#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
06-08-2018:

ಜೀವನದಲ್ಲಿ ಯಾವುದನ್ನು ಮಾಡಿದರೂ ಸಿದ್ಧಿಯಾಗುವವರೆಗೂ ಅದನ್ನೇ ಮಾಡು, ಪೂಣ೯ವಾಗಿ ಮಾಡು. ಆಳವಾಗಿ ಮಾಡು. ಚಿತ್ತಚಾಂಚಲ್ಯ ಬೇಡ. – ಇದು ಜೀವನದ ಪಾಠ.

ಪಾಣಿನಿಯಂತೆ ಸಾಧನೆ ಮಾಡಬೇಕು.
“ಬಾವಿಕಟ್ಟೆಯ ಮೇಲಿನ ಕಲ್ಲು ಬಿ೦ದಿಗೆ ಇಟ್ಟು ಇಟ್ಟು ಸವೆಯಬಹುದಾದರೆ, ಪರಿಶ್ರಮ ಪಟ್ಟು ಪಟ್ಟು ವಿದ್ಯೆ ನನಗೇಕೆ ಒಲಿಯಬಾರದು” ಇದು ಪಾಣಿನಿಯ ಭಾವ.

ಕೈಯಲ್ಲಿ ವಿದ್ಯಾರೇಖೆಯೇ ಇಲ್ಲದ ಪಾಣಿನಿಯು ಕತ್ತಿಯಲ್ಲಿ ಕೊಯ್ದು ಮಾಡಿದ ವಿದ್ಯಾರೇಖೆಯನ್ನು ಕಂಡು ಕರುಣೆಯಿಂದ ತಪಸ್ಸಿನ ದಾರಿ ತೋರಿದ, ಗುರು.

ಭಾಗ್ಯದ ರೇಖೆಯನ್ನು ಬದಲಿಸುವ ದಿವ್ಯಗುರುಕರ…

ಶಿವನ ಕುರಿತು ಕಠಿಣ ತಪಸ್ಸಿಗೆ ಒಲಿದ ಶಿವ ತನ್ನ ಡಮರುಗ 14 ಬಾರಿ ಬಡಿದ ಅದೇ ಶಿವಸೂತ್ರ ಜಾಲ.
ಎಲ್ಲ ಸ್ವರ, ವ್ಯಂಜನ ಅಕ್ಷರಗಳು ಅದರಲ್ಲಿಯೇ ನಿಹಿತ, ಇದನ್ನು ಆಧರಿಸಿಯೇ ಇಡೀ ಸಂಸ್ಕೃತ ವ್ಯಾಕರಣ.
ಹೊಸದಾದ ಶಬ್ದ ಹುಟ್ಟುಹಾಕಲು ಜಗತ್ತಿನ ಎಲ್ಲ ಭಾಷೆಗಳ ಪೈಕಿ ಸಂಸ್ಕೃತದಲ್ಲಿ ಮಾತ್ರಾ ಅವಕಾಶ
8 ಅಧ್ಯಾಯಗಳಲ್ಲಿ 3983 ಸೂತ್ರಗಳ ರಚನೆ. ಉಳಿದೆಲ್ಲ ಶಾಸ್ತ್ರಗಳಿಗೂ ಇದೊಂದೇ ಆಧಾರ.
ಇದೆಲ್ಲ ಸಾಧ್ಯ ಆದದ್ದು ಏಕಾಗ್ರತೆಯಿಂದ, ನಮಗೂ ಹೀಗೆ ಏಕಾಗ್ರತೆಯು ಸಿದ್ಧಿಸಲು ರಾಮನ ಸ್ಮರಣೆ ಅವಶ್ಯ.

ನದಿಯಲ್ಲಿ ಇರುವ ಕಲ್ಲುಗಳು ಚಿತ್ರ ವಿಚಿತ್ರವಾಗಿ ಕೊರೆದಿರುತ್ತೆ. ಆದರೆ ಅದನ್ನು ಯಾರೂ ಹಾಗೆ ಮಾಡಿರುವುದಿಲ್ಲ…
ನೀರಿನ ಸತತ ಹರಿವಿಗೆ ಸಿಲುಕಿ ಕಲ್ಲು ಕೊರೆದಿರುತ್ತೆ. ಮೃದುವಲ್ಲಿ ಮೃದುವಾದ ನೀರೂ ಕಠಿಣದಲ್ಲಿ ಕಠಿಣವಾದ ಕಲ್ಲನ್ನು ಕೊರೆಯಲು ಹೇಗೆ ಸಾಧ್ಯವಾಯಿತು? ಅದಕ್ಕೆ ಕಾರಣ ನಿರಂತರತೆ. ಏಕನಿಷ್ಠೆ ಇದ್ದರೆ ನೀರಿಗಾದರೂ ಕಲ್ಲನ್ನಾದರೂ ಕೊರೆಯಲು ಬರುತ್ತದೆ.

ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ ಯೋಗ್ಯವಾದ ಒಂದು ವಿಷಯದಲ್ಲಿ ದೃಢವಾಗಿ ನಿಲ್ಲಿ.
ಸಂಬಾರು ಸಾಧನಗಳ ಬಟ್ಟಲಿನಂತ ಜೀವನ ಬೇಡ, ಒಂದನ್ನೇ ಹಿಡಿದು ದೃಢವಾಗಿ ನಿಲ್ಲಿ.

ಎಲ್ಲದರಲ್ಲೂ ಭಗವಂತ ಇದಾನೆ. ಯಾವುದೇ ವಿಷಯದ ಆಳಕ್ಕೆ, ತುತ್ತ ತುದಿಗೆ ತಲುಪಿದರೂ ಅಲ್ಲಿ ಭಗವಂತ ಸಿಗುತ್ತಾನೆ.

ಪಾಣಿನಿ ಪ್ರಮಾಣಭೂತನಾದ ಆಚಾರ್ಯ, ಅಷ್ಟು ದೊಡ್ಡ ವ್ಯಾಕರಣ ಶಾಸ್ತ್ರವನ್ನು ಒಂದಕ್ಷರ ಕೂಡಾ ವ್ಯಥ೯ವಿಲ್ಲದಂತೆ ರಚನೆ ಮಾಡಿದ್ದಾರೆ. ಅವರೇ ಸಮಸ್ತ ಜ್ಞಾನ ಪ್ರಪಂಚಕ್ಕೆ ದ್ವಾರ.
ಅವರಿಗೆ ತಲೆಬಾಗಿ ನಮಿಸೋಣ.

ಬದುಕಿನಲ್ಲಿ ಇರುವ, ಬರುವ ಎಲ್ಲ ವಸ್ತುಗಳೂ, ಭಗವಂತನದ್ದೇ, ಅದನ್ನು ಮರಳಿ ಅವನಿಗೇ ಸಮಪಿ೯ಸಿದವನು ಕೃತಾಥ೯ನಾಗುತ್ತಾನೆ.
ಕೆರೆಯ ನೀರನು ಕೆರೆಗೆ ಚೆಲ್ಲಿ… ಎಂಬಂತೆ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments