ಶ್ರೀ ರಘೂತ್ತಮ ಮಠ ಕೆಕ್ಕಾರು : 01.08.2014,ಶುಕ್ರವಾರ

ಇಂದು¸ ಜಿ. ವಿ. ಹೆಗಡೆ ಕಾನ್ಮೊಲೆ ಕುಟುಂಬದವರು ಗುರುಭಿಕ್ಷಾಂಗ ಪಾದಪೂಜೆ ಸೇವೆ ನಡೆಸಿದರು.

ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ 21 ನೇ ಕೃತಿಯಾದ ‘ಶ್ರೀ ರಾಮಕೃಷ್ಣ ಪರಮಹಂಸ’, ಶಾಂತಿವೃತಾನಂದರವರು ಬರೆದ ಕೃತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವವನ್ನು ಡಿ. ಜಿ ಭಟ್ಟ ಸೂರಿ ವಹಿಸಿದ್ದರು. ಶ್ರೀ ಭಾರತೀ ಪ್ರಕಾಶನ ಹೊರತಂದ “ಶ್ರೀಗಳವರ ಪ್ರವಚನ ಮಾಲಿಕೆ-2” ಸಿ.ಡಿ ಯನ್ನು ರವೀಂದ್ರ ಭಟ್ಟ ಸೂರಿ,ಜಿ. ವಿ. ಹೆಗಡೆ ಕಾನ್ಮೊಲೆ ಜಂಟಿಯಾಗಿ ಬಿಡುಗಡೆಗೊಳಿಸಿದರು.
~

ಶ್ರೀ ಶ್ರೀಗಳ ಪ್ರವಚನ:
ಇಂದಿನದು ಸರಳ ಸುಮಧುರ ಸಭೆ. ವೈಭವದ ಸಭೆಗಿಂತ ಇದಕ್ಕೆ ಸೌಂದರ್ಯವಿದೆ. ಸರಳತೆ ಶಾಶ್ವತವಾದುದ್ದು. ಸಾತ್ವಿಕತೆಯೇ ಹಾಗೆ. ಅದು ಸ್ಥಿರತೆ. ರಜೋಗುಣ ಸ್ಥಿರತೆಯನ್ನು ಕಾಯ್ದುಕೊಳ್ಳಲಾರದು. ಸರಳತೆಯಲ್ಲಿ ಶಾಶ್ವತ ಆಕರ್ಷಣೆಯಿದೆ. ‘ಗುರುವೆಂದರೆ ಸರಳತೆಯಲ್ಲಿ ಸೌಂದರ್ಯ’ ಎಂದು ಶ್ರೀಗಳು ನುಡಿದರು.

ಅನ್ನದ ಕಥೆ ಅಮ್ಮನ ಕಥೆಯಂತೆ, ಅದು ಇಲ್ಲದಾಗ ಅದರ ಮಹತ್ವದ ಅರಿವಾಗುತ್ತದೆ. ಸತ್ಯವೆನ್ನುವುದು ಮೇಲ್ನೋಟಕ್ಕೆ ಸಪ್ಪೆ, ಆದರೆ ಅದು ನಿತ್ಯ ಮಧುರವಾದದ್ದು. ‘ಸನ್ಯಾಸವೆಂದರೆ ಕಳೆಯುವ ಲೆಕ್ಕ. ಸೊನ್ನೆಯಾಗಬೇಕಾದರೆ ಎಲ್ಲವನ್ನೂನ್ ಕಳೆಯಬೇಕು ಕಳೆಯುವ ಲೆಕ್ಕದಲ್ಲಿ ಮುಂದಕ್ಕೆ ಸಾಗಿದಾಗ ಪರಮಪೂಜ್ಯರಾಗುತ್ತೇವೆ’ ಎಲ್ಲರ ದುಃಖ ನಮ್ಮ ದುಃಖವಾಗಬೇಕು. ಎಲ್ಲರ ಸುಖ ನಮ್ಮ ಸುಖವಾಗಬೇಕು ಅದೇ ಅದ್ವೈತ ಎಂದು ಅವರು ನುಡಿದರು.
~

Facebook Comments