ಪೆರಾಜೆ-ಮಾಣಿ ಮಠಃ 2.8.2013, ಶುಕ್ರವಾರ

ಏಕಾದಶಿಯ ದಿನವಾದ ಇಂದು ಮಹಿಳೆಯರಿಂದ ಕುಂಕುಮಾರ್ಚನೆ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು.

ಯಾಗಶಾಲೆಯಿಂದಃ

ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನಗಳು, ಹನುಮನಿಗೆ ಇಂದಿನ ವಿಶೇಷ ಅಲಂಕಾರ – ಬಾಳೆಹಣ್ಣಿನ ಕಣಜ ಸೇವೆ ನಡೆಯಿತು.
ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ,  ಸಮಗ್ರ ಯಜುರ್ವೇದ ಪಾರಾಯಣ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ರಾಮಕಥೆಯ ಇಂದಿನ ದಿನದ ಪ್ರಾಯೋಜಕತ್ವವನ್ನು ಚಾತುರ್ಮಾಸ್ಯ ಸೇವಾ ಸಮಿತಿಯ ಪರವಾಗಿ ಶ್ರೀ ಕೊಡಕ್ಕಲ್ಲು ರಾಜಾರಾಮ ಭಟ್ ನೆರವೇರಿಸಿದರು.
ಶ್ರೀಗುರುವಂದನೆಯೊಂದಿಗೆ ಆರಂಭವಾದ ಶ್ರೀರಾಮಕಥೆ ಶ್ರೀಗುರುಗಳು ಶ್ರೀರಾಮನಿಗೆ ಹನುಮನಿಗೆ ಪುಷ್ಪಾರ್ಚನೆ ಮಾಡಿ ಕಥೆಯನ್ನು ಆರಂಭಿಸಿದರು. ಋಷ್ಯಕೂಟ ಪರ್ವತದಲ್ಲಿ ದುಃಖದಲ್ಲಿದ್ದ ಸುಗ್ರೀವನ ಮನದ ದುಗುಡವನ್ನು ಶ್ರೀ ಗುರುಗಳು ವಿಸ್ತಾರವಾಗಿ ವಿವರಿಸಿದರು. ಶ್ರೀರಾಮ ಲಕ್ಷಣರು ಸೀತೆಯನ್ನರಸುತ್ತ ಬರುವ ಸಮಯದಲ್ಲಿ ತನ್ನನ್ನು ಕೊಲ್ಲುವ ಹೂಟದಿಂದ ವಾಲಿ ಕಳಿಸಿದ ಜನರೇ ಎಂದು ವಿಚಾರಿಸಲು ಹನುಮಂತನನ್ನು ಕಳುಹಿಸುವ ಪ್ರಸಂಗ ಮತ್ತು ರಾಮ ಭಕ್ತಿಯನ್ನು ಬಿಂಬಿಸುವ ತುಲಸೀದಾಸರ ರೂಪಕದೊಂದಿಗೆ ರಾಮಕಥೆ ಪರ್ಯವಸಾನಗೊಂಡಿತು.  ಜೈ ಜೈ ರಾಮಕಥಾ ದಲ್ಲಿ ಶಿಷ್ಯಸ್ತೋಮ ಮೈಮರೆಯಿತು. ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ದಂಪತಿಗಳು, ಶ್ರೀ ಮೇಘರಾಜ ಟಿ. ಡಿ. (ಎಕ್ಸ್ ಸಿ ಎಮ್ ಸಿ , ಪ್ರೆಸಿಡೆಂಟ್ ಸಾಗರ), ಎಸ್ ಬಿ ಕೊಟ್ರಪ್ಪ, ಗಂಗಾಧರಪ್ಪ, ಬಿ. ಎಲ್. ಹಾಲಸ್ವಾಮಿ ರಿಪ್ಪನ್ ಪೇಟೆ, ರಾಜೇಂದ್ರ ಆವಿನಹಳ್ಳಿ, ಮಂಜಪ್ಪ ಸೂರಗುಂಡ ಸಭೆಯಲ್ಲಿ ಉಪಸ್ಥಿತರಿದ್ದರು.

~

Facebook Comments