#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ

02-08-2018:

ವೇದವೆಂಬ ಕಲ್ಪವೃಕ್ಷದಿಂದ ಹಣ್ಣಾಗಿ, ತಾನಾಗಿ ಕಳಚಿ ಭುವಿಗೆ ಬಿದ್ದಿರುವ ಫಲವೇ ಭಾಗವತ.

ಶ್ರೀಶ್ರೀ ಅಮೃತವಾಣೀ…

ಶುಕಮುನಿಯೆಂಬ ಮಹಾಮುನಿಯ, ದಿವ್ಯಾತ್ಮನ, ಜ್ಞಾನಶುಧ್ಧನ, ಅವಧೂತನ ಮುಖದಿಂದ ಭಾಗವತವು ಕೆಳಗಿಳಿದು ಬಂದಿದೆ. ಹಾಗಾಗಿ ಶುಕಮುನಿಯೆಂಬ ಅಮೃತದ್ರವ ಭಾಗವತದಲ್ಲಿ ಸೇರಿದೆ.

ಇಂತಹ ಭಾಗವತವೆಂಬ ರಸವನ್ನು ಭುವಿಯ ಭಾವುಕರು, ರಸಿಕರು ಮತ್ತೆ ಮತ್ತೆ ಸವಿಯಿರಿ.

ಅಮೃತತ್ವವನ್ನು ಕೊಡಬಲ್ಲ ಭಾಗವತವು ಭುವಿಯದ್ದಲ್ಲ, ದಿವಿಯದ್ದು. ದಿವಿಯಿಂದ ಕೆಳಗಿಳಿದು ಬಂದಿರುವಂತಹದ್ದು.

ವೃಕ್ಷವೊಂದರ ಪರಿಪೂರ್ಣ ಸಾರ ಹಣ್ಣಿನಲ್ಲಿರುವಂತೆ ಈ ವೇದವೆಂಬ ಕಲ್ಪವೃಕ್ಷದ ಎಲ್ಲ ಅಮೃತಸಾರ ಭಾಗವತವೆಂಬ ಫಲದಲ್ಲಿದೆ.

ಭಾವರಸ ಪೂರ್ಣರು ಭಾಗವತವನ್ನು ಸವಿಯಲು ಬನ್ನಿ. ಶುಷ್ಕ ಮನಸ್ಕರಿಗೆ ಭಾಗವತಕ್ಕೆ ಪ್ರವೇಶವಿಲ್ಲ.

ಕವಿ ಭಾರವಿಯ ಭಾವ: ಎಲ್ಲರ ಹಣೆಬರಹವ ಬರೆಯುವ ಬ್ರಹ್ಮನೆ, ನಾನು ಮಾಡುವ ಇತರ ಪಾಪಗಳನ್ನೆಲ್ಲ ನನ್ನ ಹಣೆಬರಹದಲ್ಲಿ ಬರಿ, ಸಹಿಸುತ್ತೇನೆ ಆದರೆ ಅರಸಿಕರ ಮುಂದೆ ಕಾವ್ಯವಾಚನ ಮಾಡುವಂತಹ ಸ್ಥಿತಿಯನ್ನು ಬರೆಯಬೇಡ..ಬರೆಯಬೇಡ!

ಲಯದವರೆಗೆ ಭಾಗವತವು ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಅದನ್ನು ಸವಿಯಲು ಅರ್ಹತೆಯನ್ನು ಸಂಪಾದಿಸೋಣ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments