ಬೆಂಗಳೂರು 23. ದೇಹವೆಂದರೆ ನೌಕೆ ಇದ್ದಂತೆ ಅದನ್ನು ತೇಲಿಸುವ ಜವಾಬ್ದಾರಿ ವೈದ್ಯರದ್ದಾದರೆ ಗುರಿ ತಲುಪಿಸುವ ಹೊಣೆ ಗುರುವಿನದ್ದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು. ಅವರು ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ  ಶ್ರೀ ಭಾರತೀ ಆರೋಗ್ಯ ಧಾಮದ ದಶಮಾನೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ಜ್ಯಾಗೃತಿ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ವೈದ್ಯೋ ನಾರಾಯಣೋ ಹರಿ: ಎನ್ನುವಂತೆ ರೋಗಿಯ ಪಾಲಿಗೆ ಸಂಜೀವಿನಿಯಾಗಬೇಕಿದ್ದ ವೈದ್ಯರು ಇಂದು ಹಣಕ್ಕೆ ಮಾರುಹೋಗಿದ್ದಾರೆ, ವೈದ್ಯರು ಸೇವೆಯ ರೂಪದಿಂದ ಕರ್ತವ್ಯ ನಿರ್ವಹಿಸಬೇಕು ಇಂದು ಹೇಳಿದರು.ವಿವಿಧ ಆಸ್ಪತ್ರೆಯ ನುರಿತ ವೈದ್ಯರುಗಳು ರೋಗಿಗಳ ತಪಾಸಣೆ ನಡೆಸಿದರು. ಲಯನ್ಸ್ ಮತ್ತು ಸಿಪ್ಲಾಕ್ಸ್  ಸಂಸ್ಥೆಗಳು ಶಿಬಿರದಲ್ಲಿ ಭಾಗವಹಿಸಿದ್ದವು.

ಚಿತ್ರ, ವರದಿ: ಗೌತಮ್ ಬಿ ಕೆ.

Facebook Comments Box