ಮಾಣಿ ಮಠ, ದ.ಕ: 01-ಜನವರಿ-2015:
ಮಾಣಿ ಶಾಖಾ ಮಠದಲ್ಲಿ ಗುರುವಾರ ಸಂಜೆ ಶಿಷ್ಯಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ರಾಘವೇಶ್ವರಶ್ರೀಗಳು, ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮವನ್ನು ಒದೆಯಬೇಕಾಗಿಲ್ಲ – ಸೀದಾ ಪೂರ್ವಕ್ಕೆ ಹೋದರಾಯಿತು. ಹೀಗಿರುವಾಗ ಸದಾ ಒಳ್ಳೆಯದನ್ನೇ ಚಿಂತಿಸುತ್ತಾ ನಾವು ಸಾಗಬೇಕು. ಯಾರನ್ನೋ ತುಳಿದು ಮುಂದೆ ಸಾಗಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಬೆಂಗಳೂರು ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆ ಶ್ರೀ ರಾಮಾಶ್ರಮದಲ್ಲಿ ಇಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ೨೦೧೫ರ ಪಂಚಾಂಗ ಸಹಿತ ದಿನದರ್ಶಿಕೆಯನ್ನು (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದರು. ಶ್ರೀಮಠದ ಶ್ರೀಭಾರತೀಪ್ರಕಾಶನ ಹೊರತಂದಿರುವ ಈ ದಿನದರ್ಶಿಕೆಯ ಲೋಕಾರ್ಪಣೆಯ ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಶ್ರೀ ಟಿ. ಮಡಿಯಾಳ್, ಶ್ರೀಭಾರತೀಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶಶರ್ಮಾ, ಶ್ರೀಕಾರ್ಯದರ್ಶಿಗಳಾದ ಶ್ರೀ ಮೋಹನ ಹೆಗಡೆ ಹೆರವಟ್ಟ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 17.08.2014, ಭಾನುವಾರ ಡಾ|| ಎಸ್.ಆರ್. ರಾಮಸ್ವಾಮಿ ರಚಿಸಿದ ಆಚಾರ್ಯ ಚಾಣಕ್ಯ ಕೃತಿ ಹಾಗೂ ರಘುನಂದನ ಬೇರ್ಕಡವು ಹಾಡಿರುವ ಮಂಗಳದ ಮುಂಬೆಳಕು ಧ್ವನಿ ಮುದ್ರಿಕೆಯನ್ನು ಲೋಕಾರ್ಪಣೆಗೊಳಿಸಿದ ಶ್ರೀಗಳು ಕಾರ್ಯಕ್ಷಮತೆ ಮತ್ತು ನಿಸ್ವಾರ್ಥ ಸೇವೆ ಚಾಣಕ್ಯನ ವೈಶಿಷ್ಟ್ಯ, ಅದು ನಮ್ಮಲ್ಲಿ ಸ್ಪೂರ್ತಿ ತುಂಬುವ ವ್ಯಕ್ತಿತ್ವ ಎಂದು ನುಡಿದರು. ಅರುಣ ಎನ್. ಹೆಗಡೆ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 16.08.2014, ಶನಿವಾರ ವಿನಾಯಕ ಭಟ್ಟ ಓಡ್ಲಮನೆ ಇವರು ಬರೆದ ಮಹರ್ಷಿ ಮಾರ್ಕಂಡೇಯ ಕೃತಿ ಲೋಕಾರ್ಪಣೆ ಮಾಡಿದ ಶ್ರೀಗಳು ಯಮನ ಪಾಶ-ಭಾವ ಪಾಶದ ನಡುವೆ ನಡೆದ ಪರೀಕ್ಷೆಯಲ್ಲಿ ಭಾವ ಪಾಶಕ್ಕೆ ಜಯ ದೊರಕಿಸಿದ್ದು ಮಾರ್ಕಂಡೇಯ. ಭಾವವಿದ್ದರೆ ಜೀವಕ್ಕೆ ಸಾವಿಲ್ಲ ಎಂಬ ಸಂದೇಶವನ್ನ ಈ ಕೃತಿ ನೀಡುತ್ತದೆ. ಶಿವ ಭಾವವನ್ನು ಈ… Continue Reading →
ಶ್ರೀ ರಘೂತ್ತಮ ಮಠ ಕೆಕ್ಕಾರು : 15.08.2014, ಶುಕ್ರವಾರ ಡಾ|| ಪಾದೇಕಲ್ಲು ವಿಷ್ಣು ಭಟ್ರವರು ಬರೆದ ಶ್ರೀಕುಮಾರಿಲಭಟ್ಟರು ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶಿವರಾಜ್ ಸುಬ್ರಾಯ ಭಟ್ಟ, ಕೋಣಾರೆ ಹಾಗೂ ನಾಗರಾಜ ಗಜಾನನ ಭಟ್ಟ, ಭಡ್ತಿ ಪ್ರಾಯೋಜಕತ್ವ ವಹಿಸಿದ್ದರು. ಶ್ರೀಗಳವರ ಲೇಖನಾಮೃತದ ಕಿರು ಹೊತ್ತಗೆ ಮಡಿಲ ಮಮತೆಗೆ ಮುಡಿ ಸಮರ್ಪಿತವನ್ನು ಉ.ಕ. ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ… Continue Reading →