ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕರ್ನಾಟಕ  ವಿಧಾನ ಸಭೆಯ ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಭೇಟಿನೀಡಿ  ಶ್ರೀ ದೇವರ ದರ್ಶನ ಪಡೆದರು.
ಶ್ರೀ ದೇವಾಲಯದ ವತಿಯಿಂದ ಜಿ.ಕೆ.ಹೆಗಡೆ ಸ್ವಾಗತಿಸಿ ಶ್ರೀ ಕ್ಷೇತ್ರದ ಪೌರಾಣಿಕ ಮಹತ್ವ, ವೈಶಿಷ್ಟ್ಯ, ಸಾರಸ್ವತ-ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಿದರು.
ಪೂಜ್ಯ ಶಂಕರ ಭಗವತ್ಪಾದರು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಅಶೋಕೆಯಲ್ಲಿ ಶ್ರೀರಾಮಚಂದ್ರಾಪುರ ಮಠವನ್ನು ಸಂಸ್ಥಾಪಿಸಿದ ಸಂಗತಿ ತಿಳಿದು ಶ್ರೀ ರಮೇಶ್ ಕುಮಾರ್ ಸಂತೋಷ ವ್ಯಕ್ತಪಡಿಸಿದರು.
ಶ್ರೀಯುತರು ಸಧ್ಯದಲ್ಲಿಯೇ ತಮ್ಮ ಕುಟುಂಬ ಸಮೇತ ಪುನಃ ಸಂದರ್ಶಿಸುವುದಾಗಿ ತಿಳಿಸಿದರು.
Facebook Comments