#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
08-08-2018:

ಭಾಗವತ ಓದುವಾಗ ಅದರಲ್ಲಿ ಇಳಿಯಬೇಕು, ಮುಳುಗಬೇಕು ಲೀನವಾಗುವವರೆಗೆ ಅದರ ಪಾನ ಮಾಡಬೇಕು. ಮನಸ್ಸಿನಲ್ಲಿ ಚಂಚಲತೆ ಇದ್ದರೆ ಉಪಯೋಗ ಇಲ್ಲ.
ಪಾರಾಯಣ ಮಾಡುವವರು ಕಡಿಮೆ, ಮುಗಿಸುವವರೇ ಹೆಚ್ಚು. ಅದರಿಂದ ಉಪಯೋಗ ಇಲ್ಲ, ಅದರೊಳಗೆ ಮುಳುಗಬೇಕು, ನಿಮ್ಮ ಅಸ್ತಿತ್ವ ಬೇರೆ ಎಂದು ಇರಬಾರದು.

ಇಂದಿನ ಉದಾಹರಣೆ ಮಲ್ಲಿನಾಥ ಸೂರಿ, ಸಂಸ್ಕೃತ ಸಾರಸ್ವತ ಪ್ರಪಂಚದ ಅತ್ಯದ್ಭುತ ವ್ಯಾಖ್ಯಾನಕಾರನದು. ಕಾಳಿದಾಸನ ಎಲ್ಲ ಕೃತಿಗಳಿಗೆ ಪ್ರಮಾಣ ವಾದ ವ್ಯಾಖ್ಯಾನ ಬರೆದಿದ್ದಾನೆ.

ತತ್ತ್ವಭಾಗವತಮ್

ಹುಟ್ಟಿನಿಂದ ಮೂರ್ಖ, ಪಂಡಿತರ, ಹಣವಂತರ ಮನೆತನ, ವಿದ್ಯೆ ಹತ್ತಲಿಲ್ಲ ಗುರುಕುಲದಲ್ಲಿಯೂ ಲಾಭವಾಗಲಿಲ್ಲ. ಹಿಂದಿರುಗಿದ, ಗುಟ್ಟನ್ನು ಮುಚ್ಚಿಟ್ಟು ಮದುವೆ ಮಾಡಿದರು.
ಪತ್ನಿ ವಿದ್ವಾಂಸಳು, ಪತಿಯ ದೋಷ ಹೊರಗೆ ಪ್ರಕಟ ಮಾಡಲಿಲ್ಲ. “ನಿಜವಾದ ಸಾಥ್ವಿ ಗಂಡನ ದೋಷವನ್ನು ಹೊರಗೆ ಹೇಳುವುದಿಲ್ಲ”
ತವರಿಗೆ ಹೋಗಿದ್ದಾಗ ತಾಳೆ ಪತ್ರಗಳನ್ನ ಒಣಗಿಸುತ್ತಿದ್ದರು. ಅಲ್ಲಿ ಪತ್ರ ತಲೆಕೆಳಗಾಗಿ ಹಿಡಿದು ಇವನ ಮೂರ್ಖತನ ಬಯಲಾಯಿತು. ಎಲ್ಲರೂ ಅಪಹಾಸ್ಯ ಮಾಡಿದರೆ ಹೆಂಡತಿ ಬಯ್ದಳು. “ಶವಕ್ಕೂ ನಿಮಗೂ ಏನೂ ವ್ಯತ್ಯಾಸವಿಲ್ಲ” ಎಂದಾಗ ಅವನಿಗೆ ಬೇಸರವಾಯಿತು. ರಾತ್ರೋರಾತ್ರಿ ಯಾರಿಗೂ ಹೇಳದೆ ಮನೆ ಬಿಟ್ಟ, ಪಂಡಿತನಾದರೆ ಮಾತ್ರಾ ತಿರುಗಿ ಬರುವೆನೆಂದು ಪ್ರತಿಜ್ಞೆ ಮಾಡಿದ.
ಪಂಡಿತರ ಲೋಕವೇ ಹೀಗೆ.
ಕಾಶಿಗೆ ಹೋದ, ದೊಡ್ಡ ಪಂಡಿತರಲ್ಲಿ ವಿದ್ಯ ಬೇಡಿದ, ಅವರಲ್ಲಿ ಪ್ರವೇಶ ಪರೀಕ್ಷೆ ಇತ್ತು, ಅವರೇ ರಚಿಸಿದ ಒಂದು ಗ್ರಂಥವನ್ನು ಓದಿ ಅರ್ಥ ಮಾಡಿಕೊಳ್ಳಬೇಕಿತ್ತು,
ಅವನ ಜೀವನದಲ್ಲಿ ಬೇಕಾಗಿದ್ದದ್ದು ಚಿತ್ತೈಕಾಗ್ರತೆ, ಅದೊಂದು ಬಂದರೆ ಎಲ್ಲವೂ ಬರುತ್ತದೆ.
ಅವನಿಗೆ ಕೊಟ್ಟ ಗ್ರಂಥ ಹಿಡಿದು ಎರಡೇ ದಿನದಲ್ಲಿ ಹಿಂತಿರುಗಿದ. ಅರಗಿಸಿಕೊಳ್ಳುವುದು ಅಂದರೆ ತಿಂದು ಅರಗಿಸೋದು ಅಂತ ಭಾವಿಸಿ, ಹಾಗೇ ಮಾಡಿದ್ದ! ಗುರುಗಳು ಕುಸಿದರು, ಬಯ್ದರು, ಹೊರ ಹೋಗೆಂದರು, ಇವ ಬಿಡಲಿಲ್ಲ, ಬುದ್ಧಿವಂತರಿಗೆ ಪಾಠ ಹೇಳುವುದನ್ನು ಯಾರು ಬೇಕಾದರೂ ಮಾಡಬಹುದು, ಆದರೆ ದಡ್ಡರಿಗೆ ಬುದ್ಧಿವಂತಿಕೆ ತರುವವರು ಯಾರೂ ಇಲ್ಲ‌. ನೀವು ಸವಾಲಾಗಿ ಸ್ವೀಕರಿಸಿ ನನ್ನನ್ನು ಉದ್ಧರಿಸಿ ಎಂದಾಗ ಗುರುಗಳು ಒಪ್ಪಿ, ಗುರುಕುಲ ವಾಸವಿತ್ತರು. ಹಾಗೂ ಚಿತ್ತೈಕಾಗ್ರತೆಯನ್ನು ಅಭ್ಯಾಸ ಮಾಡಲು ಹೇಳಿದರು.
ಅವನಿಗೆ ಊಟದಲ್ಲಿ ತುಪ್ಪದ ಬದಲು ಬೇವಿನೆಣ್ಣೆ ನೀಡಲು ಪತ್ನಿಗೆ ಹೇಳಿದರು. ವರ್ಷಗಟ್ಟಲೆ ಇದು ಹೀಗೇ ನಡೆಯಿತು ಅವನಿಗೆ ಅರಿವೇ ಇಲ್ಲ, ಅವನು ಪಾಠದಲ್ಲಿ ಮಗ್ನ, ಕೊನೆಗೊಂದು ದಿನ ಕಹಿ ಅಂತ ಹೇಳಿದ. ಗುರು ಪತ್ನಿ ಬೇರೆ ಆಹಾರ ಕೊಟ್ಟು ಪತಿಗೆ ತಿಳಿಸಿದಳು. ಗುರು ಇವನನ್ನು ಕರೆದು ನಿನ್ನ ವಿದ್ಯೆ ಮುಗಿಯಿತು ಹೊರಡು ಅಂದರು. ಮಲ್ಲಿನಾಥನು ಏಕೆ ಎಂದು ಕೇಳಿದಾಗ, ಗುರುವು ಹೇಳಿದ ಮಾತಿದು: “ಆಕೆ ಇಷ್ಟು ವರ್ಷವೂ ನಿನಗೆ ಬೇವಿನೆಣ್ಣೆಯನ್ನೇ ಬಡಿಸುತ್ತಿದ್ದಳು, ಆದರೆ ನಿನಗದು ಗೊತ್ತೇ ಆಗಲಿಲ್ಲ, ಆ ರೀತಿಯ ಚಿತ್ತೈಕಾಗ್ರತೆಯಿತ್ತು. ಈಗ ಆದರೀಗ ಅದು ಮುಗಿದಿದೆ ಏಕೆಂದರೆ ನೀನು ಪರಿಪೂರ್ಣತೆ ಹೊಂದಿದ್ದೀಯೆ, ನನ್ನಿಂದ ಸಾಧ್ಯವಿದ್ದದ್ದನ್ನೆಲ್ಲ ಗಳಿಸಿದ್ದೀಯೆ”.
ಗುರುವಿಗೆ ನಮಸ್ಕರಿಸಿ ಹೊರಟವ ನೇರ ಮಾವನಲ್ಲಿಗೆ ಬಂದು ಬಾವಮೈದುನರನ್ನೆಲ್ಲ ವಾದದಲ್ಲಿ ಸೋಲಿಸಿ, ಮನೆಗೆ ಮರಳಿದ.

ಪತಿಯನ್ನು ನೋಡಿ ಹೆಂಡತಿಗೆ ಸಮಾಧಾನ, ತಂದೆಗೆ ನೆಮ್ಮದಿಯ ಮರಣ.
ಅವನ ಪ್ರತಿಜ್ಞೆ ಹೀಗೆ.. ಕಾಳಿದಾಸನ ಕಾವ್ಯಗಳ ವ್ಯಾಖ್ಯೆ ಮಾಡುವಾಗ ಅವನು ಹೇಳಿದ ಯಾವುದನ್ನು ಬಿಟ್ಟಿಲ್ಲ ಹಾಗೂ ಅನವಶ್ಯಕವಾದ ಒಂದೇ ಒಂದು ಅಕ್ಷರವನ್ನೂ ಹೇಳಿಲ್ಲ. ಆತನು ಸೂರಿ ಎಂದು ಬಿರುದಾಂಕಿತನಾದ. ಸೂರಿ ಎಂದರೆ ಪಂಡಿತ / ಜ್ಞಾನಿ ಎಂದು ಅರ್ಥ.
ಹೀಗೆ ಸಿದ್ಧಿಗೆ ಏಕಾಗ್ರತೆ ಮುಖ್ಯ, ವರ್ಷಗಟ್ಟಲೆ ಸೇವಿಸಿದ ಬೇವಿನ ಎಣ್ಣೆಯ ರುಚಿಯೂ ಗೊತ್ತಾಗದಷ್ಟು ಏಕಾಗ್ರತೆ ಇದ್ದ ಮೇಲೆ ಅವನು ಜ್ಞಾನಿಯಾಗದಿರಲು ಹೇಗೆ ಸಾಧ್ಯ.

ಭಾಗವತದ ಮೊದಲ ಕಾಂಡದ ಮೊದಲು ಅಧ್ಯಾಯದ 3ನೇ ಶ್ಲೋಕ ಹೇಳಿದ್ದು ಇದನ್ನೇ… ನಾನು ನಿನಗೆ ಒಲಿಯಬೇಕೆಂದರೆ ನೀನು ನನ್ನಲ್ಲಿ ಲೀನವಾಗಬೇಕು, ಮಗ್ನವಾಗಬೇಕು.
ಇದರ ನಂತರವೇ ಭಾಗವತ ಪ್ರಾರಂಭ.
ಇಡೀ ಚಾತುರ್ಮಾಸ್ಯ ಇದನ್ನೇ ಪಾಠ ಮಾಡಿದರೂ ತಪ್ಪಿಲ್ಲ. ಇಡೀ ಜನ್ಮ ಮಾಡಿದರೂ ತಪ್ಪಿಲ್ಲ.
ಧ್ಯಾನವೆಂದರೆ ಒಂದೇ ಕಡೆ ಮನಸ್ಸು ನಿಲ್ಲುವುದು, ಅದೇ ಸಾಧನೆ, ಅದೇ ತಪಸ್ಸು.

ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ…

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments