ಶ್ರೀಮಠದ ಶಿಷ್ಯಸಮಾಜದ ಮುಖಂಡರ ಸಭೆ

ದೇಶ : ಶ್ರೀರಾಮಾಶ್ರಮ
ಕಾಲ : 15/10/2015
ಗಿರಿನಗರದ ಶ್ರೀರಾಮಾಶ್ರಮದಲ್ಲಿ  ಶ್ರೀಮಠದ ಶಿಷ್ಯಸಮಾಜದ ಮುಖಂಡರ ಸಭೆ ಸಂಪನ್ನವಾಯಿತು. ಸಭೆಯಲ್ಲಿ ಹವ್ಯಕ ,ಕುರುಬ,ಮುಖ್ರಿ, ನಾಡವ , ಭಂಡಾರಿ, ಮಡಿವಾಳ, ಖಾರ್ವಿ , ಗಾಣಿಗ, ನಾಮಧಾರಿ, ದೇಶಭಂಡಾರಿ, ಹಾಲಕ್ಕಿ ಸಮಾಜಗಳು ಸೇರಿದಂತೆ ಒಟ್ಟು 12 ಸಮಾಜದ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡರಾದ ಶ್ರೀ ವೈ ಎನ್ ಗೌಡರ್ ಅವರು, ಶ್ರೀಗಳ ಮೇಲೆ ಮಾಡಲಾಗಿರುವ ಮಿಥ್ಯಾರೋಪವನ್ನು ನಾವು ಖಂಡಿಸುತ್ತೇವೆ, ಉತ್ತರ ಕರ್ನಾಟಕದಲ್ಲಿ ಬರ ಬಂದಾಗ ಗೋವುಗಳಿಗೆ ಟನ್ನುಗಟ್ಟಲೆ ಮೇವನ್ನು ಕಳಿಸಿಕೊಟ್ಟಿರುವ ಮಠಕ್ಕೆ ನಾವೆಂದೂ ಕೃತಜ್ಞರಾಗಿರುತ್ತೇವೆ, ಶ್ರೀಗಳಮೇಲೆ ನಮಗೆ ಅಚಲವಾದ ನಂಬಿಕೆಯಿದ್ದು ಎಲ್ಲರೂ ಒಗ್ಗೂಡಿ ಧರ್ಮದ ಉಳಿವಿಗೆ ಶ್ರಮಿಸೋಣ ಎಂದು ಕರೆನಿಡಿದರು.
ನಂತರ ಮುಖ್ರಿ ಸಮಾಜದ ಮುಖಂಡರಾದ ಶ್ರೀ ಎನ್ ಆರ್ ಮುಖ್ರಿ, ನಾಡವ ಸಮಾಜದ ಶ್ರೀ ಪ್ರದೀಪ್ ನಾಯಕ್, ಶಿಲ್ಪಿಗಳಾದ ಶ್ರೀ ಕುಮಾರ್ ಜಯನಗರ,ಹಾಲಕ್ಕಿ ಸಮಾಜದ ಶ್ರೀ ರಾಧಾಕೃಷ್ಣ ಗೌಡ, ದೇಶ ಭಂಡಾರಿ ಸಮಾಜದ ಶ್ರೀ ಪಾಂಡುರಂಗ ಭಂಡಾರಿ ಮತ್ತಿತರರು ಮಾತನಾಡಿ  ‘ಶ್ರೀಗಳ ಮೇಲೆ ನಮಗೆ ಅಚಲವಾದ ವಿಶ್ವಾಸವಿದ್ದು, ಸಮಾಜ ಶ್ರೀಗಳ ಜೊತೆಗಿದೆ, ಶ್ರೀಮಠದ ಮೇಲಿನ ಎಲ್ಲಾ ಷಡ್ಯಂತ್ರಗಳನ್ನು, ಶ್ರೀಗಳ ತೇಜೋವಧೆಯ ಪ್ರಯತ್ನವನ್ನು ಸಮಾಜ ಖಂಡಿಸುತ್ತದೆ. ಈ ದಿಶೆಯಲ್ಲಿ ನಾವು ಯಾವುದೇ ತರಹದ ಹೋರಾಟಕ್ಕೂ ಸಿದ್ದರಿದ್ದೇವೆ’ ಎಂದು ಒಮ್ಮತದ ಅಭಿಪ್ರಾಯವನ್ನು ಹಂಚಿಕೊಂಡರು.
ಶ್ರೀಮಠದ ಶಿಷ್ಯಸಮಾಜದವತಿಯಿಂದ ಅಕ್ಟೋಬರ್ 31ರಂದು ಬೇಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ನೆಡೆಸಿ ಶ್ರೀಮಠದ ಮೇಲೆ ನೆಡೆಯುತ್ತಿರುವ ಷಡ್ಯಂತ್ರದ ಹಿಂದಿರುವವರನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಲು ಎಲ್ಲಾ ಸಮಾಜದ ಮುಖಂಡರು ನಿರ್ಧರಿಸಿದರು.
ಸಭೆಯಲ್ಲಿ ಶ್ರೀಮಠದ ಪದಾದಿಕಾರಿಗಳಾದ ಮೋಹನ ಭಾಸ್ಕರ್ ಹೆಗಡೆ, ವಿದ್ವಾನ್ ಜಗದೀಶ್ ಶರ್ಮ, ಡಾ. ವೈ ವಿ ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು ಹಾಗು ಕಾನೂನು ತಜ್ಞರು ಭಾಗವಹಿಸಿ ಪ್ರಸ್ತುತ ಪ್ರಕರಣದ ಕುರಿತಂತೆ ಮಾಹಿತಿಯನ್ನಿತ್ತರು. ಸಭೆಯ ನಂತರ  ಸರ್ವ ಸಮಾಜದ ಮುಖಂಡರು ಪರಮಪೂಜ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಆಶೀರ್ವಾದಪೂರ್ವಕ ಮಂತ್ರಾಕ್ಷತೆ ಪಡೆದರು.
ಶಿಷ್ಯಸಮಾಜದ ಮುಖಂಡರ ಸಭೆ

ಶಿಷ್ಯಸಮಾಜದ ಮುಖಂಡರ ಸಭೆ

Facebook Comments