ಪೆರಾಜೆ-ಮಾಣಿ ಮಠಃ 14.9.2013, ಶನಿವಾರ

ಇಂದು ಶ್ರೀರಾಮಚಂದ್ರಾಪುರ ಮಂಡಲದ ಹೊಸನಗರ, ತೀರ್ಥರಾಜಪುರ ಹಾಗೂ ಶಿವಮೊಗ್ಗ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಶ್ರೀಪೀಠದ ಮುಂದೆ ತಮ್ಮ ವಲಯಗಳ ಎಲ್ಲಾ ಆಗುಹೋಗುಗಳನ್ನು ನಿವೇದಿಸಿದರು. ಶ್ರೀ ರಂಗನಾಥ ಕೋಡೂರು ಹೊಸನಗರ ವಲಯಗಳ ಪರವಾಗಿ ಭಿಕ್ಷಾಸೇವೆಯನ್ನು ನೆರವೇರಿಸಿದರು. ಶ್ರೀ ವಿ ಬಿ ಸಭಾಹಿತ ಇಡಗುಂಜಿ, ಶ್ರೀ ರಾಮಕೃಷ್ಣ  ಅಜಕೂಡ್ಲು, ಶ್ರೀ ನಾರಾಯಣನ್ ಕಣ್ಣೂರು, ಶ್ರೀ ಪ್ರಮೋದ್ ರಾವ್ ಡಿ ವೈ ಎಸ್ ಪಿ ಬೆಂಗಳೂರು, ಶ್ರೀ ಆರ್ ಜಿ ಭಟ್ ಸಿ ಎಫ್ ಒ ಭಟ್ಕಳ, ಶ್ರೀ ಹರಿಶ್ಚಂದ್ರ ಮಂಗಳೂರು ವಿಮಾನ ನಿಲ್ದಾಣ ಪ್ರವಾಸೋದ್ಯಮ ವಿಭಾಗ, ಶ್ರೀ ಆರ್ ಟಿ ಹೆಗಡೆ ಕುಮಟಾ, ಶ್ರೀ ಮೋಹನ್ ದಾಸ್ ಕಾಮತ್  ಮತ್ತು ಶ್ರೀ ಬಿ ಆರ್ ಕಾಮತ್ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

 

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ(೩), ನವಗ್ರಹ ಶಾಂತಿ (೨), ಮೃತ್ಯ್ಂಜಯ ಶಾಂತಿ, ತ್ರ್ಯಂಬಕ ಶಾಂತಿ, ಗಣಪತ್ಯಥರ್ವಶೀರ್ಷ ಹವನ, ಶನಿಶಾಂತಿ, ಶ್ರೀರಾಮ ಪೂಜೆ, ಶ್ರೀರಾಮರಕ್ಷಾಸ್ತೋತ್ರ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ದೂರ್ವಾಕಣಜ, ಗೋಪೂಜೆಗಳು ನಡೆದವು. ರಾತ್ರಿಗೆ ಶನಿಪೂಜೆ ನಡೆಯಿತು.

ಪಾದಪೂಜೆಃ ಶ್ರೀ ನಾಗರಾಜ ಮಂಜಪ್ಪಯ್ಯ ತೀರ್ಥರಾಜಪುರ, ಶ್ರೀಧರ ಹೆಗಡೆ ಶಿವಮೊಗ್ಗ, ಡಾ. ಸತ್ಯಶಂಕರ ಭಟ್ಟ ಮಂಗಳೂರು. ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಮಂಗಳೂರು ಇದರ ಪರವಾಗಿ ಶ್ರೀಕೃಷ್ಣ ಶರ್ಮ ಹಳೆಮನೆ, ಶ್ರೀ ವೆಂಕಪ್ಪಯ್ಯ ದೇಲಂಪಾಡಿ, ಶ್ರೀ ನೆಕ್ಕರೆ ಸುಬ್ರಹ್ಮಣ್ಯ ಭಟ್ ಮಂಗಳೂರು, ಶ್ರೀ ವಿ ಗಣೇಶ ಭಟ್ಟ.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

 

Facebook Comments