ಆದಿ ಶಂಕರರಿಂದ ಆರಂಭಗೊಂಡ ಶ್ರೀರಾಮಚಂದ್ರಾಪುರಮಠವು ಸಮಾಜದ ಅನೇಕ ಕ್ಷೇತ್ರಗಳಿಗೆ ತನ್ನ ಕೊಡುಗೆಯನ್ನು ನೀಡುತ್ತ ಬಂದಿದ್ದು ಶಿಕ್ಷಣಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಆಧುನಿಕಶಿಕ್ಷಣವನ್ನು ಪ್ರಾಚೀನಭಾರತೀಯ ಸಂಸ್ಕೃತಿಯ ವೈಭವದೊಂದಿಗೆ ಸಮಾಂತರವಾಗಿ ಜೋಡಿಸುವ ಅಗತ್ಯತೆಯನ್ನು ಮನಗಂಡು ಶ್ರೀಗಳು ವೇದ-ಪಾಠಶಾಲೆಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಆಧುನಿಕಶಿಕ್ಷಣದವರೆಗೆ ವಿಸ್ತರಿಸಿದರು.ಇಂದು ಶ್ರೀರಾಮಚಂದ್ರಾಪುರಮಠವು ಕರ್ನಾಟಕ ಮತ್ತು ಕೇರಳಗಳಲ್ಲಿ ಧರ್ಮಚಕ್ರ ಸಂಸ್ಥಾನ ಶಾಲೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿರುವುದು ಶ್ಲಾಘನೀಯ.

ಎಲ್ಲ ಧರ್ಮಚಕ್ರ ಸಂಸ್ಥಾನ ಶಾಲೆಗಳೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಆಧುನಿಕ ಕೌಶಲಗಳನ್ನು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಬೆಳೆಸಿ ತನ್ಮೂಲಕ ಆದರ್ಶ ಸಮಾಜನಿರ್ಮಾಣ ಮಾಡುವ ಪರಮೋದ್ದೇಶವನ್ನು ಹೊಂದಿವೆ.

ಈ ಎಲ್ಲ ಶಾಲೆಗಳೂ ಪೂಜ್ಯ ಗುರುಗಳ ದಿವ್ಯಾನುಗ್ರಹದೊಂದಿಗೆ..Emami foundation, Gumbi software, Sri Siddhanth foundation, Infosys foundation ಹಾಗೂ ಇನ್ನಿತರೆ ದಾನಿಗಳ ಸಹಕಾರದೊಂದಿಗೆ ಗುಣಾತ್ಮಕ ಮತ್ತು ರಚನಾತ್ಮಕ ಅಭಿವೃದ್ಧಿ ಹೂಂದುತ್ತಿವೆ.

ಶ್ರೀಮಠದ ವಿದ್ಯಾವಿಭಾಗದಿಂದ ಪೋಷಿಸಲ್ಪಡುವ ಎಲ್ಲ 9 ಶಾಲೆಗಳ ಮಾಹಿತಿಯನ್ನೊಳಗೊಂಡ interactive Magazine (i-magazine) ಪುಸ್ತಕದ ಪ್ರಥಮ ಪ್ರತಿಯು ಪರಮಪೂಜ್ಯ ಶ್ರೀ ಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅಮೃತಹಸ್ತಗಳಿಂದ ದಿನಾಂಕ 12-3-2015ರಂದು ಲೋಕಾರ್ಪಣೆಗೊಂಡಿತು.

ಧರ್ಮಚಕ್ರ ಸಂಸ್ಥಾನದಡಿಯಲ್ಲಿ ಬರುವ ಎಲ್ಲ ಶಾಲೆಗಳ ಅಂಕಿ ಅಂಶಗಳು, ಕಾರ್ಯ ಚಟುವಟಿಕೆಗಳ ಸಂಪೂರ್ಣ ಮಾಹಿತಿಯನ್ನು ಚಿತ್ರ, ಬರಹ, ವಿಡಿಯೋ ಹಾಗೂ ಧ್ವನಿಯ ಮೂಲಕ i-magazineನಲ್ಲಿ ನೀಡಲಾಗಿದೆ.ಇದರ ಕುರಿತು ಓದಿ ತಿಳಿಯಲು internet ಅವಶ್ಯವಿರುತ್ತದೆ. ಈ ಪುಸ್ತಿಕೆಯಲ್ಲಿ ಮೊದಲು ಕೇಂದ್ರೀಕರಿಸುವ ಶಾಲೆ-ಉತ್ತರ ಕನ್ನಡ ಜಿಲ್ಲೆಯ ಉತ್ತಮ ಶಾಲೆಗಳಲ್ಲಿ ಒಂದಾದ ಪ್ರಗತಿ ವಿದ್ಯಾಲಯ ಮೂರೂರು.

i-magನ ಮುಂಬರುವ ಮುದ್ರಣಗಳಲ್ಲಿ ಶ್ರೀಭಾರತೀಪೀಠ ಬದಿಯಡ್ಕ ಹಾಗೂ ಇತರೆ ಶಾಲೆಗಳ ಮಾಹಿತಿಯನ್ನು ಹೊರತರುವ ಗುರಿ ಹೊಂದಿದೆ.

i-magನ ಮುಂಬರುವ ಮುದ್ರಣಗಳು ಇನ್ನೂ ಹೆಚ್ಚು ಆಕರ್ಷಣೀಯವಾಗಿ, ಸೃಜನಾತ್ಮಕವಾಗಿ ಶಿಕ್ಷಕ-ವಿದ್ಯಾರ್ಥಿಗಳ ಹಾಗೂ ಪಾಲಕರ ಭಾವಗಳೊಂದಿಗೆ ಇನ್ನೂ ಉತ್ತಮವಾಗಿ ಹೊರತರುವ ಯೋಜನೆಯನ್ನು ಹೊಂದಿದೆ. i-mag ಪುಸ್ತಿಕೆಯು ಗುರು ಅನುಗ್ರಹದೊಂದಿಗೆ, ಓದುಗರ ಪ್ರತಿಕ್ರಿಯೆ ಮತ್ತು ಸಲಹೆಗಳೊಂದಿಗೆ ಭವಿತವ್ಯದಲ್ಲಿ ಮತ್ತಷ್ಟು ಬೆಳೆಯಲೆಂದು ಹಾರೈಸುತ್ತೇವೆ.i-Magazine PDF: i-Magazine compressed
Facebook Comments