ಒಂದಾನೊಂದು ಊರಿನಲ್ಲಿ ಧನಪಾಲ ಮತ್ತು ದಾನಶೀಲ ಎಂಬ ಶ್ರೀಮಂತರಿದ್ದರು..
ಇಬ್ಬರದೂ ಒಂದೇ ಊರಾದರೂ ಸ್ವಭಾವದಲ್ಲಿ ಆಕಾಶ ಭೂಮಿಗಳ ಅಂತರವಿದ್ದಿತು..
ಹೆಸರಿಗೆ ತಕ್ಕಂತೆ ಹಣಕೂಡಿಡುವುದರಲ್ಲಿ ಧನಪಾಲ ಸುಖಕಂಡರೆ, ದಾನಶೀಲನಿಗೆ ಹಂಚಿ ತಿನ್ನುವುದರಲ್ಲಿ ಪರಮಾನಂದ..!
ಹೊಟ್ಟೆ – ಬಟ್ಟೆ ಕಟ್ಟಿ, ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿ ಧನಪಾಲ ಹಣ ಕೂಡಿಸುತ್ತಿದ್ದ.
ಹಾಗೆ ಕೂಡಿಸಿದ ಹಣವನ್ನು ಆಗಾಗ ಚಿನ್ನದರೂಪದಲ್ಲಿ ಪರಿವರ್ತಿಸಿ ಊರ ಹೊರಗಿನ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಹೂತಿಡುತ್ತಿದ್ದ..
ಹೀಗೆ ಹೂತಿಟ್ಟ ಹಣವನ್ನುಆಗಾಗ ನೋಡಿ ಸಂತೋಷಪಡುವುದು ಅವನಿಗೆ ಅಭ್ಯಾಸವಾಗಿತ್ತು..
ಅತ್ತ ದಾನಶೀಲನಿಗಾದರೋ “ಉಣ್ಣು, ಉಡು, ಕೊಡು” ಎನ್ನುವುದೇ ಜೀವನ ಮಂತ್ರವಾಗಿತ್ತು..
ಅದೊಂದು ಶಿಲ್ಪ ಶಾಲೆ..!! ತನ್ನ ಅಮರ ಶಿಲ್ಪಗಳಿಂದ ಲೋಕ ವಿಖ್ಯಾತನಾಗಿದ್ದ ಮಹಾ ಶಿಲ್ಪಿಯೊಬ್ಬ ಅಲ್ಲಿಯ ಗುರುಸ್ಥಾನವನ್ನಲಂಕರಿಸಿದ್ದ..! ಆತನ ಶಿಷ್ಯರಲ್ಲೊಬ್ಬ ಗುರುವಿಗೆ ಸರಿಮಿಗಿಲೆನಿಸುವ ಕೈಚಳಕ ಹೊಂದಿದ್ದ.. ಕೈಚಳಕವನ್ನೇನೋ ಹೊಂದಿದ್ದ, ಆದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಗುರುವಿನ ಶಿಲ್ಪಗಳಿಗೆ ಸರಿಮಿಗಿಲೆನಿಸುವ ಶಿಲ್ಪಗಳನ್ನು ರಚಿಸಲು ಆತನಿಂದ ಸಾಧ್ಯವಾಗುತ್ತಿರಲಿಲ್ಲ..! ಒಮ್ಮೆ ಆತ ತನ್ನ ಜಿಜ್ಞಾಸೆಯನ್ನು ಗುರುವಿನ ಮುಂದಿಟ್ಟ: “ಅದೆಷ್ಟೋ ಪ್ರಯತ್ನಿಸಿದೆ, ಆದರೆ… Continue Reading →
ಸೋಮು ನಮ್ಮ ನಿಮ್ಮಂತೆ ಸಾಧಾರಣ ಮನುಷ್ಯ.!
ಆದರೆ, ಅವನಿಗೆ ರಾಜನ ಶಯ್ಯಾಗಾರದಲ್ಲಿ ಕೆಲಸ..
ಸಾಮಾನ್ಯ ಜನರ ಕಲ್ಪನೆಗೂ ಮೀರಿದ ಶಯ್ಯಾಗಾರದ ವೈಭವವನ್ನು ನೋಡಿದಾಗಲೆಲ್ಲಾ..
ಸೋಮುವಿನ ಮನದಲ್ಲಿ ಆಸೆ ಅಸೂಯೆಗಳ ಅಲೆಗಳು ಏಳುತ್ತಿದ್ದವು..!!
ರಾಜನ ಮೃದು ಮೃದು ಸುಪ್ಪತ್ತಿಗೆಯನ್ನು ಕಂಡಾಗಲೆಲ್ಲಾ
ಜೀವನದಲ್ಲಿ ಒಮ್ಮೆಯಾದರೂ ಅದರ ಸೌಖ್ಯವನ್ನು
ಅನುಭವಿಸಬೇಕೆನ್ನುವ ಆಸೆಯಾದರೆ………!
ಸುಪ್ಪತ್ತಿಗೆಯಲ್ಲಿ ರಾಜ ಪವಡಿಸುವುದನ್ನು ಕಂಡಾಗಲೆಲ್ಲಾ
ಅವನು ಅನುಭವಿಸುತ್ತಿರಬಹುದಾದ ಸೌಖ್ಯವನ್ನೆಣಿಸಿ ಅಸೂಯೆ ಉಂಟಾಗುತ್ತಿತ್ತು..!!
ದಿನೇ ದಿನೇ ಸೋಮುವಿನ ಮನಸ್ಸಿನಲ್ಲಿ ಹೇಗಾದರೂ ರಾಜನ ಕಣ್ಣು ತಪ್ಪಿಸಿ
ಒಮ್ಮೆಯಾದರೂ ರಾಜಶಯ್ಯೆಯಲ್ಲಿ ಪವಡಿಸುವ ಆಸೆ ಪ್ರಬಲವಾಗತೊಡಗಿತು..!
One day Maths teacher asked her students to list the names of the other students in the room on two sheets of paper, leaving a space between each name. Then she told them to think of the nicest thing they… Continue Reading →