ಶ್ರೀಗಳ ವಿರುದ್ದದ ಷಡ್ಯಂತ್ರ ಖಂಡಿಸಿ ಕೋಲಾರ ಜಿಲ್ಲಾದ್ಯಂತ ಪ್ರತಿಭಟನೆ – ಮನವಿ ಸಲ್ಲಿಕೆ ; 11/12/2015

ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಏಳಿಗೆಗೆ ದುಡಿಯುತ್ತಿರುವ ಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳ ವಿರುದ್ದ ನಡೆಯುತ್ತಿರುವ ಷಡ್ಯಂತ್ರಗಳನ್ನು ಬೇದಿಸಿ, ಶ್ರೀಗಳಿಗೆ ಕಿರುಕುಳ ಕೊಡುತ್ತಿರುವವರ ವಿರುದ್ದ ತತ್ ಕ್ಷಣ ಸೂಕ್ತಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ, ವಿವಿಧ ಹಿಂದೂಪರ ಸಂಘಟನೆಗಳು ಕೋಲಾರ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಪತ್ರಿಕಾಗೋಷ್ಟಿ ನೆಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 

ಕೋಲಾರ :

ಗ್ರಾಮ ವಿಕಾಸ ಸಂಸ್ಥೆಯ ರಾಮಚಂದ್ರಪ್ಪನವರು ಮಾತನಾಡಿ, ಸುಮಾರು 1.300 ವರ್ಷ ಇತಿಹಾಸವಿರುವ ಶ್ರೀರಾಮಚಂದ್ರಪುರ ಮಠದ ವಿರುದ್ದ ಹಲವಾರು ಷಡ್ಯಂತ್ರಗಳು ನಡೆವುತ್ತಿದೆ. ಮಠದ ಪರವಾಗಿ ದಾಖಲಿಸಿದ ಯಾವುದೇ ದೊರುಗಳಿಗೂ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. 2010 ರಲ್ಲಿ ಗೋಕರ್ಣದ ಪೋಲೀಸ್ ಠಾಣೆಯಲ್ಲಿ ದಾಖಲದ ನಕಲಿ ಅಶ್ಲೀಲ ಸಿ.ಡಿ ಪ್ರಕರಣವು ದಕ್ಷ ಪೋಲೀಸ್ ಅದಿಕಾರಿಗಳ ಪ್ರಯತ್ನದಿಂದಾಗಿ ಸಮಗ್ರ ತನಿಖೆಯಾಗಿ ಸಂಭದಿಸಿದ ಸಾಕ್ಷದಾರಗಳನ್ನು ಕಲೆ ಹಾಕಿ ನ್ಯಾಯಲಯಕ್ಕೆ ಸಲ್ಲಿಸಲಾಗಿತ್ತು.ಇಂತಹ ಪ್ರಕರಣವನ್ನು ಸಹ ವಿಶೇಷ ಆದೇಶದ ಮೂಲಕ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡಿಯುವಂತೆ ಸರ್ಕಾರವು ಆದೇಶಿಸಿದ್ದು, ಸರ್ಕಾರದ ಈ ನಡೆಯಿಂದ ಆರೋಪಿಗಳ ಕೃತ್ಯಕ್ಕೆ ಉತ್ತೇಜನ ನೀಡಿದಂತೆಯಾಗುತ್ತದೆ, ಸಾರ್ವಜನಿಕ ಹಿತಕ್ಕೆ ದಕ್ಕೆಯಾಗಿರುತ್ತದೆ ಹಾಗೂ ದಕ್ಷ ಪೋಲೀಸ್ ಅದಿಕಾರಿಗಳ ಆತ್ಮ ಸ್ಥೈರ್ಯವನ್ನು ಕುಗ್ಗಿಸಿದಂತೆ ಆಗುತ್ತದೆ ಎಂದು ದೂರಿದರು.

ಶ್ರೀರಾಮಚಂದ್ರಪುರ ಮಠದಂತಹ ಸಾತ್ವಿಕ ಮಠಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರ ಹಾಗು ನಿರಂತರ ದಾಳಿಯನ್ನು ಖಂಡಿಸಿ ಈ ಕುರಿತು ಸೂಕ್ತ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ಸೂಚನೆ ನೀಡಬೇಕೆಂದು, ಹಿಂದೂ ಸಾಧು ಸಂತರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸರ್ಕಾರ ವೈಫಲ್ಯವನ್ನು ವಿರೋದಿಸಿ ವಿಧಾನ ಪರಿಷತ್ ಚುನಾವಣ ನಂತರದ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಭಜರಂಗದಳದ ಬಾಬು,ಬಾಲಾಜಿ, ಡಾ.ಶಿವಣ್ಣ (ವಿ.ಹೆಚ್.ಪಿ) ವಿಶ್ವನಾಥ್, ಶ್ರೀನಿವಾಸ, ಜಗದೀಶ,ಜಯಪ್ರಕಾಶ, ಗೋ ಪರಿವಾರದ ಶ್ರೀಕರ ಭಟ್ ಇನ್ನಿತರರು ಉಪಸ್ಥಿತರಿದ್ದರು.

ಬಂಗಾರ ಪೇಟೆ :

ಮಾಲೂರು ಗೋಶಾಲೆಯ ಸಂಸ್ಥಾಪಕ ಹಾಗೂ ಕೋಲಾರ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಘುರಾಮ ರೆಡ್ಡಿ ಮಾತನಾಡಿ, ಶ್ರೀರಾಘವೇಶ್ವರರನ್ನು ನಾನು ತುಂಬಾ ಹತ್ತಿರದಿಂದ ತಿಳಿದಿದ್ದೇನೆ. ಶ್ರೀಗಳು ತುಂಬಾ ಸಾತ್ವಿಕರಾಗಿದ್ದು, ಹಿಂದೂ ಸಮಾಜದ ಏಳಿಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಂತ ಮಹಾನ್ ಸಂತರ ತಂಟೆಗೆ ಹೋಗುವಾಗ ಎಚ್ಚರವಾಗಿರಿ ಎಂದರು.

ಇಂತಹ ಷಡ್ಯಂತ್ರದ ವಿರುದ್ದ ಯುವ ಜನತೆ ಎಚ್ಚೆತ್ತುಕೊಂಡು ಉಗ್ರ ಹೋರಾಟ ನಡೆಸಬೇಕು. ಹಿಂದೂ ಸಾಧು ಸಂತರ ಮೇಲೆ ದೌರ್ಜನ್ಯ ನಿಲ್ಲಬೇಕಿದ್ದರೆ ಯುವಕರು ಜಾಗ್ರತರಾಗಬೇಕು, ಇಲ್ಲದಿದ್ದರೆ ಇನ್ನಷ್ಟು ಕಿರುಕುಳ ಅನುಭವಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮೀಣ ವಿಕಾಸದ ರಾಮಚಂದ್ರಪ್ಪ, ಉದ್ಯಮಿ ಹಾಗೂ ಹಿಂದೂ ಪ್ರಮುಖ ನಂದ, ರಾಮ ರೆಡ್ಡಿ, ಅನಿಲ,ಮಂಜು,ಪ್ರದೀಪ,ಮಾಲೂರಿನ ಅಪ್ಪಿ, ರಾಜಾರಾಮ ರೆಡ್ಡಿ, ಗೋ ಪರಿವಾರದ ಸಂಯೋಜಕರಾದ ಮಂಜುನಾಥ್ ಹಲ್ಕೊಡು, ಮಧು ಗೋಮತಿ,ನವೀನ್ ಹೆಗಡೆ, ಶ್ರೀಕರ ಭಟ್ ಹಾಜರಿದ್ದರು.

ಮಾಲೂರು :

ನಕಲಿ ಸಿ.ಡಿ.ಪ್ರಕರಣವನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರದ ಮತ್ತು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲಿನ ಷಡ್ಯಂತ್ರವನ್ನು ವಿರೋಧಿಸಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹಲವು ಹಿಂದೂ ಪರ ಸಂಘಟನೆಗಳಿಂದ, ತಾಲೂಕಿನ ತಹಶಿಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿ, ಪತ್ರಿಕ ಗೋಷ್ಠಿಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ, ಮಾಲೂರಿನ ಪ್ರಮುಖ ಉದ್ಯಮಿ ನಾರಾಯಣಪ್ಪ, ಯುವ ಸಮಾಜ ಸೇವಕ ಅಪ್ಪಿ, ಶ್ರೀರಾಮಸೇನೆಯ ವಿಧಿ ಚಕ್ರ ಭರತ್, ಗೋಪಾಲಪ್ಪ, ಪರಮೇಶ್ವರ, ಗುರುನಾಥ್ ರೆಡ್ಡಿ, ವಿಶ್ವನಾಥ,
ಗೋ ಪರಿವಾರದ ಸಂಯೋಜಕರಾದ ಮಂಜುನಾಥ್ ಹಲ್ಕೊಡು, ನವೀನ್ ಹೆಗಡೆ, ಇನ್ನಿತರರು ಉಪಸ್ಥಿತರಿದ್ದರು.

ಶ್ರೀನಿವಾಸಪುರ :

 ಪಟ್ಟಣದ ಶ್ರೀಲಕ್ಷ್ಮಿ ನರಂಸಿಹ ದೇವಸ್ಥಾನದಿಂದ ತಹಶಿಲ್ದಾರರ ಕಛೇರಿವರೆಗೆ ಮೆರವಣೆಗೆ ನಡೆಯಿತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರು ಅದನ್ನು ಲೆಕ್ಕಿಸದೇ ಜನರು ಮೆರವಣೆಗೆಯಲ್ಲಿ ಭಾಗವಹಿಸಿದರು. ಶ್ರೀರಾಘವೇಶ್ವರ ಶ್ರೀಗಳಿಗೆ ಜೈ… ವಂದೇ ಗೋಮಾತರಂ… ಜಯ ಘೋಷ ಮೊಳಗಿತು.ಮರೆವಣಿಗೆ ಪ್ರಾರಂಭವಾಗುವ ಸಮಯದಲ್ಲಿ ಗೋಮಾತೆಯ ಆಗಮನ ಆಯಿತು. ಗೋರಕ್ಷಕನ ರಕ್ಷಣೆಯ ಹೊಣೆಯನ್ನು ಪ್ರತಿಭಟನಕಾರರಿಗೆ ವಹಿಸಿದಂತೆ ಇತ್ತು. ಇದರಿಂದ ಉತ್ತೇಜನಗೊಂಡ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತು.


ಮನವಿ ಸಲ್ಲಿಕೆಯ ಸಮಯದಲ್ಲಿ ಮಾತಾನಾಡಿದ ಮುಖಂಡ ಮಂಜುನಾಥ್ ಇತ್ತೀಚಿನ ದಿನಗಳಲ್ಲಿ ಹಿಂದೂ ಸಾಧು ಸಂತರನ್ನು ವ್ಯವಸ್ಥಿತವಾಗಿ ಹಣೆಯುವ ಸಂಚು ರಾಷ್ಟ್ರಾದ್ಯಂತ ನಡೆಯುತ್ತಿದ್ದು, ಇದಕ್ಕೆ ನಮ್ಮ ಕಣ್ಣೇದುರಿರುವ ಸ್ಪಷ್ಟ ಚಿತ್ರಣ ಶ್ರೀರಾಘವೇಶ್ವರರ ಮೇಲೆ ನಡೆಯುತ್ತಿರುವ ಷಡ್ಯಂತ್ರ. ಈ ಷಡ್ಯಂತ್ರದಿಂದ ಅಪಾರ ಗೋ ಪ್ರೇಮಿಗಳಿಗೆ ಮತ್ತು ಶ್ರೀರಾಘವೇಶ್ವರರ ಭಕ್ತ ವೃಂದಕ್ಕೆ ಮಾನಸಿಕ ಆಘಾತವಾಗಿದೆ. ಈ ಷಡ್ಯಂತ್ರದ ಪಿತೂರಿಯಲ್ಲಿ ಹಲವು ಪ್ರತಿಷ್ಟಿತ ವ್ಯಕ್ತಿಗಳು ಭಾಗಿ ಆಗಿರುವ ಶಂಕೆ ಇದೆ. ನಕಲಿ ಸಿ.ಡಿ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದ ನಿರ್ಧಾರವನ್ನು ಕೈ ಬಿಟ್ಟು ಸೂಕ್ತ ವಿಚಾರಣೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗದಿದ್ದರೆ, ಕೆಲವೇ ದಿನದಲ್ಲಿ ಬೀದಿಗೆ ಇಳಿದು ಉಗ್ರ ಹೋರಾಟವನ್ನು ನಡೆಸುತ್ತೇವೆ ಎಚ್ಚರಿಕೆ ಇರಲಿ ಎಂದರು. ನಂತರ ಮಾತನಾಡಿದ ಶಿವರಂಗೆ ಗೌಡ, ಶ್ರೀರಾಘವೇಶ್ವರ ಸ್ವಾಮಿಜೀಗಳಿಗಾಗಿ ಪ್ರಾಣವನ್ನು ನೀಡಲು ಸಿದ್ದ. ಇನ್ನು ಸಾಧು ಸಂತರ ಮೇಲಿ ನಡೆಯುವ ದಬ್ಬಾಳಿಕೆಯನ್ನು ಸಹಿಸಲು ಸಾದ್ಯವಿಲ್ಲ, ಉಗ್ರ ಹೋರಾಟ ಅನಿವಾರ್ಯ ಎಂದರು.


ಗೋವು ನಮ್ಮೆಲ್ಲರ ಆರಾದ್ಯದೈವ, ಅದರ ರಕ್ಷಣೆಗೆ ಪಣತೊಟ್ಟು, ಗೋರಕ್ಷಣೆಗೆ ಹೊಸ ನೀತಿಯನ್ನೆ ರೂಪಿಸಿದವರು ರಾಘವೇಶ್ವರ ಶ್ರ್ಗೀಗಳು ಇಂತವರ ಮೇಲೆ ಸುಳ್ಳಿನ ಸರಮಾಲೆ ಸೃಷ್ಟಿಸಿ ಅವರನ್ನು ಸಮಾಜಮುಖಿ ಕಾರ್ಯದಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕ್ರಿಯೆ ಇಲ್ಲಿಗೆ ನಿಲ್ಲದ್ದಿದ್ದರೆ ಸಂಚುಕೊರಾರು ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ಇರಲಿ ಎಂದು ಹಿಂದೂ ಸಂಘಟನೆಗಳ ಪ್ರಮುಖ ಚಂದ್ರಶೇಖರ ಹೇಳಿದರು.

ಮಹಿಳಾ ಸಂಘಟನೆ ಉಮಾದೇವಿ ಮಾತನಾಡಿ, ಶ್ರೀರಾಘವೇಶ್ವರ ಸ್ವಾಮೀಜಿಗಳು ನಮ್ಮೆಲ್ಲರಿಗೂ ತಾಯಿಯ ಪ್ರೀತಿಯನ್ನು ನೀಡುತ್ತಿದ್ದಾರೆ. ನಮಗೆ ಶ್ರೀಮಠದಲ್ಲಿ ನಮಗೆ ಮಾತೃ ಸ್ಥಾನ ನೀಡಿ ಗೌರವಿಸುತ್ತಿದ್ದಾರೆ ಎಂದರು.ಶ್ರೀಮಠಕ್ಕೆ, ಶ್ರೀಗಳಿಗೆ ತೊಂದರೆ ಆಗುವುದನ್ನು ನಾವು ಒಪ್ಪುವುದಿಲ್ಲ ಎಂದರು.

ಈ ಸಂದರ್ಭದಲ್ಲಿ, ವಿವಿದ ಸಂಘಟನೆಯ ಪ್ರಮುಖರಾದ, ವೇವಣ್ಣ, ಶಿವಣ್ಣ, ಲಕ್ಷ್ಮಣ ಗೌಡ, ಸರಸ್ವತಮ್ಮ, ನಂದೀಶ್, ರಂಗಪ್ಪ ಗೌಡ, ರಾಜಣ್ಣ, ಮುನಿಯಪ್ಪ, ಪದ್ಮನಾಭ, ಚಿನ್ನಪ್ಪ ರೆಡ್ಡಿ, ಜಯರಾಮ ರೆಡ್ಡಿ, ವೆಂಕಟರನಣಪ್ಪ, ಚೌಡಪ್ಪ,ಉಲ್ಲಂಚೆ ಗೌಡ, ಪೂಜಾರಿ ವೆಂಕಪ್ಪ, ರಾಜಶೇಖರ, ಗೋ ಪರಿವಾರದ ಸಂಯೋಜಕ ಮಧು ಗೋಮತಿ ಇನ್ನಿತರರು ಹಾಜರಿದ್ದರು.

Maluru

Maluru

shrinivasapura

shrinivasapura

kolara

Kolar

Bangarpet

Bangarpet

Facebook Comments Box