ಪೆರಾಜೆ-ಮಾಣಿ ಮಠಃ 13.9.2013, ಶುಕ್ರವಾರ

ಇಂದು ಶ್ರೀರಾಮಚಂದ್ರಾಪುರಮಂಡಲದ ಸಂಪೆಕಟ್ಟೆ, ನಿಟ್ಟೂರು ಹಾಗೂ ತುಮರಿ- ಹೊಸಕೊಪ್ಪ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಕೃಷ್ಣಮೂರ್ತಿ ಎಚ್ ಎನ್ ನಿಟ್ಟೂರು ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ಶ್ರೀ ರಾಜೀವ ಗಾಂವ್ ಕರ್, ಶ್ರೀ ಪ್ರಸನ್ನ ವೈದ್ಯ, ಶ್ರೀ ಸುಂದರೇಶ್, ಶ್ರೀ ಎಮ್ ನಿತ್ಯಾನಂದ ನಾಯಕ್ ವಿಟ್ಲ, ಶ್ರೀ ಎಮ್ ಸುಹಾಸ್ ಚಂದ್ರ ನಾಯಕ್ ವಿಟ್ಲ, ಶ್ರೀ ಲಕ್ಷ್ಮೀನಾರಾಯಣ ಅಡ್ಯಂತಾಯ ಕೊಳ್ನಾಡ್, ಶ್ರೀ ವಿ ತುಲಸೀದಾಸ ಶೆಣೈ ವಿಟ್ಲ, ಶ್ರೀ ಮೋಹನ್ ಪೈ ಮಾಣಿ ಶ್ರೀಗುರುಗಳಿಂದ ಅಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ಅನ್ನಪೂರ್ಣೇಶ್ವರೀ ಹವನ, ಕನ್ಯಾಸಂಸ್ಕಾರ ಹವನ(೪), ಸುಂದರಕಾಂಡ ಪಾರಾಯಣ, ಗಣಪತಿ ಹವನ ನವಗ್ರಹ ಶಾಂತಿ ಕುಜರಾಹುದಶಾ ಸಂಧಿ ಶಾಂತಿ, ಗಣಪತಿ ಹವನ ನವಗ್ರಹ ಶಾಂತಿ ರಾಹು ಬೃಹಸ್ಪತಿ ಶಾಂತಿ, ದುರ್ಗಾಪೂಜೆ, ಶ್ರೀಚಕ್ರಪೂಜೆ(ತ್ರಿಕಾಲ), ಶ್ರೀರಾಮಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.
ಪಾದಪೂಜೆಃ ಶ್ರೀ ಕೃಷ್ಣಮೂರ್ತಿ ಭಟ್ ಮಾವಿನಕಾರು, ಶ್ರೀ ಕಿಶೋರ್ ಬಾಯಾಡಿ ಪುತ್ತೂರು, ಶ್ರೀ ಕೆ ನಾರಾಯಣ ಭಟ್ ಕೆಮ್ಮಜೆ, ಶ್ರೀ ಆರ್ ಜೆ ಭಟ್ಟ ಶಿರಸಿ, ಶ್ರೀ ರಾಮಚಂದ್ರ ಗಜಾನನ ಭಟ್, ಶ್ರೀ ಬಿ ಎಸ್ ಮರಿಯಪ್ಪ ಭಟ್ಟ ಸುಳ್ಯ, ಶ್ರೀ ರಾಜಗೋಪಾಲ ಪುತ್ತೂರು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಗಾನಭೂಷಣ ಶ್ರೀಮತಿ ಉಷಾ ಈಶ್ವರ ಭಟ್ ವಿದ್ಯಾನಗರ ಕಾಸರಗೋಡು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶ್ರೀ ಪ್ರಭಾಕರ ಕುಂಜಾರು, ಮೃದಂಗದಲ್ಲಿ ಶ್ರೀ ವಸಂತಕೃಷ್ಣ ಕಾಂಚನ, ಘಟಮ್ ಶ್ರೀ ಬಿ ಜಿ ಈಶ್ವರ ಭಟ್ ಸಹಕರಿಸಿದರು.  ನಂತರ ಕೀರ್ತನ ಕಿಶೋರಿ ತುಷಾರ ಗೌರಿಯಿಂದ ಹರಿಕಥೆ ನಡೆಯಿತು. ಹಾರ್ಮೋನಿಯಮ್ ನಲ್ಲಿ ವಿದ್ವಾನ್ ಜಿ ಆರ್ ಕೇಶವಮೂರ್ತಿ, ಮೃದಂಗದಲ್ಲಿ ಶ್ರೀ ಪ್ರಸನ್ನ ಎನ್ ಭಟ್ ಬಲ್ನಾಡು ಸಹಕರಿಸಿದರು. ಶ್ರೀ ಶಿವರಾಮ ಕಜೆ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ಶ್ರೀ ಪಡೀಲು ಮಹಾಬಲ ಭಟ್ಟರು ನೀಡಿ ಗೌರವಿಸಿದರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments