ಪೆರಾಜೆ- ಮಾಣಿ ಮಠಃ 3.8.2013, ಶನಿವಾರ ಇಂದಿನ ದಿನ ಮುಂಬೈ -ಪೂನಾ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಸಪರಿವಾರ ಶ್ರೀರಾಮ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಪೀಠದ ಮುಂಬೈ ಹಾಗೂ ಪೂನಾ ಪ್ರಾಂತ್ಯದ ಶಿಷ್ಯರು ಶ್ರೀಗುರುಗಳಿಗೆ ಫಲಕಾಣಿಕೆಗಳನ್ನಿತ್ತು, ತಮ್ಮ ಮಂಡಲದ ಆಗುಹೋಗುಗಳನ್ನು ಶ್ರೀಚರಣದ ಮುಂದಿಟ್ಟರು. ಇಂದಿನ ದಿನ ಆಂಜನೇಯನಿಗೆ 1008 ಸೀಯಾಳಾಭಿಷೇಕ ಸೇವೆ ನಡೆಯಿತು. ಇಂದು ಆಂಜನೇಯನಿಗೆ ಹಣ್ಣಡಿಕೆ ಕಣಜ ಸೇವೆಯೂ ನಡೆಯಿತು. ಈ ಸಂದರ್ಭದಲ್ಲಿ … Continue Reading →
ಪೆರಾಜೆ-ಮಾಣಿ ಮಠಃ 2.8.2013, ಶುಕ್ರವಾರ ಏಕಾದಶಿಯ ದಿನವಾದ ಇಂದು ಮಹಿಳೆಯರಿಂದ ಕುಂಕುಮಾರ್ಚನೆ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ಯಾಗಶಾಲೆಯಿಂದಃ ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನಗಳು, ಹನುಮನಿಗೆ ಇಂದಿನ ವಿಶೇಷ ಅಲಂಕಾರ – ಬಾಳೆಹಣ್ಣಿನ ಕಣಜ ಸೇವೆ ನಡೆಯಿತು. ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಸಮಗ್ರ ಯಜುರ್ವೇದ ಪಾರಾಯಣ ನಡೆಯಿತು. ~ ಸಂಧ್ಯಾಕಾರ್ಯಕ್ರಮ: ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ… Continue Reading →
ಪೆರಾಜೆ-ಮಾಣಿ ಮಠಃ1.8.2013, ಗುರುವಾರ ಇಂದಿನ ದಿನ ಶ್ರೀ ನಾರಾಯಣ ಭಟ್ ಹಾರಕರೆಯವರ ಗುರುಭಿಕ್ಷಾಸೇವೆಯನ್ನು ನಡೆಸಿದರು. ಶ್ರೀಗುರುಗಳ ಕರಕಮಲಗಳಿಂದ ಸಂಪನ್ನಗೊಂಡ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಕೃಷ್ಣ ಭಟ್ ಮತ್ತು ಪವಿತ್ರ ಗಂಗಾ ಸರವು, ಕೆ ಎಸ್ ಗುರುಮೂರ್ತಿ ಶಿಕಾರಿಪುರ ಶಿವಮೊಗ್ಗ, ಕಲ್ಪನಾಜಿ, ಶ್ರೀ ಗೋಪಿನಾಥ ಶೆಟ್ಟಿ ಹಾಗೂ ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ವೃಂದ ಪುತ್ತೂರು,… Continue Reading →
ಪೆರಾಜೆ- ಮಾಣಿ ಮಠಃ 31.7.2013, ಬುಧವಾರ ವಿಜಯ ಚಾತುರ್ಮಾಸ್ಯದ ಈ ದಿನ ಡಾ. ಶ್ಯಾಮ ಭಟ್, ಬಡೆಕ್ಕಿಲ ಗುರುಭಿಕ್ಷಾಸೇವೆಯನ್ನು ನಡೆಸಿದರು. ಶ್ರೀಕರಾರ್ಚಿತ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್ (ಎಮ್ .ಪಿ ಮಂಗಳೂರು), ಶ್ರೀ ನರಸಿಂಹ ಹೆಗಡೆ ಕೆರೆಮನೆ, ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್, ಶ್ರೀ ವಿಶ್ವ ಪುಂಡಿತ್ತೂರು, ಮುರಳೀಕೃಷ್ಣ… Continue Reading →
ಪೆರಾಜೆ-ಮಾಣಿ ಮಠಃ 30.7.2013, ಮಂಗಳವಾರ ವಿಜಯ ಚಾತುರ್ಮಾಸ್ಯದ ಈ ದಿನ ಡಾ. ರಾಧಾಕೃಷ್ಣ ಡಿ ಎಸ್ ಕೆದುಂಬಾಡಿಯವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀರಾಮಾದಿಗಳ ಪೂಜೆಗಳ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಿನದ ಸಭೆಯಲ್ಲಿ ಗಿರೀಶ್ ಭಾರಧ್ವಾಜ್, ರವಿಶಂಕರ್ ಭಾರಧ್ವಾಜ್ ಸುಳ್ಯ, ಕೆದುಂಬಾಡಿ ಮನೆಯವರು, ಡಾ. ಜಯಗೋವಿಂದ ಬೆಂಗಳೂರು, ಡಿ. ಹೆಚ್ ಪ್ರಕಾಶ್ ರೈ ಪಾಣೆಮಂಗಳೂರು… Continue Reading →
ಪೆರಾಜೆ ಮಾಣಿಮಠಃ 29.7.2013, ಸೋಮವಾರ ಇಂದು ಗೋಕರ್ಣಮಂಡಲದ ಉಪಾಧಿವಂತರ ಗುರುಭಿಕ್ಷಾ ಸೇವೆ ನಡೆಯಿತು. ಮಂಡಲದ ಪರವಾಗಿ ಶ್ರೀ ರಮೇಶ ಪ್ರಸಾದ, ಗೋಕರ್ಣ ಭಿಕ್ಷಾಕಾರ್ಯ ನೆರವೇರಿಸಿದರು. ಗೋಕರ್ಣ ಮಂಡಲದ ಶಿಷ್ಯರು ಗುರುಸೇವೆ ಮಾಡಿ ಕೃತಾರ್ಥರಾದರು. ಶ್ರೀಕರಾರ್ಚಿತ ದೇವರ ಪೂಜೆಗಳು ನಡೆದು, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮಹಾಸಭೆಯಲ್ಲಿ ಶ್ರೀ ಶಶಿಧರ ಕೋಟೆ, ಶ್ರೀಮಠದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾಗಶಾಲೆಯಿಂದಃ… Continue Reading →
ಪೆರಾಜೆ-ಮಾಣಿ ಮಠಃ 28.7.2013, ಆದಿತ್ಯವಾರ ಚಾತುರ್ಮಾಸ್ಯದ ಈ ಸುದಿನದಂದು ಶ್ರೀರಾಮಾದಿ ದೇವತೆಗಳ ಪೂಜೆಯ ನಂತರ ಶ್ರೀಗಳು ಶ್ರೀಮಠದ ಆವರಣದಲ್ಲಿರುವ ಆಂಜನೇಯ ಸ್ವಾಮಿಗೆ ವಡೆ ಕಣಜ ಮಾಡಿ ವಿಶೇಷ ಪೂಜೆಗೈದರು. ಅಷ್ಟಾವದನ ಸಹಿತವಾಗಿ ಭವ್ಯ ಪೂಜೆ ನೆರವೇರಿತು. ಶ್ರೀಮಠದ ಶಿಷ್ಯರು ಈ ಪುಣ್ಯಸೇವೆಯನ್ನು ಕಣ್ತುಂಬಿಕೊಂಡರು. ಎಂದಿನಂತೆ ಮಹಿಳೆಯರು ಕುಂಕುಮಾರ್ಚನೆ ಸೇವೆ ಸಲ್ಲಿಸಿದರು. ಇಂದಿನ ಭಿಕ್ಷಾಕರ್ತೃಗಳಾದ ಚೆನ್ನೈ ವಲಯದ… Continue Reading →
ಪೆರಾಜೆ-ಮಾಣಿಮಠಃ 27-7-2013, ಶನಿವಾರ ವೇಣೂರು, ಉಜಿರೆ ಮತ್ತು ಉರುವಾಲು ವಲಯಗಳ ಗುರುಭಿಕ್ಷಾಸೇವಾ ಕಾರ್ಯಕ್ರಮ ವಿಜಯ ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ನಡೆಯಿತು. ಶ್ರೀಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮೂರು ವಲಯಗಳ “ವಲಯ ಸಭೆ”ಯಲ್ಲಿ ವಿಷಯಗಳನ್ನು ಶ್ರೀಪೀಠದೆದುರು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು … Continue Reading →
ಪೆರಾಜೆ-ಮಾಣಿ ಮಠಃ 26-7-2013, ಶುಕ್ರವಾರ ಇಂದಿನ ಗುರುಭಿಕ್ಷಾಸೇವಾ ಕಾರ್ಯಕ್ರಮ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ ವಲಯದ ಶಿಷ್ಯರಿಂದ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಮೂರೂ ವಲಯಗಳ “ವಲಯ ಸಭೆ”ಯಲ್ಲಿ ವಲಯದ ಆಗು ಹೋಗುಗಳನ್ನು ಪೀಠದ ಮುಂದಿಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಪುತ್ತೂರು, ದರ್ಬೆ ಹಾಗೂ ಬೆಟ್ಟಂಪಾಡಿ… Continue Reading →