ಶ್ರೀ ರಘೂತ್ತಮ ಮಠ ಕೆಕ್ಕಾರು : 10.08.2014, ಭಾನುವಾರ

ಸಾವಿತ್ರಿ ಬೆನ್ ಪಟೇಲ್ ಇವರ ಜನ್ಮ ದಿನದ ಪ್ರಯುಕ್ತ ಅವರ ಸುಪುತ್ರಿ ಡಾ|| ಅಲ್ಕಾ ಪಟೇಲ್ ವಿಶೇಷ ಸೇವೆ ಸಲ್ಲಿಸಿ ಶ್ರೀಗಳವರಿಂದ ಸುವರ್ಣ ಪುಷ್ಪ ಸಹಿತ ವಿಶೇಷ ಆಶೀರ್ವಾದಾನುಗ್ರಹ ಪಡೆದರು. ವಿದ್ವಾನ ಅನಂತ ಶರ್ಮಾ ಭುವನಗಿರಿಯವರು ಬರೆದ ಶ್ರೀವಿದ್ಯಾರಣ್ಯರು ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಪ್ರಾಯೋಜಕರಾದ ಕೃಷ್ಣ ಹೆಗಡೆ ಬೆಂಗಳೂರು ಹಾಜರಿದ್ದರು. ಶ್ರೀ ಸಂಸ್ಥಾನ ಸೂಕ್ತಿಪಟವನ್ನು ಎಸ್. ಆರ್. ಹೆಗಡೆ, ದಾವಣೆಗೆರೆ ಬಿಡುಗಡೆಗೊಳಿಸಿದರು. ರವಿಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಸಂಶೋಧಕ ಡಾ|| ಜಯರಾಮ ಭಟ್ಟ ಗೋವಾ ಉಪಸ್ಥಿತರಿದ್ದರು. ಬೆಂಗಳೂರು ಮಂಡಲದ ರಾಜರಾಜೇಶ್ವರಿ, ವಿಜಯನಗರ, ಗಿರಿನಗರ ವಲಯಗಳು ಹಾಗೂ ದಾವಣಗೆರೆ ವಲಯದಿಂದ ಸರ್ವಸೇವೆ ನೆರವೇರಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸನಾಪತ್ರ ನೀಡಲಾಯಿತು.

ಶ್ರೀ ಶ್ರೀಗಳ ಪ್ರವಚನ:

’ಜೀವನದ ಬಂಧನದಲ್ಲಿ ರಕ್ಷೆ ಇರಲಿ.’

ಇಂದು ರಕ್ಷಾ ಬಂದನದ ದಿನ. ಜೀವನದಲ್ಲಿ ಕೆಲವು ಬಂಧನಗಳು ರಕ್ಷೆಗಳಾದರೆ ಕೆಲವು ಶಿಕ್ಷೆಗಳಾಗುತ್ತವೆ. ತಾಯಿಯ ಆಲಿಂಗನದ ಬಂಧನ ಅದು ಮಗುವಿಗೆ ರಕ್ಷೆ. ಗುರು-ಶಿಷ್ಯ ಬಂಧನ ಅದು ಕೂಡ ರಕ್ಷೆ. ನಿಮ್ಮೆಲ್ಲರ ಜೀವನದ ಬಂಧನದಲ್ಲಿ ರಕ್ಷೆ ಇರಲಿ – ಶಿಕ್ಷೆ ಬೇಡ ಎಂದು ರಾಘವೇಶ್ವರ ಶ್ರೀಗಳು ನುಡಿದರು.

ಜಯ ಚಾತುರ್ಮಾಸ್ಯದ ಮೂವತ್ತನೇ ದಿನದ ಧರ್ಮಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಶ್ರಾವಣ ಪೂರ್ಣಿಮೆಯ ದಿನದಲ್ಲಿ ನಾವಿದ್ದೇವೆ. ಆಷಾಢ ಪೂರ್ಣಿಮೆಯಂದು ಪ್ರಾರಂಭವಾಗುವ ಚಾತುರ್ಮಾಸ್ಯ ಭಾದ್ರಪದ ಪೂರ್ಣಿಮೆಯಂದು ಮುಕ್ತಾಯವಾಗಲಿದೆ. ಇಂದು ಶ್ರಾವಣ ಪೂರ್ಣಿಮೆ. ಚಾತುರ್ಮಾಸ್ಯದ ಮಧ್ಯಭಾಗ. ವೇದ ಹಳತಾಗದಂತೆ ನೋಡಿಕೊಳ್ಳುವ ದಿನ. ವೇದಕ್ಕೆ ನೂತನತ್ವ ಬರುವಂತೆ ಮಾಡುವ ದಿನವಿದು. ವೇದವನ್ನು – ನಮ್ಮ ಪರಂಪರೆಯನ್ನು ನೆನಪುಮಾಡಿಕೊಳ್ಳುವ ದಿನ ಎಂದು ಅವರು ನುಡಿದರು. ಅಂದು ಗೋಕರ್ಣಕ್ಕೆ ಬಂದ ವಿದ್ಯಾರಣ್ಯರು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪಶ್ಚಿಮ ಪ್ರಾಂಗಣದಲ್ಲಿ ಕುಳಿತು ರಾಮಚಂದ್ರಾಪುರ ಮಠದ ಪರಂಪರೆ ಶಂಕರಾಚಾರ್ಯರ ಜ್ಯೇಷ್ಠ ಶಿಷ್ಯ ಪರಂಪರೆ ಎಂಬುದನ್ನು ಎತ್ತಿಹೇಳಿದ್ದರು. ಶ್ರೇಷ್ಠವನ್ನು ಶ್ರೇಷ್ಠವೆಂದು ಒಪ್ಪಿಕೊಳ್ಳುವುದು ಶ್ರೇಷ್ಠ ಗುಣ. ಹೃದಯ ವೈಶಾಲ್ಯ ಉಳ್ಳವರಿಂದ ಮಾತ್ರ ಇಂತಹ ಪ್ರಾಮಾಣಿಕ ಅಭಿಪ್ರಾಯ ಬರಲು ಸಾಧ್ಯ. ವಿಜಯನರ ಸಾಮ್ರಾಜ್ಯಕ್ಕೆ ಪ್ರಾಯೋಜಕರಾದ ವಿದ್ಯಾರಣ್ಯರ ಕುರಿತಾದ ಕೃತಿಗೆ ವಿಜಯನಗರ ವಲಯದವರು ಪ್ರಾಯೋಜಕರಾಗಿದ್ದು ಅರ್ಥಪೂರ್ಣ ಎಂದು ಅವರು ನುಡಿದರು.

ಸಾವಿತ್ರಿ ಬೆನ್ ಪಟೇಲ್ ಇವರ ಜನ್ಮ ದಿನದ ಪ್ರಯುಕ್ತ ಅವರ ಸುಪುತ್ರಿ ಡಾ|| ಅಲ್ಕಾ ಪಟೇಲ್ ವಿಶೇಷ ಸೇವೆ ಸಲ್ಲಿಸಿ ಶ್ರೀಗಳವರಿಂದ ಸುವರ್ಣ ಪುಷ್ಪ ಸಹಿತ ವಿಶೇಷ ಆಶೀರ್ವಾದಾನುಗ್ರಹ ಪಡೆದರು. ವಿದ್ವಾನ ಅನಂತ ಶರ್ಮಾ ಭುವನಗಿರಿಯವರು ಬರೆದ ಶ್ರೀವಿದ್ಯಾರಣ್ಯರು ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಪ್ರಾಯೋಜಕರಾದ ಕೃಷ್ಣ ಹೆಗಡೆ ಬೆಂಗಳೂರು ಹಾಜರಿದ್ದರು. ಶ್ರೀ ಸಂಸ್ಥಾನ ಸೂಕ್ತಿಪಟವನ್ನು ಎಸ್. ಆರ್. ಹೆಗಡೆ, ದಾವಣೆಗೆರೆ ಬಿಡುಗಡೆಗೊಳಿಸಿದರು. ರವಿಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಸಂಶೋಧಕ ಡಾ|| ಜಯರಾಮ ಭಟ್ಟ ಗೋವಾ ಉಪಸ್ಥಿತರಿದ್ದರು. ಬೆಂಗಳೂರು ಮಂಡಲದ ರಾಜರಾಜೇಶ್ವರಿ, ವಿಜಯನಗರ, ಗಿರಿನಗರ ವಲಯಗಳು ಹಾಗೂ ದಾವಣಗೆರೆ ವಲಯದಿಂದ ಸರ್ವಸೇವೆ ನೆರವೇರಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸನಾಪತ್ರ ನೀಡಲಾಯಿತು.

Facebook Comments