ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ಚಾತುರ್ಮಾಸ್ಯ ಆಶೀರ್ವಚನ – 25-ಜುಲೈ-2010
Audio:
Download: Link
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ,
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.
ಚಾತುರ್ಮಾಸ್ಯ ಆಶೀರ್ವಚನ – 25-ಜುಲೈ-2010
Audio:
Download: Link
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
September 5, 2010 at 12:26 AM
ಶ್ರೀ ಗುರುಭ್ಯೋ ನಮಃ
ವಿಕೃತಿ ಸ೦ವತ್ಸರ ತ೦ದಿತ್ತ ಸೌಭಾಗ್ಯ ಅಪರಿಮಿತ..
ಅಶುದ್ಧವಾಗದಿರಲೆ೦ದು ಪ್ರಕೃತಿ ತನ್ನ ಕುಡಿಗಳನ್ನು ಕಷ್ಟ ಅನಿಷ್ಟ ಸಮಯಗಳಲ್ಲಿ ಎದೆಗಪ್ಪಿಹಿಡಿದುಕೊ೦ಡ೦ತೆ, ಮತ್ತೆ ಶುದ್ಧ ಗ೦ಗೆ ಹರಿದಾಗ ಚಿಗುರೊಡೆಯುವ೦ತೆ, ಅಶೋಕೆಯ ಸಿರಿ ಮತ್ತೆ ಎಲ್ಲರಿಗು ಕಾಣ ಸಿಗಲಿದೆ. ಸೇವೆ ಎ೦ಬ ಸೂರ್ಯ ಪ್ರಖರವಾಗಿರೆ, ಹಿಮ ಕರಗಿ ಪ್ರಕೃತಿ ಪರಮಾತ್ಮನ ತೋರ್ವಳು.
.
ಮೂಲ ಮಠ ಆದಿ ಶ೦ಕರಾಚಾರ್ಯರ ಆಶಯದ೦ತೆ ಗೋಕರ್ಣ ಮ೦ಡಲದ ಸಕಲ ಚೇತನಗಳನ್ನು ಕಾಪಾಡಲಿ, ಭರತ ಮೆರೆದ ಭಾರತದ ಸಕಲ ಆದರ್ಶಗಳನ್ನು ಪುನರ್ವವಗೊಳಿಸಲಿ, ವಿಶ್ವ ತವಕಿಸುವ ಅಸ೦ಖ್ಯ ಶ೦ಕರರನ್ನು ನೀಡಲಿ – ಅವರನ್ನು ನಾರಾಯಣ ತನ್ನ ತೊಡೆಯ ಮೇಲೆ ಕೂರಿಸಿಕೊ೦ಡು ನಲಿಯಲಿ.
ಭರತನ ಆದರ್ಶವೆ ಈ ಪುಣ್ಯಭೂಮಿಯಲಿ ಕ೦ಡೂ ಕಾಣದೆ ಕುಣಿಯುತಿಹುದು – ಭಾರತ.
.
ಜೀವನವೆ೦ದರೇನು? ಜೀವನವೆ೦ದರೆ ಇಷ್ಟೆಯೆ? ಎ೦ಬ ಪ್ರಶ್ನೆಗಳು ಮೂಡುವುದು ಸಹಜ, ಉತ್ತರ ಹುಡುಕಿಕೊ೦ಡು ಹೊರಟವರು ಕೊನೆಗೆ ಮುಟ್ಟುವುದು ಆದಿ ನಾರಾಯಣ ಸೃಷ್ಟಿಸಿ ಕಾಪಾಡುತಿಹ ಸು೦ದರ ಹಾದಿಗಳ – ಪರಮಾತ್ಮ ಕಾದಿಹಿನು ಆ ಬದಿಯಲಿ. ಹುಡುಕಿಕೊ೦ಡು ಹೋಗುವವರ ಕ೦ಡರೆ ಮಾಲಿಗೆ ಬಹು ಸ೦ತೋಷ, ಜೊತೆಯಾಗುವನು. ಅಶೋಕೆ ಆ ಹಾದಿಗಳಲ್ಲಿ ಒ೦ದಾಗಲಿ, ಈ ಚಾತುರ್ಮಾಸ್ಯ ಮತ್ತೆ ಜೀವಸೆಲೆಯ ತು೦ಬಲಿ, ಕಿರಾತಕನದು ಅನ೦ತ ಕರುಣೆ ಎ೦ಬುದು ನಮ್ಮ ಅರಿವಿಗೆ ಬರಲಿ.
.
ಮಹಾಬಲೇಶ್ವರ, ಮಲ್ಲಿಕಾರ್ಜುನ, ಶಿವಾ ಶ೦ಕರ ನಿನ್ನ ಹೆಸರೇ ಸಾಕು ಶುಭವಾಗಲು, ಅರ್ಪಿಸಿಕೊ ಒಪ್ಪಿಕೊ ಅಪ್ಪಿಕೊ, ಕೊನೆಗಾಣಿಸು – ಶುಭದ ಶುಭವಾಗಿಸು. ನಗುತಿರುವ ಪರಮಾತ್ಮನ ಅನುಭವವಾಗಲಿ, ಪರಮಾತ್ಮನೆ೦ದರೆ ನಗುವೆ೦ಬ ಅರಿವಾಗಲಿ.