ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ – 18/12/2015
ಗಿರಿನಗರ ಶ್ರೀರಾಮಾಶ್ರಮದ ಪುಣ್ಯಪರಿಸರದಲ್ಲಿ ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಸಂಪನ್ನವಾಯಿತು.
ಜೀವನಕ್ಕೆ ಧರ್ಮ ಮೂಲವಾಗಿದ್ದು, ಧರ್ಮವನ್ನು ಅರಿಯಲು ಗುರು ಅವಶ್ಯ, ಹಾಗಾಗಿ ಗುರು ಸರ್ವಶ್ರೇಷ್ಟ ಎಂದು ಹೇಳಲಾಗಿದೆ. ಅಂತೆಯೇ ಶ್ರೇಷ್ಟವಾದ ಆಚಾರ್ಯ ಪರಂಪರೆಯನ್ನು ಪಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಸಾನ್ನಿಧ್ಯವಹಿಸಿದ್ದ ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಗುರುಗಳು ತರ್ಕಾದಿ ಶಾಸ್ತ್ರಗಳಲ್ಲಿ ಅನುಪಮವಾದ ಜ್ಞಾನ ಹೊಂದಿದ್ದರು, ಕೃಷಿ – ವ್ಯಾವಹಾರಿಕತೆ ಇತ್ಯಾದಿಗಳಲ್ಲೂ ಅವರು ಪ್ರಾವೀಣ್ಯವನ್ನು ಸಂಪಾದಿಸಿದ್ದರು, ಯಾವುದೇ ವಿಷಯವಾದರೂ ಅವುಗಳಲ್ಲಿ ನಿರರ್ಗಳವಾದ ವಿದ್ವತ್ತನ್ನು ಅವರು ಸಾಧಿಸಿಕೊಂಡಿದ್ದರು. ಸಿಂಹದಂತೆ ಗಂಭೀರ ಸ್ವಭಾವದವರಾದರೂ ಮುಗ್ದ ಮಾತೃಹೃದಯಿಯಾಗಿದ್ದರು ಎಂದು ಪೂರ್ವಾಚಾರ್ಯರಾದ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರನ್ನು ಶ್ರೀಗಳು ಸ್ಮರಿಸಿದರು.
ಮುಷ್ಟಿದ್ರವ್ಯಸಮರ್ಪಣೆ ಹಾಗೂ ಗುರುಪರಂಪರಾಪೂಜೆಯನ್ನು ಸ್ವೀಕರಿಸಿದ ಶ್ರೀಗಳು,ಗುರುಪರಂಪರೆಯ ಸಂಪೂರ್ಣ ಅನುಗ್ರಹವಿದ್ದು, ಮೂಲಮಠದ ಪುನರ್ನಿರ್ಮಾಣ ನಿರಾತಂಕವಾಗಿ ಸಂಪನ್ನವಾಗಲಿದೆ, ಈ ಪುಣ್ಯಕಾರ್ಯದಲ್ಲಿ ಭಾಗಿಗಳಾಗಿ ಧನ್ಯರಾಗಿ ಎಂದು ಹಾರೈಸಿದರು.
ಧರ್ಮರಕ್ಷೆಗಾಗಿ ಯತಿಗಲೆಲ್ಲಾ ಒಂದಾಗಬೇಕಾಗಿದ್ದು, ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ,ಸಂತ ಜಾಗೃತನಾದರೆ ಸಮಾಜವೇ ಜಾಗ್ರತವಾದಂತೆ,ಹಾಗಾಗಿ ಯತಿಗಳೆಲ್ಲಾ ಒಂದಾಗಬೇಕು ಎಂದು ಆಶಿಸಿದರು.
ಪೂರ್ವಾಚಾರ್ಯರಾದ ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ನೆನಪಿನಲ್ಲಿ ಕೊಡಮಾಡುವ ಶ್ರೀ ರಾಘವೇಂದ್ರ್ರಭಾರತೀ ಪಾಂಡಿತ್ಯಪುರಸ್ಕಾರವನ್ನು ಸಾಹಿತಿ,ವಿದ್ವಾಂಸ ಡಾ||ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಇವರಿಗೆ ಶ್ರೀಗಳು ಅನುಗ್ರಹಿಸಿದರು. ಪುರಸ್ಕಾರ ಸ್ವೀಕರಿಸಿದ ಸೂರ್ಯನಾರಾಯಣ ಭಟ್ ಅವರು, ಇದನ್ನು ನಾನು ಪುರಸ್ಕಾರ ಎಂದು ಭಾವಿಸುವುದಿಲ್ಲಾ, ಇದನ್ನು ಪರಮಾನುಗ್ರಹ ಎಂದು ಭಾವಿಸುತ್ತೇನೆ, ಸಾಹಿತ್ಯಕೃಷಿಗೆ ಪೂರಕವಾಗಿ ಶ್ರೀಗಳ ಅನುಗ್ರಹನವನ್ನು ಬೇಡುತ್ತೇನೆ ಎಂದರು.
ಸಭಾನಿರ್ವಹಣೆಯನ್ನು ಕೂಜಳ್ಳಿ ಗಣೇಶ ಅವರು ನಿರ್ವಹಿಸಿದರೆ, ಕೃಷ್ಣಾನಂದ ಶರ್ಮಾ ಮುಂದಿನ ಫೆಬ್ರವರಿಯಲ್ಲಿ ಆಯೋಜನೆಗೊಂಡ ಸಹಸ್ರ ಸಂತ ಸಂಗಮದ ಕುರಿತು ಮಾಹಿತಿ ನೀಡಿದರು. ಸಮ್ಮುಖಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್, ಮೂಲಮಠ ಪುನರ್ನಿರ್ಮಾಣ ಸಮೀತಿಯ ಪದಾಧಿಕಾರಿಗಳು, ಮಹಾಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರು ಮಂಡಲ ಹಾಗೂ ಶ್ರೀರಾಮಾಶ್ರಮಸೇವಾಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
December 21, 2015 at 12:11 AM
shree gurubhyo namaha
sadaa shree gurugala aashirwaada galannu bayasuttiruva
meenaakshi mattu ganapti baht dampatiglu
haagu makkalu
manglore
sadya canada vaasigalu
( agnihotri akka mattu bhava )
December 21, 2015 at 9:01 AM
hare raama
shee gurubhyo namaha
December 21, 2015 at 9:41 PM
Harerama…..