ಶ್ರೀ ರಘೂತ್ತಮ ಮಠ ಕೆಕ್ಕಾರು : 12.08.2014, ಮಂಗಳವಾರ

ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ರಚಿಸಿದ ಸಂತ ತ್ಯಾಗರಾಜ ಕೃತಿ ಹಾಗೂ ಹೊನ್ನಾವರ ಮಂಡಲದ ಸೇವೆಗಾಗಿ ಸಂಪರ್ಕ ಮಾಹಿತಿ ಪತ್ರವನ್ನು ಶೀಗಳವರು ಲೋಕಾರ್ಪಣೆಗೊಳಿಸಿದರು. ಶ್ರೀಗಳ ಲೇಖನಾಮೃತದ ಕಿರು ಹೊತ್ತಗೆ ನೆಚ್ಚು ನಿನ್ನಾತ್ಮವನೇ…. ಯನ್ನು ರಾಮಕೃಷ್ಣ ವಿಠೋಬ ಗಾವಡಿ ಬಿಡುಗಡೆಗೊಳಿಸಿದರು. ಪ್ರಾಯೋಜಕತ್ವವನ್ನು ಗಜಾನನ ಗಣಪತಿ ಯಾಜಿ, ಮಣ್ಣಿಗೆ ವಹಿಸಿದ್ದರು. ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿದರು. ಎಸ್. ಜಿ. ಭಟ್ಟ, ಕಬ್ಬಿನಗದ್ದೆ ನಿರೂಪಿಸಿದರು. ಹೊನ್ನಾವರ ಮಂಡಲದ ಗೇರುಸೊಪ್ಪಾ, ಅಸರಕೊಂಡ ಮತ್ತು ಮುಗ್ವಾ ವಲಯಗಳಿಂದ ಸರ್ವಸೇವೆ ನೆರೆವೇರಿತು. ಗಾವಡಿ ಸಮಾಜದವರು ವಿಶೇಷ ಸೇವೆ ಸಲ್ಲಿಸಿ ಅನುಗ್ರಹ ಪಡೆದರು. ಶ್ರೀ ಸಿದ್ಧಿವಿನಾಯಕ ದೇವ ಕೊಳೆಗದ್ದೆ ಸೇವಾ ಸಮಿತಿ ಮತ್ತು ಖರ್ವಾ ಗ್ರಾಮಸ್ಥರು ಶ್ರೀ ಗುರುಪಾದುಕಾ ಪೂಜೆ ನೆರವೇರಿಸಿ ವಿಶೇಷ ಆಶಿರ್ವಾದ ಪಡೆದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಶ್ರೀಕಲಾ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ, ಚಿಟ್ಟಾಣಿ ಇವರು ಅಪ್ಸರಕೊಂಡ ಮಠಕ್ಕೆ ೧.೫ಲಕ್ಷ ಸಮರ್ಪಿಸಿದರು. ವೆಂಕಟೇಶ್ವರಿ ಕರ್ವಜೆ ಮತ್ತು ಮಕ್ಕಳು ಮಂಜಲಪಡ್ಪು, ಪುತ್ತೂರು ಇವರು ಮೂಲಮಠಕ್ಕೆ ೪ಲಕ್ಷ ಹಾಗೂ ಜಯಗುರುವಿಗೆ ೧ಲಕ್ಷ ದೇಣಿಗೆ ನೀಡಿದರು. ಅನ್ನದಾನ ಸೇವೆಯಲ್ಲಿ ಭಾಗಿಗಳಾದವರು ನಾಗರಾಜ ಯಾಜಿ, ಕೆಳಗಿನೂರು ಹಾಗೂ ಗಣೇಶ ಹೆಗಡೆ ಬೊಮ್ಮಾರ. ಇಡಗುಂಜಿಯ ಶ್ವೇತಾ ಮತ್ತು ವಿನಾಯಕ ಭಟ್ಟ ದಂಪತಿಗಳು ಹಾಗೂ ನಾಜಗಾರಿನ ಜಾಹ್ನವಿ ಹರೀಶ ಭಟ್ಟ ದಂಪತಿಗಳನ್ನು ಶ್ರೀಗಳು ವಿಶೇಷವಾಗಿ ಅನುಗ್ರಹಿಸಿದರು.

ಶ್ರೀ ಶ್ರೀಗಳ ಪ್ರವಚನ:

’ಸಮಾಜವನ್ನ ಒಡೆಯುವವರಾಗದೆ ಕಟ್ಟುವವರಾಗಿ’

ಸಮಾಜ ಕಟ್ಟುವವರು – ಕಟ್ಟುವ ಸಮಾಜದವರು ಎರಡೂ ಇಂದಿನ ತುರ್ತು ಅಗತ್ಯ. ಕಟ್ಟುವ ಸಮಾಜವಾದ ’ಗಾವಡಿ ಸಮಾಜ’ದ ಸೇವೆ ಇಂದು ನಡೆದಿದೆ. ನೀವೆಲ್ಲ ಸಮಾಜವನ್ನ ಒಡೆಯುವವರಾಗದೆ ಕಟ್ಟುವವರಾಗಿ ಎಂಬ ಸಂದೇಶವನ್ನು ರಾಘವೇಶ್ವರ ಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ೩೨ನೇ ದಿನದ ಧರ್ಮ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಮನನ್ನು ಕಾಣಬೇಕಾದರೆ ನಾವು ತ್ಯಾಗರಾಜರಾಗಬೇಕು. ಭೋಗರಾಜರಾದರೆ ಅದು ಸಾಧ್ಯವಿಲ್ಲ. ತ್ಯಾಗರಾಜರು ಭಕ್ತಿ ಸಾರ್ವಭೌಮ – ಸಂಗೀತ ಸಾರ್ವಭೌಮ. ತ್ಯಾಗರಾಜರಂತವರು ಭಾವಕ್ಕೆ ಮಾತ್ರ ದಕ್ಕುವವರು. ಯಾಕೆಂದರೆ ಅವರು ಭಾವ ಜೀವಿ. ಇಂದು ಬಿಡುಗಡೆಯಾದ ಕೃತಿಯೊಳಗಿಳಿದು ಸುಕೃತರಾಗೋಣ ಎಂದು ಅವರು ನುಡಿದರು.

ಹೊನ್ನಾವರ ಮಂಡಲದ ಮೂರು ವಲಯಗಳು ’ಸೇವೆಗಾಗಿ ನಾವು’ ಎನ್ನುವ ಸಂಕಲ್ಪದೊಂದಿಗೆ ಇಂದು ಮುಂದೆ ಬಂದಿವೆ. ಆ ವಲಯಗಳ ಸೇವಾಬಿಂದುಗಳಿಂದ ಲೋಕೋಪಯೋಗಿ ಕಾರ್ಯ ನಡೆಯಲಿ. ಎಂದು ಶ್ರೀಗಳು ಹಾರೈಸಿದರು.

Facebook Comments