“ಗೋಗಂಗಾ  ಆಯುರ್ವೇದ  ಪಂಚಗವ್ಯ ಚಿಕಿತ್ಸಾ ಕೇಂದ್ರ, ಪೆರಿಯ” – ಉಚಿತ ಚಿಕಿತ್ಸಾ ಶಿಬಿರ

ಪೆರಿಯ: 7.8.2014
ಶ್ರೀರಾಮಚಂದ್ರಾಪುರಮಠ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಪೆರಿಯ ಗೋಗಂಗಾ  ಆಯುರ್ವೇದ ಪಂಚಗವ್ಯ ಚಿಕಿತ್ಸಾಲಯದ ಪ್ರಥಮವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದಲ್ಲಿ “ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಮತ್ತು ಜೈವಕೃಷಿಯೂ, ಆರೋಗ್ಯವೂ” ಎಂಬ ಸೆಮಿನಾರ್ ಜರಗಿತು.

ಆ ಪ್ರಯುಕ್ತ ಜರಗಿದ ಸಭೆಯಲ್ಲಿ  ಪುಲ್ಲೂರ್ ಗ್ರಾಮ ಪಂಚಾಯತ್ ಅದ್ಯಕ್ಷ ಶ್ರೀ.ಸಿ.ಕೆ. ಅರವಿಂದಾಕ್ಷನ್ ಅಧ್ಯಕ್ಷಸ್ಥಾನ ವಹಿಸಿದರು. ವಿಶೇಷ ಅತಿಥಿಯಾಗಿ ಉದುಮ ಮಂಡಲ ಯಮ್.ಯಲ್.ಎ ಶ್ರೀ.ಕೆ. ಕುಂಞಿರಾಮನ್ ಅವರು  ದೀಪಜ್ವಲನ ಮಾಡಿ ಉದ್ಘಾಟನೆ ಮಾಡಿದರು.  ಶ್ರೀ. ಟಿ. ವಿ. ಕರಿಯನ್ – ಆರೋಗ್ಯ ಸ್ಟಾಂಡಿಂಗ್  ಕಮಿಟೀ  ಚೆಯರ್ಮೇನ್ ಪೆರಿಯ  ಗ್ರಾಮ  ಪಂಚಾಯತ್, ಶ್ರೀಮತಿ ಗೀತಾನಾರಾಯಣನ್- ಮೆಂಬರ್ ಪೆರಿಯ ಗ್ರಾಮ ಪಂಚಾಯತ್, ಶ್ರೀ ಪಿ. ಮಾಧವನ್- ಮೆಂಬರ್ ಪೆರಿಯ ಗ್ರಾಮ ಪಂಚಾಯತ್, ಶ್ರೀ .ಪಿ. ಕುಂಞಿಕಣ್ಣನ್ – ಮೆಂಬರ್ ಪೆರಿಯ ಗ್ರಾಮ ಪಂಚಾಯತ್,   ಶ್ರೀ. ಕುಂಞಂಬು ಪೆರಿಯ,  ಬಿ. ಜೆ.ಪಿ. ಮಂಡಲ  ಸಮಿತಿ  ಸದಸ್ಯರು, ಶ್ರೀ. ಕೃಷ್ಣನ್ ಮಾಸ್ಟರ್, ಕಾರ್ಯದರ್ಶಿ, ಸಿ.ಪಿ.ಯಮ್. ಪೆರಿಯ ಲೋಕಲ್    ಇವರು ಶುಭಾಶಂಸನೆಗಳನ್ನಿತ್ತರು.

ವಿಶೇಷವಾಗಿ ಕರ್ಕಾಟಕ ಔಷಧ ಗಂಜಿ ಕಿಟ್ ಶಿಬಿರಾರ್ಥಿಗಳಿಗೆ  ವಿತರಿಸಲಾಯಿತು.  ಚಿಕಿತ್ಸಾಲಯ ನಿರ್ದೇಶಕ ಶ್ರೀ. ವಿಷ್ಣುಪ್ರಸಾದ್ ಹೆಬ್ಬಾರ್ ಸ್ವಾಗತಿಸಿ ವಾರ್ಷಿಕ ವರದಿಗಳನ್ನಿತ್ತರು. ಶ್ರೀ ಶಿವಪ್ರಸಾದ್ ಮನೋಳಿತ್ತಾಯ ಧನ್ಯವಾದವನ್ನಿವಿತ್ತರು.

ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟನೆ

ನಿರಾಮಯ ಪಂಚಗವ್ಯ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟನೆ

ವರದಿ: ಶ್ರೀ ಗೋವಿಂದ ಬಳ್ಳಮೂಲೆ

Facebook Comments