ವಟಸಾವಿತ್ರೀ ವ್ರತಶ್ರೀ ರಾಮಚಂದ್ರಾಪುರ ಮಠ ಪೆರಾಜೆ, ಮಾಣಿಃ

23-6-2013: ಮಂಗಳೂರು ಹೋಬಳಿಯ ಉಪ್ಪಿನಂಗಡಿ, ಮುಳ್ಳೇರಿಯಾ ಮತ್ತು ಮಂಗಳೂರು ಮಂಡಲಗಳ ಒಟ್ಟು ಸೇರುವಿಕೆಯಲ್ಲಿ ಶ್ರೀ ರಾಮಚಂದ್ರಾಪುರ ಮಠ ಪೆರಾಜೆಯ ಮಾಣಿ ಮಠದಲ್ಲಿ “ವಟಸಾವಿತ್ರೀ ವ್ರತ“ದ ಪೂಜೆಯನ್ನು ವೇ.ಮೂ.ಶ್ರೀ ಮಿತ್ತೂರು ತಿರುಮಲೇಶ್ವರ ಭಟ್ಟ, ಅನೂಚಾನ ನಿಲಯ ಇವರ ಪೌರೋಹಿತ್ಯದಲ್ಲಿ, ಶ್ರೀ ಶ್ರೀರಂಗ ಭಟ್ಟ ಬಳ್ಳಮಜಲು, ವನಜಾಕ್ಷಿ ದಂಪತಿಗಳು ನೆರವೇರಿಸಿದರು.
ಈ ಶುಭ ಸಂದರ್ಭದಲ್ಲಿ ಅರುವತ್ತು ಜನ ಮಹಿಳೆಯರಿಂದ ಶ್ರೀ ಲಲಿತಾಸಹಸ್ರನಾಮ ಸಹಿತ ಕುಂಕುಮಾರ್ಚನೆ ನಡೆಯಿತು. ವೇ. ಮೂ. ಶ್ರೀ ಮಿತ್ತೂರು ತಿರುಮಲೇಶ್ವರ ಭಟ್ಟ, ಅನೂಚಾನ ನಿಲಯ ಇವರು ಈ ಪುಣ್ಯದಿನ “ವಟ ಸಾವಿತ್ರೀ ವ್ರತ”ದ ಮಹತ್ವದ ಬಗ್ಗೆ ಸಾದ್ಯಂತ ವಿವರಿಸಿದರು. ಶ್ರೀಮಾಣಿ ಮಠದ ಶ್ರೀದೇವರಿಗೆ ಮಹಾಪೂಜೆಯ ಬಳಿಕ ಪ್ರಸಾದ ಭೋಜನ ವ್ಯವಸ್ಥಿತವಾಗಿ ನಡೆಯಿತು.

ನಂತರ ನಡೆದ ಮಾತೃಶಾಖಾ ಸಭೆಯಲ್ಲಿ, ವಿಜಯ ಚಾತುರ್ಮಾಸ್ಯ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ, ಶ್ರೀ ಕೆ.ಟಿ. ವೆಂಕಟೇಶ್ವರ ನೂಜಿ, ಇವರು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಉಪ್ಪಿನಂಗಡಿ, ಮಂಗಳೂರು ಮತ್ತು ಮುಳ್ಳೇರಿಯಾ ಮಂಡಲಗಳ ಮಾತೃಶಾಖಾ ಪ್ರಧಾನರು ಉಪಸ್ಥಿತರಿದ್ದರು. ಮಾಣಿ ವಲಯದ ಅಧ್ಯಕ್ಷ ಶ್ರೀ ಶಂಕರನಾರಾಯಣ ಭಟ್ ಸೊಂದಿ, ಮಾಣಿ ವಲಯದ ಮಾತೃಶಾಖಾ ಪ್ರಧಾನೆ ಶ್ರೀಮತಿ. ದೇವಕಿ ಬಿ. ಭಟ್, ವಲಯ ಕಾರ್ಯದರ್ಶಿ ಶಿವಪ್ರಸಾದ, ಸುದರ್ಶನ, ಮುಕುಂದ ಬರೆಪ್ಪಾಡಿ ಸಹಕರಿಸಿದರು. ಮಾಣಿ ವಲಯ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.

~*~

ಮಹಿಳೆಯರಿಂದ ಕುಂಕುಮಾರ್ಚನೆ

ಮಹಿಳೆಯರಿಂದ ಕುಂಕುಮಾರ್ಚನೆ

ಪೂಜಾಕಾರ್ಯ

ಪೂಜಾಕಾರ್ಯ

ಮಂಗಳಾರತಿ

ಮಂಗಳಾರತಿ

Facebook Comments Box