪಾದಾರ್ಪಣ” ಕಾರ್ಯಕ್ರಮಕ್ಕಾಗಿ ತಲಕಾಲಕೊಪ್ಪದ ಶ್ರೀಸೀತಾರಾಮಚಂದ್ರ ದೇವಸ್ಥಾನಕ್ಕೆ ಅಗಮಿಸಿದ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರನ್ನು ಶಿಷ್ಯಜನಸಮೂಹ ಹೃದಯಾಂತರಾಳದ ಸ್ವಾಗತದೊಂದಿಗೆ ಬರಮಾಡಿಕೊಂಡಿತು. ಮರುದಿನ 03-02-2015 ರಂದು ತಲಕಾಲಕೊಪ್ಪದ ದೇವಸ್ಥಾನದಲ್ಲಿ ನಡೆದ “ಭಗವತ್ಪಾದಾರ್ಪಣ” ಕಾರ್ಯಕ್ರಮ ಮತ್ತು ಶ್ರೀರುದ್ರಹವನದ ಪೂರ್ಣಾಹುತಿಯ ಛಾಯಾಚಿತ್ರಗಳು.
ಪೆರಾಜೆ-ಮಾಣಿ ಮಠಃ 23.7.2013 ಮಂಗಳವಾರ ಶ್ರೀಗುರುಗಳು ಚಾತುರ್ಮಾಸ್ಯದ ವ್ರತ ಸ್ವೀಕಾರ ಮಾಡಿದ ಮರುದಿನ ಶ್ರೀಪರಿವಾರದ ದಿನ. ಶ್ರೀಪರಿವಾರದ ಬಂಧುಗಳು ತಮ್ಮ ನಿತ್ಯಸೇವೆಯ ಜೊತೆಗೆ ಶ್ರೀಗುರುಗಳ ವಿಶೇಷ ಸೇವೆಯಲ್ಲಿ ಭಾಗಿಗಳಾಗುವ ದಿನ. ಈ ದಿನದ ಕಾರ್ಯಕ್ರಮದಲ್ಲಿ ಗುರುಸೇವಾ ಧುರಂಧರ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಶಿವರಾಮಶಾಸ್ತ್ರಿ ದಂಪತಿಗಳನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ… Continue Reading →