ಪೆರಾಜೆ-ಮಾಣಿ ಮಠಃ 19.9.2013, ಗುರುವಾರ

ಇಂದು ಚಾತುರ್ಮಾಸ್ಯ ವ್ರತದ ಸಮಾಪ್ತಿಯ ಸೀಮೋಲ್ಲಂಘನ.  ಶ್ರೀಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಎಮ್ ಎನ್ ಮದ್ಗುಣಿಯವರು ಸೀಮೋಲ್ಲಂಘನ ಭಿಕ್ಷೆಯನ್ನು ನೆರವೇರಿಸಿದರು. ಶ್ರೀ ರಾಮಕೃಷ್ಣ ಅಜಕೂಡ್ಲು, ಶ್ರೀ ಪವನ್ ಸೇಠ್, ಶ್ರೀ ಆರ್ ಎಸ್ ಅಗರ್ ವಾಲ್, ಶ್ರೀಮತಿ ಉಷಾ ಅಗರ್ ವಾಲ್, ಶ್ರೀ ರಾಧೇಶ್ಯಾಂ ಗೋಯೆಂಕಾ, ವಿಜಯವಾಣಿಯ ಸಂಪಾದಕರು ಶ್ರೀ ತಿಮ್ಮಪ್ಪ ಭಟ್, ಶ್ರೀ ಜಿ ಟಿ ದಿವಾಕರ ಮಡಿಕೇರಿ, ಡಾ. ಸಂಜಯ ನಾಯಕ ರಾಣಿಬೆನ್ನೂರು ಬ್ರಾಹ್ಮಣ ಸಂಘದ ಅಧ್ಯಕ್ಷರು, ಶ್ರೀ ಬದರೀ ನಾಯಕ, ಶ್ರೀ ಟಿ. ಶ್ಯಾಮ ಭಟ್ ಬೆಂಗಳೂರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ಶ್ರೀ ಗುರುಗಳು ನಂತರ  ಉಪ್ಪಿನಂಗಡಿಯ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವುದರೆ ಮೂಲಕ ಸೀಮೋಲ್ಲಂಘನಗೈದರು. ಶ್ರೀಸಹಸ್ರಲಿಂಗೇಶ್ವರ ಹಾಗೂ ಪರಿವಾರ ದೇವರುಗಳ ದರ್ಶನ ಮಾಡಿ, ಅಲ್ಲಿ ಸೇರಿದ ಶಿಷ್ಯರನ್ನುದ್ದೇಶಿಸಿ ಆಶೀರ್ವಚನ ನೀಡಿ ಶ್ರೀಗುರುಗಳು ಮಾಣಿ ಮಠಕ್ಕೆ ಹಿಂತಿರುಗಿ ಬಂದು ಧರ್ಮಸಭೆಯನ್ನು ಅಲಂಕರಿಸಿದರು. ಸೀಮೋಲ್ಲಂಘನದ ನಂತರದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ಸೇವಾಪ್ರಶಸ್ತಿಯನ್ನು ನೀಡುವುದು ಸಂಪ್ರದಾಯ. ಈ ವಿಜಯ ಚಾತುರ್ಮಾಸ್ಯದ ಚಾತುರ್ಮಾಸ್ಯ ಸೇವಾ ಪ್ರಶಸ್ತಿಯನ್ನು ಶ್ರೀಮಠದ ಅಗ್ರಶಿಷ್ಯರಲ್ಲೊಬ್ಬರಾದ ಶ್ರೀ ಪ್ರಕಾಶ ಕೊಡಕ್ಕಲ್ಲು ಇವರಿಗೆ ನೀಡಿ ಗೌರವಿಸಲಾಯಿತು. ಈ ಶುಭಸಂದರ್ಭದಲ್ಲಿ “ಶ್ರೀಮುಖ”ವೆಂಬ ಪುರವಣಿಯನ್ನು ಶ್ರೀಗುರುಗಳು ಬಿಡುಗಡೆ ಮಾಡಿ ಹರಸಿದರು.

~

ಯಾಗಶಾಲೆಯಿಂದಃ

ಸೀಮೋಲ್ಲಂಘನದ ಅಂಗವಾಗಿ ಆವಹಂತೀ ಹವನ ನಡೆಯಿತು. 12 ಕಾಯಿ ಗಣಪತಿ ಹವನ, ಭಿಕ್ಷಾಂಗ ಆಂಜನೇಯ ಹವನ, ಶ್ರೀರಾಮ ಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ಬಾಳೆಹಣ್ಣಿನ ಕಣಜ ಸೇವೆ ನಡೆಯಿತು.

~

ಸಂಧ್ಯಾಕಾರ್ಯಕ್ರಮಃ

ಸಂಧ್ಯಾಕಾರ್ಯಕ್ರಮದಲ್ಲಿ ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಶ್ರೀಗುರುಗಳಿಗೆ ಕಿರೀಟೋತ್ಸವ, ಅಡ್ಡಪಲ್ಲಕಿ ಹಾಗೂ ದಂತಸಿಂಹಾಸನಾರೋಹಣ ಕಾರ್ಯಕ್ರಮಗಳು.

Facebook Comments