Author Info@HareRaama.in

CID ತನಿಖೆಗೆ ರಾಮಚಂದ್ರಾಪುರ ಮಠದ ಆಗ್ರಹ

ಪ್ರಕರಣವನ್ನು ಕೊಡಲೇ CID ಒಪ್ಪಿಸಿ ವಿಳಂಬಕ್ಕೆ ಅವಕಾಶ ಕೊಡದೆ ತನಿಖೆ ಮಾಡಬೇಕು. ವಿಳಂಬವಾದಲ್ಲಿ ಪ್ರಕರಣದ ಸತ್ಯಾಸತ್ಯತೆಯು ಜನರನ್ನು ತಲುಪುವುದು ವಿಳಂಬವಾಗುವ ಸಾಧ್ಯತೆ ಇದೆ. ಮಠ ಮೊದಲಿನಿಂದಲೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು ಮತ್ತು CID ಯು ಈಗಾಗಲೇ ಅನೇಕ ಪ್ರಕರಣಗಳನ್ನು ಬೇಧಿಸಿದ್ದು ಈ ಪ್ರಕರಣವನ್ನೂ ಸರಿಯಾಗಿ ನಡೆಸುತ್ತದೆ, ಆದ್ದರಿಂದ ಕೂಡಲೇ ಈ ಪ್ರಕರಣವನ್ನು CID ಗೆ ಸರಕಾರ ವಹಿಸಲಿ ಎಂದು ಮಠವು ಆಗ್ರಹಿಸುತ್ತದೆ.

ದಿವ್ಯತೆಯ ಭವ್ಯತೆಗೆ ಸವಾಲೇ…? : ಸಂದೇಶ ತಲಕಾಲಕೊಪ್ಪ

ದಿವ್ಯತೆಯ ಭವ್ಯತೆಗೆ ಸವಾಲೇ…??
ತಾಪಸಿಗೆ ಇದಾವ ತಾಪ?
ಅಮ್ಮನಮೇಲೆ ಮಾಡಲು ಈ ಪರಿಯ ಆರೋಪ…
ಬಿಡುವುದೇ ನಿನ್ನ ಆ ಪಾಪ?

ನನ್ನ ಬಾಳಿಗೆ ಬೆಳಕಾದ ಶ್ರೀಚರಣ : ಶಂಕರ ಭಟ್, ಪಟಿಕಲ್ಲು

“ಚರಣಾರವಿಂದಗಳು” ಅಂತ ಯಾಕೆ ಹೇಳುತ್ತಾರೆ ಅಂತ ನನ್ನ ಅನುಭವಕ್ಕೆ ಬಂತು. ಹಾಗೆ ಹಣೆಯ ಮೂಲಕ ನನ್ನ ಹೃದಯಕ್ಕಿಳಿದ ಶ್ರೀಚರಣ ನನ್ನ ಹೃದಯದಲ್ಲಿ ನೆಲೆಸಿದೆ. ನನ್ನ ಕೊನೆಯುಸಿರಿನ ತನಕವೂ ಅಲ್ಲೇ ಇರುತ್ತದೆ. ನನ್ನು ಎಲ್ಲೇ ಇದ್ದರೂ ನನ್ನ ಹೃದಯಸ್ಥವಾಗಿರುವ ಶ್ರೀಚರಣದ ಮೂಲಕಪ್ರತಿ ದಿನವೂ ಅನೇಕ ಬಾರಿ ಶ್ರೀಗುರುಗಳ ದರ್ಶನ ನನಗೆ ಆಗುತ್ತಲೇ ಇರುತ್ತದೆ.

ಇನ್ನು ನನ್ನ ಬಾಳಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀಗುರುಗಳು ತೋರಿದ ಮಾತೃವಾತ್ಸಲ್ಯವು ಕೂಡಾ ಮಾತುಗಳಿಗೆ ಮೀರಿದ್ದು.

ದುಡ್ಡು ಕೊಟ್ಟರೆ ಬೇಕಾದುದು ಸಿಗುತ್ತೈತಿ ಈ ಜಗದಲಿ ಕಾಣೋ!

ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!
ಚ೦ದ್ರನಿಗೆ ಸ್ವ೦ತ ಬೆಳಕಿಲ್ಲ. ಚ೦ದ್ರನು ಸೂರ್ಯನ ಸಹಾಯದಿ೦ದ ಬೆಳಗುತ್ತಾನೆ. ಹಾಗೆಯೇ ಪ್ರತಿಯೊಬ್ಬ ಶಿಷ್ಯನ ಬೆಳವಣಿಗೆಯ ಹಿಂದೆ ಸೂರ್ಯನಂತೆ ಗುರುಗಳಿದ್ದಾರೆ..

01-ಸೆಪ್ಟಂಬರ್: ಸಾಗರ ಪ್ರಾಂತ ಸಭೆಯಲ್ಲಿ ಶ್ರೀಗಳ ತೇಜೋವಧೆಯ ವಿರುದ್ಧ ಖಂಡನಾ ನಿರ್ಣಯ

“ನಮ್ಮ ಪ್ರೀತಿಯ ಶ್ರೀ ಸಂಸ್ಥಾನ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ರಾಮಚಂದ್ರಾಪುರಮಠ ಇವರ ಮೇಲೆ ಕೆಲವು ದುಷ್ಟ ಶಕ್ತಿಗಳು ತೇಜೋವಧೆ ನೆಡೆಸುತ್ತಾ, ಶ್ರೀ ಪೀಠದ ಘನತೆಗೆ ಅವಮಾನ ಮಾಡುತ್ತಲಿರುವುದನ್ನು ಶ್ರೀ ಮಠದ ಶಿಷ್ಯ ಸಮುದಾಯ ಪ್ರಬಲವಾಗಿ ಖಂಡಿಸುತ್ತದೆ. ಅಲ್ಲದೆ ಇಡೀ ಶಿಷ್ಯ ಸಮುದಾಯ ಶ್ರೀ ಪೀಠದ ಮತ್ತು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಬೆಂಬಲಕ್ಕೆ ಇರುತ್ತದೆ”- ಎಂದು ಅಧಿಕೃತವಾಗಿ ನಿರ್ಣಯಿಸಲಾಗಿದೆ.

31-ಅಗೋಸ್ತು-2014 : ಪ್ರತಿಭಟನಾ ಸಭೆ – ಗಿರಿನಗರ “ರಾಮಾಶ್ರಮ”

ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಗಿರಿನಗರದ “ರಾಮಾಶ್ರಮ”ದಲ್ಲಿ ಸೇರಿದ ಬೃಹತ್ ಜನಸ್ತೋಮ.

ದುಷ್ಟ ಶಕ್ತಿಗಳಿಂದ ಸಮಾಜವನ್ನು ಕಾಪಾಡುವುದು ನಮ್ಮ ಕರ್ತ್ಯವ್ಯ :ಸಿದ್ದರಾಮೇಶ್ವರ ಎಚ್ ಎನ್

ಇದನ್ನ ನಮ್ಮ ಶಕ್ತಿಮೀರಿ ಮೆಟ್ಟಿನಿಲ್ಲಬೇಕು ಮತ್ತು ಇಂಥ ದುಶ್ಟಶಕ್ತಿಗಳಿಂದ ನಮ್ಮ ಸಮಾಜವನ್ನು ಕಾಪಡುವದು ನಮ್ಮೆಲ್ಲರ ಕರ್ತ್ಯವ್ಯ. ಇಲ್ಲದೆ ಹೋದರೆ ನಾಳೆ ನಮ್ಮ ಮುಂದಿನಿ ಜನಾಂಗಕ್ಕೆ ನಮ್ಮ ಕೊಡುಗೆ ಏನು?

29-ಅಗೋಸ್ತು-2014 ಮೀಯಪದವು ಪ್ರತಿಭಟನಾ ಸಭೆ

(ವರದಿ: ಶಂಕರನಾರಾಯಣ ಭಟ್, ಅಡ್ಕತ್ತಿಮಾರು) ಮೀಯಪದವು (ಕಾಸರಗೋಡು), 29-ಅಗೋಸ್ತು-2014, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ತೇಜೋವಧೆ ವಿರುದ್ಧವಾಗಿ ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಪ್ರತಿಭಟನಾ ಸಭೆಯನ್ನು ಕೋಳ್ಯೂರು ಹವ್ಯಕ ವಲಯ ಮತ್ತು ಗುರುಭಕ್ತ ಸಮಾಜ ಬಾಂಧವರ ಸಹಯೋಗದಿಂದ ನಡೆಸಲಾಯಿತು. ಶ್ರೀ ಚಕ್ರಕೋಡಿ ಈಶ್ವರ ಶಾಸ್ತ್ರಿಗಳು ಸ್ವಾಗತಿಸಿದರು. ಜ್ಯೋತಿಷಿ ಕೇಶವ ಭಟ್ ಅಮ್ಮನಡ್ಕ… Continue Reading →

31-ಅಗೋಸ್ತು-2014 : ಗಿರಿನಗರ – ರಾಮಾಶ್ರಮದಲ್ಲಿ ಪ್ರತಿಭಟನೆ

ಸೂ: ಪ್ರತಿಭಟನಾ ಸ್ಥಳ: ರಾಮಾಶ್ರಮ, ಗಿರಿನಗರ. ಬೆಂಗಳೂರು: ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿರುದ್ಧದ ವ್ಯವಸ್ಥಿತ ಷಡ್ಯಂತ್ರವನ್ನು ವಿರೋಧಿಸಿ ಇದೇ ಬರುವ 31-ಅಗೋಸ್ತು-2014 ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಬೃಹತ್ ಪ್ರತಿಭಟನೆ-ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವಾಹ್ನ 10:30 ಕ್ಕೆ ರಾಮಾಶ್ರಮದಲ್ಲಿ ಸೇರಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲಿದ್ದೇವೆ. ಸುಸಂಸ್ಕೃತ ಸಮಾಜದ ಎಲ್ಲರೂ ಬಂದು ಕೈಜೋಡಿಸಿ ಹಿಂದೂ ಸಂನ್ಯಾಸಿಗಳನ್ನು… Continue Reading →

ಗೌರೀ-ಗಣೇಶ ಹಬ್ಬದ ಶುಭಾಶಯಗಳು

ಸಮಸ್ತ ಶಿಷ್ಯಕೋಟಿಗೆ, ಗೌರೀಗಣೇಶ ಹಬ್ಬದ ಶುಭಾಶಯಗಳು.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑