ಪೆರಾಜೆ- ಮಾಣಿ ಮಠಃ 3.8.2013, ಶನಿವಾರ

ಇಂದಿನ ದಿನ ಮುಂಬೈ -ಪೂನಾ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಸಪರಿವಾರ ಶ್ರೀರಾಮ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಪೀಠದ ಮುಂಬೈ ಹಾಗೂ ಪೂನಾ ಪ್ರಾಂತ್ಯದ ಶಿಷ್ಯರು ಶ್ರೀಗುರುಗಳಿಗೆ ಫಲಕಾಣಿಕೆಗಳನ್ನಿತ್ತು, ತಮ್ಮ ಮಂಡಲದ ಆಗುಹೋಗುಗಳನ್ನು ಶ್ರೀಚರಣದ ಮುಂದಿಟ್ಟರು. ಇಂದಿನ ದಿನ ಆಂಜನೇಯನಿಗೆ 1008  ಸೀಯಾಳಾಭಿಷೇಕ  ಸೇವೆ  ನಡೆಯಿತು.  ಇಂದು  ಆಂಜನೇಯನಿಗೆ  ಹಣ್ಣಡಿಕೆ ಕಣಜ ಸೇವೆಯೂ ನಡೆಯಿತು. ಈ ಸಂದರ್ಭದಲ್ಲಿ  ಶ್ರೀ ವಾಸುದೇವ ಅಸ್ರಣ್ಣ, ಅನುವಂಶಿಕ ಮೊಕ್ತೇಸರರು, ಶ್ರೀಕ್ಷೇತ್ರ ಕಟೀಲು ಉಪಸ್ಥಿತರಿದ್ದರು.

ಯಾಗಶಾಲೆಯಿಂದಃ

ಆಂಜನೇಯ ಹವನಗಳು, ತ್ರ್ಯಂಬಕ ಶಾಂತಿ, ಗ್ರಹಶಾಂತಿಪೂರ್ವಕ ಪಂಚಮಾರಿಷ್ಟ ಶಾಂತಿ, ಗೋಜನನ ಶಾಂತಿ, ಆಯುಷ್ಯಚರು, ಶಿವಪೂಜೆ, ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಯಜುರ್ವೇದ ಪಾರಾಯಣ ನಡೆಯಿತು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ವಿಜಯ ಚಾತುರ್ಮಾಸ್ಯದ ಮೊದಲನೆಯ ಹಂತದ ರಾಮಕಥೆಯ ಕೊನೆಯ ದಿನವಾದ ಇಂದು ಮುಂಬೈ-ಪೂನಾ ವಲಯದವರಿಂದ ರಾಮಕಥಾ ಸೇವೆ ನಡೆಯಿತು. ಶ್ರೀಗುರುಗಳು ಸಪರಿವಾರ ಶ್ರೀರಾಮನಿಗೆ, ಹನುಮನಿಗೆ ಪುಷ್ಪಾರ್ಚನೆಯನ್ನು ಮಾಡಿ ಇಂದಿನ ದಿನದ ಪ್ರವಚನವನ್ನು ಪ್ರಾರಂಭಿಸಿದರು. ಶ್ರೀರಾಮ, ಲಕ್ಷ್ಮಣ ಬರುವ ದಾರಿಯಲ್ಲಿ ಶ್ರೀರಾಮನನ್ನು ಸಂಧಿಸಲು ಮಾರುವೇಷದಲ್ಲಿ ಹೋದ ಹನುಮನ ಕಥೆಯನ್ನು ಬಹಳ ವಿಸ್ತಾರವಾಗಿ ವಿವರಿಸಿದರು.  ತನ್ನ ಜೀವನಗಮ್ಯವು ತನ್ನೆದುರು ಬಂದು ನಿಂತಾಗ ಹನುಮ ತನ್ನನ್ನು ತಾನೇ ಮರೆತನು. ಶ್ರೀರಾಮ ಹನುಮರ ಭೇಟಿಯನ್ನು ಬಹಳ ಚಂದವಾಗಿ ವಿವರಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ದಿನದ ರಾಮಕಥೆ ಪರ್ಯವಸಾನವಾಯಿತು.

~

Facebook Comments