ಶ್ರೀ ರಾಮಾಶ್ರಮ, ಬೆಂಗಳೂರು 08-08-2015,ಶನಿವಾರ
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಸರ್ವಸೇವೆ:
ಉಪಾಧಿವಂತ ಮಂಡಲ, ಗೋಕರ್ಣ
~
ಪಾದುಕಾ ಪೂಜೆ:
ಭಂಡಾರಿ ಸಮಾಜ
~
ಯಾಗ ಶಾಲೆ:
ಮೇಧಾ ದಕ್ಷಿಣಮೂರ್ತಿ ಹವನ
~
ಧರ್ಮ ಸಭೆ:
ಬಂಧನ ದುಃಖವೂ ಹೌದು, ಸುಖವೂ ಹೌದು. ಭವ ಬಂಧನ ದುಃಖಕ್ಕೆ ಕಾರಣವಾದರೆ, ಗುರು – ಭಗವಂತನೊಂದಿಗಿನ ಭಾವ ಬಂಧನ ಆನಂದಕ್ಕೆ ಕಾರಣವಾಗುತ್ತದೆ. ಇಂತಹ ಗುರು – ಭಗವಂತನೊಂದಿಗಿನ ಬಂಧನ ಬಿಡುಗಡೆಗೂ ಕಾರಣವಾಗುತ್ತದೆ. ಹಾಗೆಯೇ ನಮ್ಮ ಸುರಕ್ಷತೆಗೂ ಕಾರಣವಾಗುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಶನಿವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು ಎಂದೂ ಬಿಟ್ಟುಹೋಗದ ಸಕಾರಾತ್ಮಕ ನಂಟಿಗೆ ಬದ್ಧತೆ ಎಂದು ಹೆಸರು. ಬದುಕಿನಲ್ಲಿ ಬದ್ಧತೆ ಇಲ್ಲದಿದ್ದರೆ ಬದುಕು ಸೂತ್ರವಿಲ್ಲದ ಗಾಳಿಪಟದಂತಾಗುತ್ತದೆ. ಹಾಗಾಗಿ ನಾವು ನಮ್ಮನ್ನು ಬದ್ಧತೆಗೆ ಅಳವಡಿಸಿಕೊಳ್ಳಬೇಕು ಎಂದ ಅವರು, ಎಷ್ಟೇ ಸುಂದರ ಚಿತ್ರವಾದರೂ, ಚೌಕಟ್ಟಿಲ್ಲದಿದ್ದರೆ, ಶೋಭಿಸುವುದಿಲ್ಲ. ಹಾಗಾಗಿ ಬದುಕಿನಲ್ಲಿ ಸತ್ಯ – ಧರ್ಮಕ್ಕೆ ಬದ್ಧರಾಗಿ, ಧರ್ಮದ ಚೌಕಟ್ಟಿನಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ನುಡಿದರು.

ಈಶ್ವರ ಮಾಡಿದ ಕಾನೂನಿಗೆ ಶಾಸ್ತ್ರ ಎಂದು ಹೆಸರು. ಇಂದು ಶಾಸ್ತ್ರ ಶಬ್ದ ಕೇಳಿದರೆ ಜನರು ಸ್ಪಂದಿಸುವುದಿಲ್ಲ. ಆದರೆ ಜನರ ಬಗ್ಗೆ ತಂದೆ -ತಾಯಿಯರ ವಾತ್ಸಲ್ಯಕ್ಕಿಂತ ಸಾವಿರದಷ್ಟು ಹೆಚ್ಚು ವಾತ್ಸಲ್ಯ ಶಾಸ್ತ್ರಕ್ಕೆ ಇರುತ್ತದೆ ಎಂದರು.
ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಾಶಿಸಿದ, ಕುಮಾರಿ ಶ್ರದ್ಧಾ ಅವರ ‘ಭಕ್ತ ಧ್ರುವ’ ಹರಿಕಥೆ ಆಂಗ್ಲ ಸಿಡಿ ಕೃತಿಯ ಲೋಕಾರ್ಪಣ ನಡೆಸಲಾಯಿತು. ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ ಕೃತಿಯ ಪರಿಚಯ ಮಾಡಿಕೊಟ್ಟರು. ಎಸ್‍ಎಸ್‍ಎಲ್‍ಸಿಯಲ್ಲಿ ರ್ಯಾಂಕ್ ಪಡೆದ ಸ್ವಾತಿ.ಕೆ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಗೋಕರ್ಣದ ಉಪಾಧಿವಂತ ಮಂಡಲ ಸರ್ವಸೇವೆ ಸಮರ್ಪಿಸಿತು. ಭಂಡಾರಿ ಸಮಾಜದವರು ಸೇವೆ ಸಮರ್ಪಿಸಿದರು.

ಉಚ್ಚನ್ಯಾಯಾಲಯದ ಹಿರಿಯ ನ್ಯಾಯವಾದಿ ಹಾರ್ನಳ್ಳಿ ಅಶೋಕ್, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಶ್ರೀಮಠದ ಸಿಇಒ ಕೆ.ಜಿ ಭಟ್, ಗೋಕರ್ಣ ದೇವಾಲಯದ ಪ್ರಧಾನ ಅರ್ಚಕ ಶಿತಿಕಂಠ ಹಿರೆ, ಸಾಹಿತಿ ಗಜಾನನ ಶರ್ಮಾ, ಖ್ಯಾತ ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು. ಪೂಜಾ ಭಟ್ ನಿರೂಪಿಸಿದರು.

English Summary:

His holiness spoke on the topic ‘Commitment’. Guruji expressed that commitment is nothing but Positive detention. Commitment is a must along with Truth and Dharma. responsibilities which we wont run off is called as commitment.
Our mind is always Flexile. It is just like Water and takes the shape which we give. Detention with Guru is called emotional attachment. One should be committed to Values, God and Guru., if not, he will be like threadless kite flying in the air.
Any Beautiful art work without border (boundary) will not attract the eyes. just like that there should be a framework in our life too. One line message to everyone is that, Do systematically whatever you do.

Audio Link:

Download : Link

Video: Link

Dhruva Charitre Harikathe CD (By Shraddha) Lokarpane

Dhruva Charitre Harikathe CD (By Shraddha) Lokarpane

Chatru Puraskara to Kum. Swathi K.

Chatru Puraskara to Kum. Swathi K.

Senior Adv. Ashok Haranalli speaking to the gathering

Senior Adv. Ashok Haranalli speaking to the gathering

Janasthoma

Janasthoma

SRI_0525

Paramapoojya Sri Sri

Paramapoojya Sri Sri

Facebook Comments Box